ಡಿಸ್ಟ್ರಿಕ್ಟ್ ಜಡ್ಜ್ ನಿವೃತ್ತಿ ವಯಸ್ಸು: ಜು.22ಕ್ಕೆ ಇಂಪ್ಲೀಡಿಂಗ್’ ಅರ್ಜಿ: ನ್ಯಾಯಾಂಗ ಹೋರಾಟಕ್ಕೆ ಮತ್ತಷ್ಟು ಬಲ ತುಂಬಲಿದ್ದಾರೆ ಮಂಡ್ಯ ಮೂಲದ ವಕೀಲರು
ನವದೆಹಲಿ: ದೇಶದ ಎಲ್ಲ ರಾಜ್ಯಗಳ ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 60 ರಿಂದ 61ಕ್ಕೆ ಹೆಚ್ಚಿಸಿ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಈ ಬೆನ್ನಲ್ಲೇ ಇದೀಗ ನ್ಯಾಯಾಂಗ ಹೋರಾಟಕ್ಕೆ ಮತ್ತಷ್ಟು ಬಲ ತುಂಬಲು ಮುಂದಾಗಿರುವ ಮಂಡ್ಯ ಮೂಲದ ವಕೀಲರು, ಆಂಧ್ರಪ್ರದೇಶ ಹಾಗೂ ಮಧ್ಯಪ್ರದೇಶ ರಾಜ್ಯಗಳ ಜಿಲ್ಲಾ ನ್ಯಾಯಾಧೀಶರ ಪರವಾಗಿ ಜುಲೈ 22ಕ್ಕೆ ಇಂಪ್ಲೀಡಿಂಗ್’ ಅರ್ಜಿ ಸಲ್ಲಿಸಲಿದ್ದಾರೆ.
ಮುಂಬರುವ ಜುಲೈ 22ರ ಮಹತ್ವದ ವಿಚಾರಣೆಯ ವೇಳೆ ಆಂಧ್ರಪ್ರದೇಶ ಹಾಗೂ ಮಧ್ಯಪ್ರದೇಶ ರಾಜ್ಯಗಳ ಜಿಲ್ಲಾ ನ್ಯಾಯಾಧೀಶರ ಪರವಾಗಿ ಕರ್ನಾಟಕದ ಹೆಮ್ಮೆಯ ವಕೀಲರು ಇಂಫೀಡಿಂಗ್ ಅರ್ಜಿಯನ್ನು (IA) ಸಲ್ಲಿಸುವ ಮೂಲಕ ನ್ಯಾಯಾಂಗ ಹೋರಾಟಕ್ಕೆ ಮತ್ತಷ್ಟು ಬಲ ತುಂಬಲಿದ್ದಾರೆ.
ಮೂಲತಃ ಕರ್ನಾಟಕದ ಮಂಡ್ಯ ಜಿಲ್ಲೆಯವರಾದ ಪ್ರಸ್ತುತ ದೆಹಲಿಯ ಸುಪ್ರೀಂ ಕೋರ್ಟ್ ನಲ್ಲಿ ವಕೀಲರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೆ.ಶ್ವೇತಾ ಹಾಗೂ ಎಚ್.ಬಿ. ಶಿವರಾಜು ಅವರು ಈ ಇಂಪ್ಲೀಡಿಂಗ್ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ.
ಜುಲೈ 22ರಂದು ಈ ಪ್ರಕರಣವು ಮತ್ತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನೊಳಗೊಂಡ ತ್ರಿಸದಸ್ಯ ಪೀಠದ ಮುಂದೆ ವಿಚಾರಣೆಗೆ ಬರಲಿದ್ದು, ಆ ಸಂದರ್ಭದಲ್ಲೇ ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶದ ಜಿಲ್ಲಾ ನ್ಯಾಯಾಧೀಶರ ಪರವಾಗಿ ಈ ಇಬ್ಬರು ವಕೀಲರು ಜಂಟಿಯಾಗಿ ಅರ್ಜಿಯನ್ನು ನ್ಯಾಯಪೀಠದ ಮುಂದೆ ಅಧಿಕೃತವಾಗಿ ಸಲ್ಲಿಸಲಿದ್ದಾರೆ.
‘ಆಲ್ ಇಂಡಿಯಾ ಜಡ್ಜಸ್ ಅಸೋಸಿಯೇಷನ್’ (Writ Petition (Civil) No. 1022/1989) ಸಂಬಂಧಿಸಿದ ವಿವಿಧ ಮಧ್ಯಂತರ ಅರ್ಜಿಗಳ (IA) ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠವು ಜುಲೈ 13 ರಂದು ನಡೆದ ವಿಚಾರಣೆಯಲ್ಲಿ ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸನ್ನು 61ಕ್ಕೆ ಹೆಚ್ಚಿಸುವ ಐತಿಹಾಸಿಕ ತೀರ್ಮಾನ ಕೈಗೊಂಡು ಕೇಂದ್ರ ಸರ್ಕಾರ, ಎಲ್ಲ ರಾಜ್ಯಗಳು ಹಾಗೂ ಹೈಕೋರ್ಟ್ ಗಳಿಗೆ ತುರ್ತು ನೋಟಿಸ್ ಜಾರಿ ಮಾಡಿದೆ.ಇದರ ಮುಂದಿನ ಭಾಗವಾಗಿ ಜುಲೈ 22ಕ್ಕೆ ವಿಚಾರಣೆ ನಿಗದಿಯಾಗಿದೆ.
ಈ ವಿಚಾರಣೆಯು ದೇಶದ ಒಟ್ಟಾರೆ ನ್ಯಾಯಾಂಗ ವ್ಯವಸ್ಥೆಯ ದಿಕ್ಕೂಚಿಯನ್ನು ನಿರ್ಧರಿಸಲಿದೆ. ಇನ್ನು ಇದೇ ದಿನ ಮಂಡ್ಯ ಮೂಲದ ವಕೀಲರು ಸಲ್ಲಿಸಲಿರುವ ಇಂಪ್ಲೀಡಿಂಗ್ ಅರ್ಜಿ ಇಡೀ ದೇಶದ ಕಾನೂನು ವಲಯದ ಗಮನ ಸೆಳೆಯಲಿದೆ ಎನ್ನಲಾಗುತ್ತಿದೆ.
ಹೋರಾಟಕ್ಕೆ ಕಾನೂನು ಬಲ:…..
‘ಆಲ್ ಇಂಡಿಯಾ ಜನ್ಮಸ್ ಅಸೋಸಿಯೇಷನ್’ ಸಲ್ಲಿಸಿರುವ ರಿಟ್ ಅರ್ಜಿಯ ಜತೆಗೇ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶದ ನ್ಯಾಯಾಂಗ ಅಧಿಕಾರಿಗಳ ಪರವಾಗಿ ಕೆ.ಶ್ವೇತಾ ಹಾಗೂ ಎಚ್.ಬಿ. ಶಿವರಾಜು ಸಲ್ಲಿಸಲಿರುವ ಅರ್ಜಿಯು ಈ ಹೋರಾಟಕ್ಕೆ ತಾರ್ಕಿಕ ಅಂತ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
