14/05/2026

Law Guide Kannada

Online Guide

2026ರ AOR ಪರೀಕ್ಷೆ ರದ್ದು: ಸುಪ್ರೀಂ ಕೋರ್ಟ್ಗೆ ಮೆಟ್ಟಿಲೇರಿದ ವಕೀಲರು

ನವದೆಹಲಿ: 2026 ರ ಅಡ್ವಕೇಟ್-ಆನ್-ರೆಕಾರ್ಡ್ (AoR) ಪರೀಕ್ಷೆಯನ್ನು ರದ್ದುಗೊಳಿಸುವ ಸುಪ್ರೀಂ ಕೋರ್ಟ್ ಆಡಳಿತಾತ್ಮಕ ನಿರ್ಧಾರವನ್ನ ಪ್ರಶ್ನಿಸಿ ವಕೀಲರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

2026 ರ ಎಒಆರ್ ಪರೀಕ್ಷೆಯನ್ನು ರದ್ದುಗೊಳಿಸಿದ ನಿರ್ಧಾರವನ್ನು ಪ್ರಶ್ನಿಸಿ ವಕೀಲರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಆದರೆ ಸುಪ್ರೀಂಕೋರ್ಟ್ ಈ ವಿಷಯವು ತುರ್ತು ಅಲ್ಲ ಮತ್ತು ಸರಿಯಾದ ಸಮಯದಲ್ಲಿ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಏಪ್ರಿಲ್ 30ರಂದು ರಿಜಿಸ್ಟ್ರಾರ್ (ನ್ಯಾಯಾಂಗ) ಮತ್ತು ಪರೀಕ್ಷಾ ಮಂಡಳಿಯ ಕಾರ್ಯದರ್ಶಿ ಹೊರಡಿಸಿದ ಅಧಿಸೂಚನೆಯಲ್ಲಿ ಈ ವರ್ಷ ಎಒಆರ್ ಪರೀಕ್ಷೆ ನಡೆಯುವುದಿಲ್ಲ ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ವಕೀಲರು ಈ ಅರ್ಜಿ ಸಲ್ಲಿಸಿದ್ದರು. 2025 ರ ಪರೀಕ್ಷೆಯಲ್ಲಿ ಅರ್ಹತೆ ಪಡೆಯದಿದ್ದರೂ 2026 ರಲ್ಲಿ ಮತ್ತೆ ಹಾಜರಾಗಲು ಅರ್ಹರಾಗಿದ್ದ ವಕೀಲರು ಈ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು.

ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ತಲ್ಯ ಬಾಗ್ಚಿ ಅವರಿದ್ದ ಪೀಠ ಈ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡಿದ್ದು ನ್ಯಾಯಪೀಠದ ಮುಂದೆ ಹಿರಿಯ ವಕೀಲ ದಾಮಾ ಶೇಷಾದ್ರಿ ನಾಯ್ತು ಅವರು ವಾದ ಮಂಡಿಸಿದರು. ಆದರೆ, ಈ ವಿಷಯವು ತುರ್ತು ಅಲ್ಲ ಮತ್ತು ಸರಿಯಾದ ಸಮಯದಲ್ಲಿ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ನ್ಯಾಯಪೀಠ ಸೂಚಿಸಿತು. ಅವರು ಮುಂದಿನ ವರ್ಷವೂ ಹಾಜರಾಗಬಹುದು. ನೋಡೋಣ ” ಎಂದು ಸಿಜೆಐ ಹೇಳಿದರು.

ವಕೀಲ ಮಂದೀಪ್ ಕಲ್ಮಾ ಮೂಲಕ ಅರ್ಜಿ ಸಲ್ಲಿಸಲಾಗಿದ್ದು, ಮೇ 4, 2026 ರ ಹೊತ್ತಿಗೆ ಒಟ್ಟು 3,791 AOR ಗಳು ಸುಪ್ರೀಂ ಕೋರ್ಟ್ ನಲ್ಲಿ ನೋಂದಾಯಿಸಲ್ಪಟ್ಟಿವೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.