alimony Archives - Law Guide Kannada https://www.lawguidekannada.com/tag/alimony/ Online Guide Fri, 26 Sep 2025 12:07:46 +0000 en-US hourly 1 https://wordpress.org/?v=6.9.4 http://www.lawguidekannada.com/wp-content/uploads/2022/09/cropped-Logo_512-32x32.jpg alimony Archives - Law Guide Kannada https://www.lawguidekannada.com/tag/alimony/ 32 32 ನಡೆಯದ ಫಸ್ಟ್ ನೈಟ್: ಪತಿ ನಪುಂಸಕನೆಂದು 2 ಕೋಟಿ ರೂ. ಪರಿಹಾರಕ್ಕೆ ಡಿಮ್ಯಾಂಡ್ ಮಾಡಿದ ಪತ್ನಿ http://www.lawguidekannada.com/first-night-that-didnt-happen-wife-demands-rs-2-crore-compensation-for-husband-alleging-impotence/ Fri, 26 Sep 2025 12:07:46 +0000 http://www.lawguidekannada.com/?p=2463 ಬೆಂಗಳೂರು: ಮದುವೆಯಾದ ಮೊದಲ ರಾತ್ರಿಯಲ್ಲಿ ಪತಿ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿಲ್ಲ. ಆತ ನಪುಂಸಕ. ಹೀಗಾಗಿ ತನೆಗೆ 2 ಕೋಟಿ...

The post ನಡೆಯದ ಫಸ್ಟ್ ನೈಟ್: ಪತಿ ನಪುಂಸಕನೆಂದು 2 ಕೋಟಿ ರೂ. ಪರಿಹಾರಕ್ಕೆ ಡಿಮ್ಯಾಂಡ್ ಮಾಡಿದ ಪತ್ನಿ appeared first on Law Guide Kannada.

]]>
ಬೆಂಗಳೂರು: ಮದುವೆಯಾದ ಮೊದಲ ರಾತ್ರಿಯಲ್ಲಿ ಪತಿ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸಿಲ್ಲ. ಆತ ನಪುಂಸಕ. ಹೀಗಾಗಿ ತನೆಗೆ 2 ಕೋಟಿ ಜೀವನಾಂಶ ನೀಡಬೇಕೆಂದು ಪತ್ನಿ ಬೇಡಿಕೆಯಿಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೌದು, ಕಳೆದ 5 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಜೋಡಿ ಕೌಟುಂಬಿಕ ಕಲಹದಿಂದಾಗಿ ಬೇರ್ಪಡುವ ಪರಿಸ್ಥಿತಿಗೆ ಬಂದು ತಲುಪಿದ್ದು . ಮದುವೆಯಾಗಿ ತಿಂಗಳುಗಳೇ ಕಳೆದರೂ ಪತಿ ತನ್ನೊಂದಿಗೆ ದೈಹಿಕ ಸಂಪರ್ಕ ನಡೆಸುತ್ತಿಲ್ಲ. ಲೈಂಗಿಕ ಸಂಬಂಧ ಹೊಂದುತ್ತಿಲ್ಲ ಎಂದು ಆರೋಪಿಸಿ ಯುವತಿಯೊಬ್ಬಳು ಬರೊಬ್ಬರಿ 2 ಕೋಟಿ ರೂ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಾರೆ.

ಪತ್ನಿಯ ಇಂತಹ ಬೇಡಿಕೆಯಿಂದ ಕಂಗಾಲಾದ ಪತಿ ಪ್ರವೀಣ್ ಹಾಗೂ ಅವರ ಪೋಷಕರು ಗೋವಿಂದರಾಜ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ಪತ್ನಿಯ ಗಲಾಟೆಯಿಂದ ಪತಿ ಪ್ರವೀಣ್ ಹಾಗೂ ಆತನ ಪೋಷಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಪ್ರವೀಣ್ ಎಂಬ ಯುವಕ ಮೇ 5ರಂದು ಚಿಕ್ಕಮಗಳೂರು ಜಿಲ್ಲೆಯ ಯುವತಿಯನ್ನು ವಿವಾಹವಾಗಿದ್ದ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ವಿವಾಹ ನಡೆದಿತ್ತು. ಮದುವೆಯಾದ ಮೊದಲ ರಾತ್ರಿ ಪತಿ ಪ್ರವೀಣ್, ಪತ್ನಿಯನ್ನು ಮುಟ್ಟಲು ಹಿಂದೇಟು ಹಾಕಿದ್ದಾನೆ ಎಂದು ಪತಿ ಪತ್ನಿ ನಪುಂಸಕ ಎಂದು ಆರೋಪ ಮಾಡಿದ್ದಾಳೆ. ನಂತರ ತಾಳ್ಮೆ ಕಳೆದುಕೊಂಡ ಪತ್ನಿ ಹಾಗೂ ಆಕೆಯ ಪೋಷಕರು ಆಗಸ್ಟ್ 17ರಂದು ಪತಿ ಪ್ರವೀಣ್ ಮನೆಗೆ ನುಗ್ಗಿ ಹಲ್ಲೆ ನಡೆಸಿ, ದಾಂಧಲೆ ಮಾಡಿದ್ದಾರೆ ಎಂದು ದೂರಲಾಗಿದೆ.

