ಮಗುವನ್ನು ದತ್ತು ಸ್ವೀಕರಿಸಿದ ಮಹಿಳೆ ಮಾತೃತ್ವ ರಜೆಗೆ ಅರ್ಹ- ಸುಪ್ರೀಂಕೋರ್ಟ್
ನವದೆಹಲಿ: ‘ಮಗುವನ್ನು ಕಾನೂನು ಬದ್ದವಾಗಿ ದತ್ತು ಪಡೆದುಕೊಂಡ ಮಹಿಳೆಯು ಮಾತೃತ್ವ ರಜೆಗೆ ಅರ್ಹರಾಗಿರುತ್ತಾರೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
3 ತಿಂಗಳಿಗೂ ಕಡಿಮೆ ವಯೋಮಾನದ ಮಗುವನ್ನು ದತ್ತು ತೆಗೆದುಕೊಳ್ಳುವ ಮಹಿಳೆ ಮಾತ್ರ ತಾಯ್ತನದ ರಜೆ ತೆಗೆದು ಕೊಳ್ಳಲು ಅರ್ಹ ಎಂಬ ನಿಬಂಧನೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದೀವಾಲಾ ಮತ್ತು ಆರ್.ಮಹಾದೇವನ್ ಅವರಿದ್ದ ವಿಭಾಗೀಯ ಪೀಠವು, ದತ್ತು ಸ್ವೀಕರಿಸಿದ ಮಗು ಜೈವಿಕ ಮಗುವಿಗಿಂತ ಭಿನ್ನವಲ್ಲ. ದತ್ತು ಸ್ವೀಕರಿಸಿದ ಮಹಿಳೆ ಮಾತೃತ್ವ ರಜೆಗೆ ಅರ್ಹರಾಗಿದ್ದಾರೆ ಎಂದು ಹೇಳಿದೆ.
‘ಮಗುವನ್ನು ಕಾನೂನು ಬದ್ದವಾಗಿ ದತ್ತು ಪಡೆದುಕೊಂಡ ಮಹಿಳೆಯು ಮಗುವಿನ ವಯಸ್ಸನ್ನು ಪರಿಗಣಿಸದೆ 12 ವಾರಗಳ ಮಾತೃತ್ವ ರಜೆಗೆ ಅರ್ಹರಾಗಿರುವರು. ಮೂರು ತಿಂಗಳಿಗೂ ಕಡಿಮೆ ವಯಸ್ಸಿನ ಮಗುವನ್ನು ದತ್ತು ತೆಗೆದುಕೊಳ್ಳುವ ಮಹಿಳೆ ಮಾತ್ರ ತಾಯ್ತನ ರಜೆಗೆ ಅರ್ಹರಾಗುತ್ತಾರೆ ಎಂಬ ಕಾನೂನನ್ನು ರದ್ದುಗೊಳಿಸಿದೆ.
ಸಾಮಾಜಿಕ ಭದ್ರತೆ ಸಂಹಿತೆ-2020ರ ಸೆಕ್ಷನ್ 60 (4)ರ ಅಡಿಯಲ್ಲಿ ವಯಸ್ಸಿನ ಆಧಾರದ ವರ್ಗೀಕರಣವು ಸಂವಿಧಾನದ 14 ಮತ್ತು 21ನೇ ವಿಧಿಗಳ ಉಲ್ಲಂಘನೆ ಯಾಗಿದೆ. ‘ಈಗ ಇರುವ ಕಾನೂನು ತಾರತಮ್ಯದಿಂದ ಕೂಡಿದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
