ಇ-ಕೋರ್ಟ್ ಗಳ ಮೊಬೈಲ್ ಆ್ಯಪ್ ನವೀಕರಣ: ಬಳಕೆದಾರರಿಗೊಂದು ಮಹತ್ವದ ಸೂಚನೆ ಕೊಟ್ಟ ಹೈಕೋರ್ಟ್
ಬೆಂಗಳೂರು: ಇ-ಕೋರ್ಟ್ಗಳ ಮೊಬೈಲ್ ಆಪ್ ನವೀಕರಣ ಮಾಡಲಾಗುತ್ತಿದ್ದು, ಮೇ 5 ರಂದು e-Courts Mobile App Version 4.0 ಬಿಡುಗಡೆ ಮಾಡಲಾಗುತ್ತಿದ್ದು ಈ ಸಂಬಂಧ ಇ-ಕೋರ್ಟ್ ಆ್ಯಪ್ ಬಳಕೆದಾರರಿಗೆ ಹೈಕೋರ್ಟ್ ತುರ್ತು ಮೇಲ್ ಮೂಲಕ ಮಹತ್ವದ ಸೂಚನೆಯೊಂದನ್ನ ನೀಡಿದೆ.
ದಿನಾಂಕ 21.04.2026 ರಂದು ಇ-ಮೇಲ್ ಮೂಲಕ ನೀಡಿದ ನಿರ್ದೇಶನದನ್ವಯ, e-Courts Mobile App Version 4.0 ~ 05.05.2026 ರಂದು ಬಿಡುಗಡೆಗೊಳಿಸಲು ನಿಗದಿಪಡಿಸಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.
ಮಾನ್ಯ ಹೈಕೋರ್ಟ್ ನಿರ್ದೇಶನ ಪ್ರಕಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ದಕ್ಷಿಣ ಕನ್ನಡ, ಮಂಗಳೂರು ಇವರ ಕಚೇರಿಯಿಂದ ದಿನಾಂಕ: 22.04.2026 ರಂದು ಜ್ಞಾಪನಾ ಪತ್ರ ಸಂಖ್ಯೆ: 5107/2026 ಅನ್ನು ಹೊರಡಿಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ, ಇ-ಕೋರ್ಟ್ಗಳ ಮೊಬೈಲ್ ಆಪ್ ಬಳಸುತ್ತಿರುವ ಎಲ್ಲಾ ವಕೀಲರು ಹಾಗೂ ಇತರೆ ಬಳಕೆದಾರರು, ಪ್ರಸ್ತುತ ಆಪ್ ನಲ್ಲಿರುವ “Export” ಆಯ್ಕೆಯನ್ನು ಬಳಸಿ ತಮ್ಮಲ್ಲಿ ಉಳಿಸಿಕೊಂಡಿರುವ ಪ್ರಕರಣಗಳ ಮಾಹಿತಿಯ ಬ್ಯಾಕಪ್ ಪ್ರತಿಯನ್ನು ಕಡ್ಡಾಯವಾಗಿ ತೆಗೆದುಕೊಂಡಿರಬೇಕು. ಇದರಿಂದ ಈಗಿರುವ ಮಾಹಿತಿಯ ನಷ್ಟವನ್ನು ತಪ್ಪಿಸಬಹುದು. ನಂತರ ನವೀಕರಿಸಿದ ಆಪ್ ಅನ್ನು ಸ್ಥಾಪಿಸಿದ ಬಳಿಕ “Import” ಆಯ್ಕೆಯನ್ನು ಬಳಸಿ ಆ ಮಾಹಿತಿಯನ್ನು ಮರು ಸ್ಥಾಪಿಸಬಹುದು ಎಂದು ಎಂದು ಜ್ಞಾಪನಾ ಪತ್ರದಲ್ಲಿ ಹೈಕೋರ್ಟ್ ಸೂಚನೆ ನೀಡಿದೆ.
ಆಪ್ ನವೀಕರಣದಿಂದ ಸಂಗ್ರಹಿತ ಮಾಹಿತಿಗೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಯಾವುದೇ ಅಸೌಕರ್ಯ ಅಥವಾ ಮಾಹಿತಿಯ ನಷ್ಟವನ್ನು ತಪ್ಪಿಸಲು ಎಲ್ಲಾ ಬಳಕೆದಾರರು 05.05.2026 ರೊಳಗಾಗಿ ಬ್ಯಾಕಪ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ, ಈ ಮಾಹಿತಿಯನ್ನು ಎಲ್ಲಾ ವಕೀಲರಿಗೆ ತಲುಪುವಂತೆ ಪ್ರಸಾರ ಮಾಡುವುದರೊಂದಿಗೆ, ಹೆಚ್ಚಿನ ಜಾಗೃತಿಗಾಗಿ ಅದನ್ನು ಬಾರ್ ಅಸೋಸಿಯೇಷನ್ ಸೂಚನಾ ಫಲಕದಲ್ಲಿ ಪ್ರದರ್ಶಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.ಇದನ್ನು ಅತ್ಯಂತ ತುರ್ತು ಮತ್ತು ಮಹತ್ವದ ವಿಷಯ ಎಂದು ಪರಿಗಣಿಸಬೇಕು ಎಂದು ಹೈಕೋರ್ಟ್ ಜ್ಞಾಪನಾ ಪತ್ರದಲ್ಲಿ ತಿಳಿಸಿದೆ.
Click to View the User Manual in PDF Format
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
