ತೀರ್ಪಿನ ಪ್ರಮಾಣಿತ ಪ್ರತಿ ಸಲ್ಲಿಸದೆ ಕಾನೂನುಬದ್ಧ ಅಪೀಲನ್ನುಪರಿಗಣಿಸಲು ಸಾಧ್ಯವಿಲ್ಲ- ಸುಪ್ರೀಂಕೋರ್ಟ್
ನವದೆಹಲಿ: ಕಾನೂನುಬದ್ದ ಅಪೀಲುಗಳಿಗೆ ಪ್ರಶ್ನಿತ ತೀರ್ಪಿನ ಪ್ರಮಾಣಿತ ಪ್ರತಿ ಸಲ್ಲಿಕೆ ಕಡ್ಡಾಯ . ಪ್ರಶ್ನಿತ ತೀರ್ಪಿನ ಪ್ರಮಾಣಿತ ಪ್ರತಿಯನ್ನು ಸಲ್ಲಿಸದೆ ಕಾನೂನುಬದ್ಧ ಅಪೀಲನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಷನಲ್ ಕಂಪನಿ ಲಾ ಅಪೀಲೇಟ್ ಟ್ರಿಬ್ಯುನಲ್ ತೀರ್ಪನ್ನು ಪ್ರಶ್ನಿಸಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ ಸಿವಿಲ್ ಅಪೀಲ್ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ನ್ಯಾಯಪೀಠವು, ಅಪೀಲುದಾರರು ಪ್ರಶ್ನಿತ ತೀರ್ಪಿನ ಪ್ರಮಾಣಿತ ಪ್ರತಿಯನ್ನು ಸಲ್ಲಿಸುವುದರಿಂದ ವಿನಾಯಿತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ, ಅಪೀಲನ್ನು ಮರುಸಲ್ಲಿಸಲು 102 ದಿನಗಳ ವಿಳಂಬವಾಗಿದ್ದರೂ, ಪ್ರಮಾಣಿತ ಪ್ರತಿ ಪಡೆಯಲು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಅರ್ಜಿಯಲ್ಲಿ ವಿವರಿಸಿಲ್ಲ ಎಂಬುದನ್ನು ಗಮನಿಸಿತು. ಈ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ನಿಯಮಗಳು, 2013ರ ಆದೇಶ ಘಿIಘಿ ನಿಯಮ 40 ಅನ್ನು ಉಲ್ಲೇಖಿಸಿ, ಪ್ರಶ್ನಿಸಲಾದ ತೀರ್ಪಿನ ಪ್ರಮಾಣಿತ ಪ್ರತಿಯಿಲ್ಲದೆ ಕಾನೂನುಬದ್ದ ಅಪೀಲನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿತು.
ಇದಕ್ಕೂ ಜೊತೆಗೆ, ನಿರ್ದಿಷ್ಟ ಕಾಲಮಿತಿಯೊಳಗೆ ಸಲ್ಲಿಸಬೇಕಾದ ಅಪೀಲುಗಳಲ್ಲಿ ವಿಳಂಬದ ವಿಷಯವನ್ನು ಪರಿಶೀಲಿಸುವಾಗ ರಿಜಿಸ್ಟ್ರಿ ಹೆಚ್ಚು ಜಾಗರೂಕತೆಯಿಂದ ನಡೆದುಕೊಳ್ಳಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿತು. ಈ ಪ್ರಕರಣದಲ್ಲಿ ನೀಡಿದ ನಿರ್ದೇಶನದ ಅನುಸರಣೆಯಾಗಿ, ಸುಪ್ರೀಂ ಕೋರ್ಟ್ ಸುತ್ತೋಲೆಯನ್ನು ಹೊರಡಿಸಿದ್ದು, ಪ್ರಶ್ನಿತ ತೀರ್ಪಿನ ಪ್ರಮಾಣಿತ ಪ್ರತಿಯಿಲ್ಲದೆ ಯಾವುದೇ ಕಾನೂನುಬದ್ದ ಅಪೀಲನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 2025ರ ಸಿವಿಲ್ ಅಪೀಲ್ D.No. 57050 (Central Bank of India v. Bijendra Kumar Jha & Others) ಪ್ರಕರಣದಲ್ಲಿ 27.02.2026ರಂದು ನೀಡಿದ ನಿರ್ದೇಶನಗಳ ಅನ್ವಯ, ಸುಪ್ರೀಂ ಕೋರ್ಟ್ ನಿಯಮಗಳು, 2013ರ ಆದೇಶ ಘಿIಘಿ ನಿಯಮ 3(2) ಹಾಗೂ 40 ಪ್ರಕಾರ, ಪ್ರಶ್ನಿಸಲಾದ ತೀರ್ಪಿನ ಪ್ರಮಾಣಿತ ಪತಿಯಿಲ್ಲದೆ ಯಾವುದೇ ಕಾನೂನು ಬದ್ದ ಅಪೀಲನ್ನು ಪರಿಗಣಿಸಲಾಗುವುದಿಲ್ಲ.
ಆದ್ದರಿಂದ, ಇನ್ನುಮುಂದೆ ಎಲ್ಲಾ ಕಾನೂನುಬದ್ಧ ಅಪೀಲುಗಳಿಗೆ ಪ್ರಶ್ನಿಸಲಾದ ತೀರ್ಪಿನ ಪ್ರಮಾಣಿತ ಪ್ರತಿಯನ್ನು ಕಡ್ಡಾಯವಾಗಿ ಜೊತೆಯಾಗಿ ಸಲ್ಲಿಸಬೇಕು.” ಎಂಬುದಾಗಿ ಹೇಳಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
