02/05/2026

Law Guide Kannada

Online Guide

ತಡೆ ಇದ್ದರೂ LOC ಮುಂದುವರಿಕೆ ಮತ್ತು NOC ನಿರಾಕರಣೆ ಕಾನೂನು ಬಾಹಿರ-ಹೈಕೋರ್ಟ್

ಬೆಂಗಳೂರು: ನ್ಯಾಯಾಲಯವು ಕ್ರಿಮಿನಲ್ ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಿದ್ದರೂ ಸಹ ಆರೋಪಿ ವಿರುದ್ಧ ಹೊರಡಿಸಲಾದ ‘ಲುಕ್ಔಟ್ ಸರ್ಕ್ಯುಲರ್’ (ಎಲ್ಒಸಿ) ಅನ್ನು ಮುಂದುವರಿಸುವುದು ಮತ್ತು ಅದಕ್ಕೆ ನಿರಾಕ್ಷೇಪಣ ಪತ್ರ (ಎನ್ಒಸಿ) ನೀಡಲು ನಿರಾಕರಿಸುವುದು ಸಲ್ಲದು. ಅದು ಕಾನೂನುಬಾಹಿರ ಎಂದು ಹೈಕೋರ್ಟ್ ಆದೇಶಿಸಿದೆ.

ಹೈಕೋರ್ಟ್ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ, ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ಉಡುಪಿಯ ಮಹಮ್ಮದ್ ಆಶಿಕ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠವು ಪುರಸ್ಕರಿಸಿ ಅರ್ಜಿದಾರರ ವಿರುದ್ಧ ಹೊರಡಿಸಲಾಗಿರುವ ಎಲ್ ಒಸಿ ಹಿಂಪಡೆಯಬೇಕು ಎಂದು ಆದೇಶ ನೀಡಿತು.

ನ್ಯಾಯಾಲಯವು ಒಮ್ಮೆ ಕ್ರಿಮಿನಲ್ ಪ್ರಕ್ರಿಯೆಗೆ ತಡೆ ನೀಡಿದ ಮೇಲೆ ಆ ಪ್ರಕ್ರಿಯೆಯಿಂದ ಉದ್ಭವಿಸುವ ಎಲ್ಲ ಕ್ರಮಗಳು ಸ್ಥಗಿತಗೊಳ್ಳಬೇಕು. ಹಾಗಿರುವಾಗ ಎಲ್ ಒಸಿ ಮುಂದುವರಿಸುವುದು ಕೋರ್ಟ್ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ. ಅರ್ಜಿದಾರರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದು ಅವರ ಜೀವನೋಪಾಯದ ಹಕ್ಕನ್ನು ಸಂವಿಧಾನಾತ್ಮಕವಾಗಿ ರಕ್ಷಿಸಬೇಕಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.