22/09/2026

Law Guide Kannada

Online Guide

ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಮಗನ ಅಕ್ರಮ ಬಂಧನ ಆರೋಪ: ತಂದೆಗೆ ಹೈಕೋರ್ಟ್ ಮಹತ್ವದ ಸೂಚನೆ

ಅಲಹಾಬಾದ್: ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಮಗನನ್ನು ತಂದೆ ಅಕ್ರಮ ಬಂಧನದಲ್ಲಿಟ್ಟ ಆರೋಪ ಹಿನ್ನೆಲೆಯಲ್ಲಿ ಮಗನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ತಂದೆಗೆ ಅಲಹಾಬಾದ್ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ.

ಹಿಂದೂ ಧರ್ಮದಿಂದ ಮುಸ್ಲೀಂಧರ್ಮಕ್ಕೆ ಮತಾಂತರಗೊಂಡಿದ್ದ ಆಯುಷ್ ಮಲಿಕ್ (31) ಅವರು ತಮ್ಮ ಸ್ನೇಹಿತ ಸುಲ್ತಾನ್ ಮೂಲಕ ಸಲ್ಲಿಸಿದ್ದ ‘ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂದೀಪ್ ಜೈನ್ ಅವರಿದ್ದ ಪೀಠವು ಈ ಆದೇಶ ಹೊರಡಿಸಿದೆ.

ಹಾಗೆಯೇ ಮಲಿಕ್ ಯಾವುದೇ ಬಲವಂತ, ಅನಗತ್ಯ ಪ್ರಭಾವ ಅಥವಾ ಆಮಿಷಕ್ಕೆ ಒಳಗಾಗದೆ ಸ್ವಇಚ್ಛೆಯಿಂದ ಹಿಂದೂ ಧರ್ಮವನ್ನು ತ್ಯಜಿಸಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ. ಅಲ್ಲದೆ, ತಂದೆ ದೇವ್ರಾಜ್ ಸಿಂಗ್ ಲಿಕ್ ಅವರ ಇಚ್ಛೆಗೆ ವಿರುದ್ಧವಾಗಿ ಚಾಂದಿನಿ ಖುರೇಷಿ ಅವರನ್ನು ವಿವಾಹವಾಗಿರುವುದಾಗಿ ಮಲಿಕ್ ನ್ಯಾಯಾಲಯಕ್ಕೆ ತಿಳಿಸಿದರು.

ಆಯುಷ್ ಮಲ್ಲಿಕ್ ಅವರ ಮತಾಂತರಕ್ಕೆ ತಂದೆ ದೇವ್ರಾಜ್ ಸಿಂಗ್ ಲಿಕ್ ವಿರೋಧ ವ್ಯಕ್ತಪಡಿಸಿ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಈ ಮಧ್ಯೆ ಮಗನ ಈ ನಡೆಗೆ ನೊಂದ ತಂದೆ, ಶಾಮ್ಲ ಜಿಲ್ಲೆಯ ಶಾಮ್ಲ ಪೊಲೀಸ್ ಠಾಣೆಯಲ್ಲಿ ಮಲಿಕ್ ಅವರ ಪತ್ನಿ ಹಾಗೂ ಆಕೆಯ ಸಂಬಂಧಿಕರ ವಿರುದ್ಧ ‘ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆ 2021’ ಮತ್ತು ಃಓSನ ಕೆಲವು ನಿಬಂಧನೆಗಳ ಅಡಿಯಲ್ಲಿ ಈIಖ ದಾಖಲಿಸಿದ್ದಾರೆ.

ತಂದೆಯೊಂದಿಗೆ ಶಾಮೀಲಾಗಿ ಹಾಗೂ ಅವರ ಕುಮ್ಮಕ್ಕಿನಿಂದ ರಾಜ್ಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಮಲಿಕ್ ಅವರನ್ನು ಕಾನೂನುಬಾಹಿರವಾಗಿ ಬಂಧನದಲ್ಲಿರಿಸಲು ಸಹಕರಿಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಆರೋಪಿಸಿದರು.

ಸೆ.9ರಂದು ಹೊರಡಿಸಿದ ಆದೇಶದಲ್ಲಿ, ರಿಟ್ ಅರ್ಜಿಯೊಂದಿಗೆ ಲಗತ್ತಿಸಲಾಗಿದ್ದ ದಾಖಲೆಗಳನ್ನು ಪರಿಶೀಲಿಸಿದಾಗ ಆಯುಷ್ ಮಲಿಕ್ ಅವರು ಸ್ವಯಂಪ್ರೇರಣೆಯಿಂದ ಹಿಂದೂ ಧರ್ಮವನ್ನು ತ್ಯಜಿಸಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದು ಮತ್ತು ತಂದೆಯ ಇಚ್ಛೆಗೆ ವಿರುದ್ಧವಾಗಿ ಚಾಂದಿನಿ ಖುರೇಷಿ ಅವರನ್ನು ವಿವಾಹವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ನ್ಯಾಯಾಲಯ ಹೇಳಿತು.

‘ಮಲಿಕ್ ಅವರ ಈ ಕೃತ್ಯಗಳ ಪರಿಣಾಮವಾಗಿಯೇ ಅವರ ತಂದೆ ಎಫ್ ಐಆರ್ ದಾಖಲಿಸಿರುವುದೂ ಕಂಡುಬರುತ್ತದೆ. ಮಲಿಕ್ ಅವರ ಈ ಕೃತ್ಯಗಳ ಪರಿಣಾಮವಾಗಿಯೇ ಅವರ ತಂದೆ ಎಫ್ ಐಆರ್ ದಾಖಲಿಸಿರುವುದೂ ಕಂಡುಬರುತ್ತದೆ’ ಎಂದು ನ್ಯಾಯಾಲಯ ತಿಳಿಸಿತು.

ತಮ್ಮ ಕಕ್ಷಿದಾರರನ್ನು ಕಾನೂನುಬಾಹಿರವಾಗಿ ಬಂಧನದಲ್ಲಿರಿಸಲಾಗಿದೆ ಮತ್ತು ಅಂತಹ ಬಂಧನಕ್ಕೆ ರಾಜ್ಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕರಿಸಿದ್ದಾರೆ ಎಂಬ ಅರ್ಜಿದಾರರ ಪರ ವಕೀಲರ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ ಎಂದು ನ್ಯಾಯಾಲಯ ಹೇಳಿತು.

ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠವು, ಮಲಿಕ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಮಲ್ಲಿಕ್ ತಂದೆ ದೇವ್ರಾಜ್ ಸಿಂಗ್ ಲಿಕ್ ಗೆ ಸೂಚಿಸಿತು.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.