ಇ-ಫೈಲಿಂಗ್ ಮೂಲಕ ದಾವೆ: ನ್ಯಾಯಾಂಗ ಸಿಬ್ಬಂದಿಗೆ ನಿರ್ದೇಶನ
ಬೆಂಗಳೂರು: ಇ-ಫೈಲಿಂಗ್ ಮೂಲಕ ದಾವೆ ದಾಖಲಿಸಿಕೊಳ್ಳಲು ನ್ಯಾಯಾಂಗ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದ್ದು, ಈ ಹೊಸ ವ್ಯವಸ್ಥೆ ಆಗಸ್ಟ್ 1 ಅಂದರೆ ಇಂದಿನಿಂದಲೇ ಜಾರಿಗೆ ಬಂದಿದೆ.
ಹೌದು, ಸರಕಾರದ ವಿವಿಧ ಇಲಾಖೆಗಳು, ನಿಗಮ, ಮಂಡಳಿ ಹಾಗೂ ಸರಕಾರದ ಸ್ವಾಮ್ಯದ ಬ್ಯಾಂಕ್ ಮುಂತಾದ ಸಂಸ್ಥೆಗಳು ಇ ಫೈಲಿಂಗ್ ಮೂಲಕ ಮಾತ್ರವೇ ದಾವೆಗಳನ್ನು ದಾಖಲಿಸತಕ್ಕದ್ದು. ಇ-ಫೈಲಿಂಗ್ ಮೂಲಕ ಹಾಜರುಪಡಿಸಲಾದ ದಾವೆಗಳನ್ನು ಮಾತ್ರ ದಾಖಲಿಸಿಕೊಳ್ಳುವಂತೆ ಎಲ್ಲಾ ನ್ಯಾಯಾಲಯದ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ.
ದಾವೆಯನ್ನು ನೋಂದಣಿ ಮಾಡುವ ಸಿಬ್ಬಂದಿಗಳು ಸರಕಾರ/ಸರಕಾರದ ಸ್ವಾಮ್ಯದ ಸಂಸ್ಥೆಗಳು ವಾದಿ ಆಗಿರುವ ದಾವೆಗಳನ್ನು ಭೌತಿಕ ರೂಪದಲ್ಲಿ ಸ್ವೀಕರಿಸಬಾರದು ಎಂದು ನ್ಯಾಯಾಲಯದ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