ಗಂಡ ಪ್ರವೀಣ್ನ ಪುರುಷತ್ವದ ಬಗ್ಗೆಯೇ ಪತ್ನಿಗೆಅನುಮಾನ ಶುರುವಾಗಿದ್ದು, ಹೀಗಾಗಿ ಗಂಡನ ಪುರುಷತ್ವದ ಬಗ್ಗೆ ವೈದ್ಯರ ಬಳಿ ಪರೀಕ್ಷೆ ಕೂಡ ಮಾಡಿಸಿದ್ದಾರೆ. ಪರೀಕ್ಷೆಯಲ್ಲಿ ಪತಿ ಪ್ರವೀಣ್ ಲೈಂಗಿಕ ಕ್ರಿಯೆ ನಡೆಸಲು ಸಮರ್ಥನಾಗಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದರಾ. ಆದರೆ, ಮಾನಸಿಕ ಒತ್ತಡದಿಂದ ಸ್ವಲ್ಪ ಹಿಂದೇಟು ಹಾಕಿರಬಹುದು ಎಂದು ವೈದ್ಯರು ಹೇಳಿದ್ದಾರೆ.

ಆದರೂ ಸಹ ಪತ್ನಿ ತನ್ನ ಗಂಡ ನಪುಂಸಕ . ಹೀಗಾಗಿ 2 ಕೋಟಿ ರೂ ಪರಿಹಾರ ನೀಡುವಂತೆ ಪಟ್ಟು ಹಿಡಿದಿದ್ದಾಳೆ. ಎರಡು ಕೋಟಿ ರೂಪಾಯಿ ಕೊಡದ ಹಿನ್ನೆಲೆ, ಆಕೆಉ ಕುಟುಂಬದವರು ಪ್ರವೀಣ್ ಅವರ ಗೋವಿಂದರಾಜ ನಗರದಲ್ಲಿರುವ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಪ್ರವೀಣ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ನಡೆಯದ ಫಸ್ಟ್ ನೈಟ್: ಪತಿ ನಪುಂಸಕನೆಂದು 2 ಕೋಟಿ ರೂ. ಪರಿಹಾರಕ್ಕೆ ಡಿಮ್ಯಾಂಡ್ ಮಾಡಿದ ಪತ್ನಿ appeared first on Law Guide Kannada.

]]>
ಗಂಡನಿಂದ ತಿಂಗಳಿಗೆ 6 ಲಕ್ಷ ರೂ. ಜೀವನಾಂಶಕ್ಕೆ ಬೇಡಿಕೆ ಇಟ್ಟ ಮಹಿಳೆ: ನ್ಯಾಯಾಧೀಶರೇ ದಂಗು..! http://www.lawguidekannada.com/the-family-court-awarded-the-wife-a-monthly-allowance-of-rs-5000-alimony-was-fixed-but-not-agreeing-to-this-because-he-lives-a-luxurious-life-he-gets-rs-6-lakh-per-month-the-woman-filed-an-appeal-seek/ Fri, 13 Sep 2024 00:50:04 +0000 https://www.lawguidekannada.com/?p=750 ವಿಚ್ಚೇದಿತ ಗಂಡನಿಂದ ತಿಂಗಳಿಗೆ ಆರು ಲಕ್ಷ ರೂ. ಜೀವನಾಂಶ ನೀಡುವಂತೆ ನಿರ್ದೇಶಿಸಬೇಕು ಎಂದು ಮಹಿಳೆ ಕರ್ನಾಟಕ ಹೈಕೋರ್ಟ್ ಗೆ ಅರ್ಜಿ...

