22/05/2026

Law Guide Kannada

Online Guide

ಚೆಕ್ ಬೌನ್ಸ್ ಕೇಸ್: ಸಹಿ ಹಾಕದ ಜಂಟಿ ಖಾತೆದಾರನ ವಿರುದ್ಧ ಮೊಕದ್ದಮೆ ಹೂಡಲಾಗುವುದಿಲ್ಲ- ಹೈಕೋರ್ಟ್

ಅಲಹಾಬಾದ್: ಚೆಕ್ ಬೌನ್ಸ್ ಪ್ರಕರಣದಲ್ಲಿ ತನ್ನ ಖಾತೆಗೆ ಸಂಬಂಧಿದ ಚೆಕ್ ಗೆ ಸಹಿ ಹಾಕದ ಜಂಟಿ ಖಾತೆದಾರನ ವಿರುದ್ಧ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.

‘ಮಧು ಸಿಂಗ್ ವಿರುದ್ಧ ಉತ್ತರ ಪ್ರದೇಶ ರಾಜ್ಯ ಮತ್ತಿತರರು’ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಸಂದೀಪ್ ಜೈನ್ ಅವರಿದ್ದ ನ್ಯಾಯಪೀಠವು ಈ ತೀರ್ಪು ನೀಡಿದೆ. ಜಂಟಿ ಖಾತೆಯನ್ನು ಹೊಂದಿದ್ದರೂ ತನ್ನ ಖಾತೆಗೆ ಸಂಬಂಧಿಸಿದ ಚೆಕ್ ಗೆ ಸಹಿ ಹಾಕದ ವ್ಯಕ್ತಿಯ ವಿರುದ್ಧ ನೆಗೋಷಿಯೇಬಲ್ ಇನ್ಸ್ ಟ್ರುಮೆಂಟ್ಸ್ ಕಾಯ್ದೆ 1881ರ ಸೆಕ್ಷನ್ 138ರ ಅಡಿಯಲ್ಲಿ ವಿಚಾರಣೆ ನಡೆಸಲಾಗದು. ಚೆಕ್ ನ ಅಮಾನ್ಯತೆಗಾಗಿ ಅವರು ಆ ಚೆಕ್ ಗೆ ಸಹಿ ಹಾಕದ ಹೊರತು ಜಂಟಿ ಖಾತೆದಾರರ ಮೇಲೆ ಮೊಕದ್ದಮೆ ಹೂಡಲಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ ಹಲವು ತೀರ್ಪುಗಳನ್ನು ನ್ಯಾಯಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ. ಅಪರ್ಣಾ ಎ ಶಾ ವಿರುದ್ಧ ಸೇಥ್ ಡೆವೆಲಪ್ಪರ್ಸ್ ಮತ್ತೊಬ್ಬರು, ಜುಗೇಶ್ ಸೆಹಗಲ್ ವಿರುದ್ಧ ಸಂಶೇರ್ ಸಿಂಗ್ ಗೋಗಿ, ಅಲ್ಕ ಖಂಡು ಅವ್ಹಾದ್ ವಿರುದ್ಧ ಅಮರ್ ಶ್ಯಾಮ್ ಪ್ರಸಾದ್ ಮಿಶ್ರಾ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ಕಾಯ್ದೆಯ ಸೆಕ್ಷನ್ 141ರ ಪ್ರಕಾರ ಆರೋಪಿಗೆ ತಾನು ಸಹಿ ಹಾಕದ ಚೆಕ್ ಅಮಾನ್ಯ ಪ್ರಕರಣದ ವಿಚಾರಣೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.

ಕಾಯ್ದೆಯ ಸೆಕ್ಷನ್ 141 ರ ಅಡಿಯಲ್ಲಿ ವೈಕೇರಿಯಸ್ ಹೊಣೆಗಾರಿಕೆಯ ಶಾಸನಬದ್ದ ಕಲ್ಪನೆಯು ಕಂಪನಿಗಳು, ಪಾಲುದಾರಿಕೆ ಸಂಸ್ಥೆಗಳು ಮತ್ತು ವ್ಯಕ್ತಿಗಳ ಸಂಘಗಳಿಗೆ ಸೀಮಿತವಾಗಿದೆ ಮತ್ತು ವಿವಾದಿತ ಚೆಕ್ ಗೆ ಸಹಿ ಮಾಡದ ಖಾಸಗಿ ವ್ಯಕ್ತಿಗಳನ್ನು ಒಳಗೊಳ್ಳಲು ವಿಸ್ತರಿಸಲಾಗುವುದಿಲ್ಲ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.

ವೈಕೇರಿಯಸ್ ಹೊಣೆಗಾರಿಕೆಯೊಂದಿಗೆ ವ್ಯವಹರಿಸುವ ಎನ್.ಐ. ಕಾಯ್ದೆಯ ಸೆಕ್ಷನ್ 141 ಕಂಪನಿಗಳು ಮತ್ತು ಪಾಲುದಾರಿಕೆ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ವ್ಯಕ್ತಿಗಳಿಗೆ ಅಲ್ಲ ಎಂಬುದು ಸ್ಪಷ್ಟವಾಗಿದೆ. ಪರಿಣಾಮವಾಗಿ, ವೈಕೇರಿಯಸ್ ಚೆಕ್ ಗೆ ಸಹಿ ಹಾಕದ ಹೊರತು ಜಂಟಿ ಬ್ಯಾಂಕ್ ಖಾತೆದಾರರ ಮೇಲೆ ಮೊಕದ್ದಮೆ ಹೂಡಲಾಗುವುದಿಲ್ಲ” ಎಂದು ನ್ಯಾಯಪೀಠ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.