22/09/2026

Law Guide Kannada

Online Guide

ಕೊಲೆ ಕೇಸ್ ಗಳ ವಿಚಾರಣೆ ವರ್ಗಾವಣೆ : ನ್ಯಾಯಾಂಗ ವ್ಯವಸ್ಥೆ ಪ್ರಶ್ನಿಸಿದ ಜಡ್ಜ್

ಲಖನೌ: ಇತ್ತೀಚೆಗೆ ಕೆಲವೇ ತಿಂಗಳುಗಳಲ್ಲಿ 11 ಪ್ರತ್ಯೇಕ ಪ್ರಕರಣಗಳಲ್ಲಿ 23 ಮಂದಿಗೆ ಮರಣ ದಂಡನೆ ವಿಧಿಸಿದ ಕಾರಣಕ್ಕಾಗಿ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಮುಜಪ್ಟರ್ನಗರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರು ಪ್ರಕರಣಗಳ ವಿಚಾರಣೆ ವರ್ಗಾವಣೆಯಾಗಿದ ವಿಚಾರಕ್ಕೆ ಇದೀಗ ತಕರಾರು ಎತ್ತಿದ್ದಾರೆ.

ಹೌದು, ಕೊಲೆ ಆರೋಪಗಳಿಗೆ ಸಂಬಂಧಿಸಿದ ಹಲವು ಪ್ರಕರಣಗಳ ವಿಚಾರಣೆಯನ್ನು ತಮ್ಮ ನ್ಯಾಯಾಲಯದಿಂದ ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಿರುವುದಕ್ಕೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರು ಆಕ್ಷೇಪವೆತ್ತಿದ್ದಾರೆ

ಕಳೆದ ಕೆಲವು ತಿಂಗಳುಗಳಲ್ಲಿ 11 ಪ್ರತ್ಯೇಕ ಪ್ರಕರಣಗಳಲ್ಲಿ 23 ಮಂದಿಗೆ ಮರಣ ದಂಡನೆ ವಿಧಿಸಿದ ಕಾರಣಕ್ಕಾಗಿ ದಿವಾಕರ್ ಅವರು ದೇಶಾದ್ಯಂತ ಸುದ್ದಿಯಾಗಿದ್ದರು. ಈಗ 93 ಕೊಲೆ ಪ್ರಕರಣಗಳ ವಿಚಾರಣೆಯನ್ನು ತಮ್ಮ ನ್ಯಾಯಾಲಯದಿಂದ ವರ್ಗಾಯಿಸಿರುವ ಜಿಲ್ಲಾ ಪ್ರಧಾನ ನ್ಯಾಯಾಧೀಶರ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಕರಣವೊಂದರಲ್ಲಿ ಸಾಕ್ಷ್ಯಗಳ ಕೊರತೆಯ ಕಾರಣದಿಂದ ಆರೋಪಿಯನ್ನು ಖುಲಾಸೆಗೊಳಿಸಿ ಹೊರಡಿಸಿರುವ ಆದೇಶದಲ್ಲಿ, ‘ನ್ಯಾಯವನ್ನು ಒದಗಿಸುವುದು ನ್ಯಾಯಾಧೀಶರ ಕರ್ತವ್ಯವಾಗಿರುತ್ತದೆ. ಆದರೆ ಸ್ವತಃ ನ್ಯಾಯಾಧೀಶರೇ ‘ಅನ್ಯಾಯ’ವನ್ನು ಎದುರಿಸಿದರೆ ಅವರು ಎಲ್ಲಿಗೆ ಹೋಗಬೇಕು’ ಎಂದು ನ್ಯಾ.ದಿವಾಕರ್ ಬೇಸರ ತೋಡಿಕೊಂಡಿದ್ದಾರೆ.
ʼಹೇಡಿ ಎಂದು ಕರೆಸಿಕೊಳ್ಳುವುದಕ್ಕಿಂತ ಸಾಯುವುದೇ ಒಳ್ಳೆಯದು’ ಹಾಗೆಯೇ ‘ಬೇರೆ ಜಿಲ್ಲೆಗೆ ವರ್ಗಾವಣೆ ಮಾಡುವುದಾಗಿ ಉತ್ತರಪ್ರದೇಶದ ಮಾಫಿಯಾ ಅಥವಾ ಗ್ಯಾಂಗ್ಸ್ಟರ್ ಬೆದರಿಕೆ ಹಾಕಿದ್ದಾರೆ. ಆದರೆ ಎಂಥ ಸಂದರ್ಭದಲ್ಲಿಯೂ ನನ್ನ ವೃತ್ತಿಬದ್ಧತೆ ಬದಲಾಗುವುದಿಲ್ಲ. ಹೇಡಿ ಎಂದು ಕರೆಸಿಕೊಳ್ಳುವುದಕ್ಕಿಂತ ಸಾಯುವುದೇ ಒಳ್ಳೆಯದು’ ಎಂದು ನ್ಯಾಯಧೀಶ ದಿವಾಕರ್ ಖಡಕ್ ಆಗಿ ಹೇಳಿದ್ದಾರೆ.

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.