The post ಗಂಡನಿಂದ ತಿಂಗಳಿಗೆ 6 ಲಕ್ಷ ರೂ. ಜೀವನಾಂಶಕ್ಕೆ ಬೇಡಿಕೆ ಇಟ್ಟ ಮಹಿಳೆ: ನ್ಯಾಯಾಧೀಶರೇ ದಂಗು..! appeared first on Law Guide Kannada.

]]>
ವಿಚ್ಚೇದಿತ ಗಂಡನಿಂದ ತಿಂಗಳಿಗೆ ಆರು ಲಕ್ಷ ರೂ. ಜೀವನಾಂಶ ನೀಡುವಂತೆ ನಿರ್ದೇಶಿಸಬೇಕು ಎಂದು ಮಹಿಳೆ ಕರ್ನಾಟಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ವೇಳೆ, ಸ್ವತಃ ನ್ಯಾಯಾಧೀಶರೇ ದಂಗಾದ ಘಟನೆ ನಡೆದಿದೆ.

ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಪೀಠ, ಅಷ್ಟೊಂದು ಖರ್ಚು ಮಾಡುವುದಿದ್ದರೆ ಆಕೆಯೇ ದುಡಿಯಲಿ ಎಂದು ಮೌಖಿಕವಾಗಿ ಎಚ್ಚರಿಕೆ ನೀಡಿದೆ. ಪ್ರಕರಣದ ವಿಚಾರಣೆಯ ಕುರಿತ ವೀಡಿಯೋ ವೈರಲ್ ಆಗಿದೆ.

ಕೌಟುಂಬಿಕ ನ್ಯಾಯಾಲಯ ಪತ್ನಿಗೆ ಮಾಸಿಕ ರೂ. 5000/- ಜೀವನಾಂಶ ನಿಗದಿಪಡಿಸಿತ್ತು. ಆದರೆ ಇದಕ್ಕೆ ಒಪ್ಪದೆ ಐಷಾರಾಮಿ ಜೀವನ ನಡೆಸುವ ಕಾರಣಕ್ಕೆ ತನಗೆ ತಿಂಗಳಿಗೆ 6 ಲಕ್ಷ ರೂ. ಜೀವನಾಂಶ ಕೊಡಿಸಬೇಕೆಂದು ಕೋರಿ ಮಹಿಳೆ ಮೇಲ್ಮನವಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾ. ಲಲಿತಾ ಕನ್ನೆಘಂಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ನ್ಯಾಯಾಲಯ ಪ್ರಕ್ರಿಯೆ ದುರ್ಬಳಕೆ ಮಾಡುವುದರ ಬಗ್ಗೆ ಅರ್ಜಿದಾರರನ್ನು ಎಚ್ಚರಿಸಿತು. ಈ ಪ್ರಕರಣದ ಮೂಲಕ ಕಾನೂನು ದುರ್ಬಳಕೆ ಮಾಡುವವರಿಗೆ ಸ್ಪಷ್ಟ ಸಂದೇಶ ಹೊರಡಿಸಲಾಗುವುದು ಎಂದು ಖಡಕ್ ಆಗಿ ಹೇಳಿತು.

ಅರ್ಜಿದಾರ ಮಹಿಳೆಯ ಪರ ವಾದ ಮಂಡಿಸಿದ ವಕೀಲರು, ಅರ್ಜಿದಾರರ ಪತಿ ಬ್ಯಾಂಡೆಡ್ ಡ್ರೆಸ್, ಶೂಗಳನ್ನು ಧರಿಸುತ್ತಾರೆ. ಹಾಗಾಗಿ, ಮಹಿಳೆಗೂ ಪ್ರತಿ ತಿಂಗಳು ರೂ. 15000/- ಶೂ ಹಾಗೂ ಉಡುಪಿ ಖರೀದಿಗೆ ಬೇಕು. ಅರ್ಜಿದಾರರಿಗೆ ಪೌಷ್ಟಿಕ ಆಹಾರದ ಅಗತ್ಯವಿದೆ. ಮನೆಯಲ್ಲಿ ತಯಾರಿಸುವ ಆಹಾರಕ್ಕಾಗಿ ಆಕೆಗೆ ತಿಂಗಳಿಗೆ 60 ಸಾವಿರ ರೂ. ಬೇಕು, ಇನ್ನು ಒಂದಷ್ಟು ಸಾವಿರ ಮನೆಯ ಹೊರಗಿನ ತಿಂಡಿ-ತಿನಿಸುಗಳಿಗೆ ಬೇಕಾಗುತ್ತದೆ. ಇನ್ನು ಪ್ರತಿ ತಿಂಗಳಿಗೆ ನಾಲ್ಕರಿಂದ ಐದು ಲಕ್ಷ ರೂ. ಮೊಣಕಾಲಿನ ನೋವಿಗೆ ಔಷಧಿ ಮತ್ತು ಫಿಸಿಯೋಥೆರಪಿಗೆ ಖರ್ಚಾಗುತ್ತದೆ ಎಂದು ಪಟ್ಟಿ ಮಾಡಿದ್ದಾರೆ.

