ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ: ಸುಪ್ರೀಂಕೋರ್ಟ್ ತೀವ್ರ ಕಳವಳ
ನವದೆಹಲಿ: ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯವು ರೋಗಪೀಡಿತ ಸಮಾಜದ ಸೂಚಕವಾಗಿದೆ ಎಂದು ಸುಪ್ರೀಂ ಕೋರ್ಟ್ ತೀವ್ರಕಳವಳ ವ್ಯಕ್ತಪಡಿಸಿದೆ.
2012ರ ಅಕ್ಟೋಬರ್ ನಲ್ಲಿ ಪತ್ನಿಗೆ ಬೆಂಕಿ ಹಚ್ಚಿ ಕೊಂದಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸಂಜಯ್ ಕರೋಲ್ ಹಾಗೂ ಎನ್.ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು, ಕೌಟುಂಬಿಕ ದೌರ್ಜನ್ಯ ಎಂಬುದು ರೋಗಪೀಡಿತ ಸಾಮಾಜಿಕ ವ್ಯವಸ್ಥೆಯ ಸೂಚಕವಾಗಿದ್ದು, ಮಹಿಳೆಯರ ವಿರುದ್ಧದ ಅಪರಾಧಗಳ ಕುರಿತಾದ ಅಂಕಿ-ಅಂಶಗಳು ತೀವ್ರ ಕಳವಳಕಾರಿಯಾಗಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
‘ಭಾರತದಲ್ಲಿ ಗಣನೀಯ ಮಟ್ಟದ ಆರ್ಥಿಕ ಅಭಿವೃದ್ಧಿಯಾಗುತ್ತಿದೆ. ಸಾಕ್ಷರತೆ ಪ್ರಮಾಣ ಹಾಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯೂ ಹೆಚ್ಚುತ್ತಿದೆ. ಆದರೂ ಗ್ರಾಮೀಣ ಭಾಗಗಳಲ್ಲಿ, ಪಟ್ಟಣ ಪ್ರದೇಶಗಳಲ್ಲಿ ಪುರುಷ ಪ್ರಧಾನ ವ್ಯವಸ್ಥೆ ದೈನಂದಿನ ಜೀವನದ ಭಾಗವಾಗಿಯೇ ಉಳಿದಿದೆ. ಸಂವಿಧಾನವು ಲಿಂಗ ತಾರತಮ್ಯದ ವಿರುದ್ಧ ಸಮಾನತೆ ಮತ್ತು ಸ್ವಾತಂತ್ರ್ಯದ ಭರವಸೆಗಳನ್ನು ನೀಡುತ್ತದೆ. ಆದರೂ ಹಲವರಿಗೆ ಈ ಹಕ್ಕುಗಳು ಇನ್ನೂ ದಕ್ಕಿಲ್ಲ ಎಂಬುದಕ್ಕೆ ಈ ಪ್ರಕರಣಗಳೇ ಸಾಕ್ಷಿ’ ಎಂದೂ ನ್ಯಾಯಪೀಠವು ಪೀಠ ಹೇಳಿದೆ.
‘ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಮಾಹಿತಿ ಪ್ರಕಾರ, 2023ರಲ್ಲಿ 4.48 ಲಕ್ಷ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ದಾಖಲಾಗಿವೆ. ವರದಕ್ಷಿಣೆ ಕಿರುಕುಳದ ಪ್ರಕರಣಗಳೂ ಮುಂದುವರಿದಿದ್ದು, ಪ್ರತಿ ವರ್ಷ 6,000 ಜೀವಗಳು ಬಲಿಯಾಗುತ್ತಿವೆ.ಕಾನೂನುಬಾಹಿರ ಎಂದು ಹಲವು ವರ್ಷಗಳ ಹಿಂದೆಯೇ ಘೋಷಿಸಿರುವ ಪದ್ಧತಿಗಳ ಮುಂದುವರಿಕೆಯನ್ನು ಈ ಪ್ರಕರಣಗಳು ಬಹಿರಂಗಪಡಿಸುತ್ತಿವೆ’ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
