ಸರ್ಟಿಫಿಕೇಟ್ ಆಫ್ ಪ್ರಾಕ್ಟೀಸಿಂಗ್: ಮತ್ತೆ ಅರ್ಜಿ ಸಲ್ಲಿಕೆಗೆ ವಕೀಲರಿಗೆ ಗಡುವು ನಿಗದಿ
ಬೆಂಗಳೂರು: ವಕೀಲ ವೃತ್ತಿಯ ಕುರಿತು ಕರ್ನಾಟಕ ವಕೀಲರ ಪರಿಷತ್ತು ನೀಡುವ ಸರ್ಟಿಫಿಕೇಟ್ ಆಫ್ ಪ್ರಾಕ್ಟೀಸಿಂಗ್ ಗೆ ಸಂಬಂಧಿಸಿದಂತೆ ಪಟ್ಟಿಯಲ್ಲಿ ಹೆಸರಿಲ್ಲದ ವಕೀಲರಿಗೆ ಮತ್ತೆ ಅರ್ಜಿ ಸಲ್ಲಿಸಲು ಗಡುವು ವಿಧಿಸಲಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು, ಡಿಸೆಂಬರ್ 6ರ ಒಳಗೆ ವಕೀಲರಿಗೆ ಸಿಓಪಿ ಕೋರಿ ಅರ್ಜಿ ಸಲ್ಲಿಸಲು ಕೊನೆಯ ಅವಕಾಶ ನೀಡಲಾಗಿದ್ದು, ವಕೀಲರು ಆನ್ ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ರಿಟ್ ಅರ್ಜಿ 1319/2023ರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ ನೀಡಿದ ಆದೇಶದಂತೆ ಅರ್ಜಿ ಸಲ್ಲಿಕೆಗೆ ಕೊನೆಯ ಅವಕಾಶವಾಗಿ ಅಂತಿಮ ಗಡುವನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ವಕೀಲರ ಪರಿಷತ್ತಿನ ಅಧಿಕೃತ ವೆಬ್ ಸೈಟ್ ksbc.org.in ನ್ನು ಸಂಪರ್ಕಿಸಬಹುದು ಎಂದು ತಿಳಿಸಿದೆ.
2010ಕ್ಕಿಂತ ಹಿಂದೆ ನೋಂದಣಿ ಮಾಡಿಕೊಂಡಿರುವ ವಕೀಲರು ಕಳೆದ ಐದು ವರ್ಷಗಳ ವಕಾಲತ್ತು ಅಥವಾ ವಕೀಲಿಕೆಗೆ ಸಂಬಂಧಿಸಿದ ಐದು ವರ್ಷಗಳ ತಲಾ ಒಂದು ದಾಖಲೆಯನ್ನು ಅರ್ಜಿಯ ಜೊತೆಗೆ ಲಗತ್ತಿಸಿ ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಹಾಗೆಯೇ 12-07-2010ರ ಬಳಿಕ ಕಾನೂನು ಪದವಿಯನ್ನು ಪಡೆದವರು ಮತ್ತು ಅಖಿಲ ಭಾರತ ವಕೀಲರ ಪರೀಕ್ಷೆಯನ್ನು ಪೂರೈಸಿದವರು ಸಿಓಪಿ ಪಡೆಯಬೇಕಾಗಿದ್ದು. ಇದಕ್ಕಾಗಿ ಪಟ್ಟಿ ಇಲ್ಲದ ವಕೀಲರು ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸಬೇಕುಅಂಚೆ ಮೂಲಕ, ಇಮೇಲ್ ಮೂಲಕ ಅಥವಾ ಆಫ್ ಲೈನ್ ಮೂಲಕ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅದೇ ರೀತಿ, ವಿಳಾಸದಲ್ಲಿ ಬದಲಾವಣೆ ಮತ್ತು ಮತದಾನದ ಸ್ಥಳದಲ್ಲಿ ಬದಲಾವಣೆ ಕೋರುವ ವಕೀಲರು ರೂ. 250/- ಶುಲ್ಕದೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