ಇಷ್ಟೆಲ್ಲ ಪಟ್ಟಿ ನೀಡಿದ ಬಳಿಕ, ಕನಿಷ್ಟ ಐದು ಲಕ್ಷ ರೂ.ಗಳನ್ನಾದರೂ ನೀಡುವಂತೆ ವಿಚ್ಚೇದಿತ ಪತಿಗೆ ನಿರ್ದೇಶಿಸಬೇಕು ಎಂದು ಮಹಿಳೆಯ ಪರ ವಕೀಲರು ನ್ಯಾಯಪೀಠವನ್ನು ಕೋರಿಕೊಂಡರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ಚೌಕಾಸಿ ಮಾಡಲು ಇದು ಮಾರುಕಟ್ಟೆಯಲ್ಲ. ಅವರಿಗೆ ನೀವಾದರೂ ತಿಳಿ ಹೇಳಿ, ಆಕೆಯ ನೈಜ ಅವಶ್ಯಕತೆಗಳಿಗೆ ಎಷ್ಟು ಬೇಕು ಎಂದು ಸ್ಪಷ್ಟಪಡಿಸಿದರೆ ಪರಿಹಾರ ನಿರ್ಧರಿಸಬಹುದು. ಇಲ್ಲದಿದ್ದರೆ ಅರ್ಜಿಯನ್ನು ವಜಾ ಮಾಡುವುದಾಗಿ ನ್ಯಾಯಪೀಠ ಎಚ್ಚರಿಸಿತು.

ಅರ್ಜಿದಾರರು ತಿಂಗಳಿಗೆ 6,16,300/- ರೂ. ಪ್ರತಿ ತಿಂಗಳು ಜೀವನಾಂಶವಾಗಿ ಬೇಕು ಎಂದು ಬೇಡಿಕೆ ಇಟ್ಟಿರುವ ಬಗ್ಗೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು. ಜೀವನಾಂಶ ಯಾವುದೇ ಕಾರಣಕ್ಕೂ ಗಂಡನಿಗೆ ಶಿಕ್ಷೆಯಾಗಬಾರದು. ಅಷ್ಟೊಂದು ಹಣ ಖರ್ಚು ಮಾಡಲು ಬಯಸಿದರೆ ಆಕೆಯೇ ಸಂಪಾದಿಸಲಿ. ಗಂಡನ ಮೇಲೆ ಏಕೆ ಅವಲಂಬಿತರಾಗಬೇಕು. ಆಕೆಗೆ ಕುಟುಂಬದ ಅನ್ಯ ಯಾವುದೇ ಜವಾಬ್ದಾರಿ ಇಲ್ಲ. ಮಕ್ಕಳನ್ನು ಸಾಕಬೇಕೆಂದಿಲ್ಲ. ಸ್ವಂತ ಖರ್ಚಿಗೆ ಇಷ್ಟೊಂದು ದೊಡ್ಡ ಮೊತ್ತದ ಬೇಡಿಕೆ ಇಟ್ಟಿರುವುದು ಅಸಮಂಜಸ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ಗಂಡನಿಂದ ತಿಂಗಳಿಗೆ 6 ಲಕ್ಷ ರೂ. ಜೀವನಾಂಶಕ್ಕೆ ಬೇಡಿಕೆ ಇಟ್ಟ ಮಹಿಳೆ: ನ್ಯಾಯಾಧೀಶರೇ ದಂಗು..! appeared first on Law Guide Kannada.

]]>