ಇನ್ಮುಂದೆ ಸುಪ್ರೀಂ ಕೋರ್ಟ್ ಆವರಣದಲ್ಲಿ ಸೆಲ್ಫಿ, ಫೋಟೋ, ರೀಲ್ಸ್ ಗೆ ನಿರ್ಬಂಧ
ನವದೆಹಲಿ: ಇನ್ಮುಂದೆ ಸುಪ್ರೀಂ ಕೋರ್ಟ್ ಆವರಣದಲ್ಲಿ ರೀಲ್ಸ್ ಮಾಡುವುದು, ಸೆಲ್ಪಿ ತೆಗೆಯುವುದು, ಫೋಟೋ ಕ್ಲಿಕ್ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಈ ನಿರ್ಬಂಧ ಉಲ್ಲಂಘಿಸಿದರೆ ಕಠಿಣ ಶಿಕ್ಷೆ ಯಾಗಲಿದೆ.
ಸೆಲ್ಸಿ ತೆಗೆಯುವುದು, ಫೋಟೋ ಕ್ಲಿಕ್ ಮಾಡುವುದು ಮತ್ತು ರೀಲ್ಸ್ ಮಾಡುವುದಕ್ಕೆ ನಿರ್ಬಂಧ ವಿಧಿಸಿ ಸುಪ್ರೀಂ ಕೋರ್ಟ್ ಸುತ್ತೋಲೆ ಹೊರಡಿಸಿದೆ. ಸುಪ್ರೀಂ ಕೋರ್ಟ್ ಅತಿ ಭದ್ರತಾ ವಲಯಗಳಲ್ಲಿ ಒಂದಾಗಿದ್ದು, ನ್ಯಾಯಾಲಯದ ಹುಲ್ಲು ಹಾಸಿನ ಪ್ರದೇಶಕ್ಕೂ ನಿಷೇಧ ವಿಸ್ತರಿಸಲಾಗಿದೆ.ವಕೀಲರು, ದಾವೆದಾರರು, ಇಂಟರ್ನಿಗಳು, ಕಾನೂನು ಗುಮಾಸ್ತರು, ಸಿಬ್ಬಂದಿ ಯಾ ಸಂದರ್ಶಕರಿಗೆ ಈ ಸುತ್ತೋಲೆ ಅನ್ವಯಿಸುತ್ತದೆ. ಆದರೆ, ಅಧಿಕೃತ ಬಳಕೆಗೆ ವಿನಾಯಿತಿ ನೀಡಲಾಗಿದೆ.
ಕಡಿಮೆ ಭದ್ರತಾ ವಲಯದ ವರ್ಗಕ್ಕೆ ಸೇರುವ ನಿರ್ದಿಷ್ಟ ಹುಲ್ಲು ಹಾಸಿನಲ್ಲಿ ಮಾತ್ರ ಸಂದರ್ಶನಗಳು, ನೇರ ಪ್ರಸಾರಗಳನ್ನು ನಡೆಸುವಂತೆ ಮಾಧ್ಯಮ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ. ಈ ನಿರ್ಬಂಧ ಉಲ್ಲಂಘಿಸಿದರೆ ಅತಿ ಭದ್ರತಾ ವಲಯದಿಂದ ಒಂದು ತಿಂಗಳ ಕಾಲ ಗಡಿಪಾರು ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ಬೀದಿ ನಾಯಿಗಳಿಗೆ ಆಹಾರ, ನಿರ್ಬಂಧಿತ ಪ್ರದೇಶದಲ್ಲಿ ಯಾರಾದರೂ ಛಾಯಾಚಿತ್ರ, ವೀಡಿಯೋ ಮಾಡಲು ಮುಂದಾದರೆ ಅವರನ್ನು ತಡೆಯಲು ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
