ಹೆಣ್ಣು ಮಕ್ಕಳಿಗೂ ತಂದೆಯ ಆಸ್ತಿಯಲ್ಲಿ ಹಕ್ಕು: ಯಾವಾಗ ಸಿಗುತ್ತೆ? ಯಾವಾಗ ಸಿಗಲ್ಲ? ಇಲ್ಲಿದೆ ನೋಡಿ ಮಾಹಿತಿ
ಬೆಂಗಳೂರು: ಪುರುಷರಷ್ಟೆ ಹೆಣ್ಣು ಮಕ್ಕಳು ಸಮಾನರು. ಅವರಿಗೂ ಎಲ್ಲಾ ಕ್ಷೇತ್ರದಲ್ಲೂ ಸ್ಪರ್ಧಿಸುವ, ಬೆಳೆಯುವ ಹಕ್ಕಿದೆ. ಅಂತೆಯೇ ತಂದೆಯ ಆಸ್ತಿಯಲ್ಲಿ ಗಂಡು ಮಕ್ಕಳಂತೆ ಹೆಣ್ಣುಮಕ್ಕಳಿಗೂ ಹಕ್ಕು ಇದೆಯೇ? ಇದ್ದರೇ ಯಾವ ಸಮಯದಲ್ಲಿ ಆಸ್ತಿಯಲ್ಲಿ ಹಕ್ಕು ಪಡೆಯಬಹುದು ಎಂಬುದನ್ನ ತಿಳಿದುಕೊಳ್ಳಬೇಕೇ ಹಾಗಾದರೇ ಈ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ಈ ಹಿಂದೆ ಹಿಂದೂ ವಾರಸತ್ವ ಕಾಯ್ದೆ (Hindu Succession Act) 1956ರಲ್ಲಿ ಜಾರಿಯಾದಾಗ, ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಪೂರ್ಣ ಹಕ್ಕು ಇರಲಿಲ್ಲ. ಆಸ್ತಿಯ ಹಕ್ಕು ಮುಖ್ಯವಾಗಿ ಗಂಡು ಮಕ್ಕಳಿಗಷ್ಟೇ ಸೀಮಿತವಾಗಿತ್ತು.
ಆದರೆ 2005ರಲ್ಲಿ ಕಾನೂನಿಗೆ ತಿದ್ದುಪಡಿ ತಂದು (Hindu Succession Amendment Act, 2005) ದೊಡ್ಡ ಬದಲಾವಣೆ ಮಾಡಲಾಗಿದ್ದು, ಈ ಕಾಯ್ದೆಯ ಪ್ರಕಾರ ಮಗಳುಗೂ ತಂದೆಯ ಆಸ್ತಿಯಲ್ಲಿ ಗಂಡು ಮಕ್ಕಳಷ್ಟೇ ಸಮಾನ ಹಕ್ಕು ಇದೆ ಎಂಬ ಅಂಶವನ್ನ ಸೇರಿಸಲಾಯಿತು.
ಈ ಕೆಳಗಿನ ಸಂದರ್ಭಗಳಲ್ಲಿ ಹೆಣ್ಣು ಮಕ್ಕಳಿಗೂ ತಂದೆಯ ಆಸ್ತಿಯಲ್ಲಿ ಹಕ್ಕು ಸಿಗುತ್ತೆ.
- ತಂದೆ 2005ರ ನಂತರ ಜೀವಂತನಾಗಿದ್ದರೆ ಹಾಗೂ ಆಸ್ತಿ ಹಂಚಿಕೆ ಆಗಿರದಿದ್ದರೆ, ಮಗಳಿಗೆ ಗಂಡು ಮಕ್ಕಳಿಗೆ ಇದ್ದಷ್ಟು ಸಮಾನ ಆಸ್ತಿಯ ಹಕ್ಕು ಸಿಗುತ್ತದೆ.
- ಪೀಳಿಗೆಯ (Ancestral) ಆಸ್ತಿ ಇದ್ದರೆ: ಇದು ತಾತ-ತಂದೆ-ಮಗನ ಹಾದಿಯಲ್ಲಿ ಬಂದಿರುವ ಪೀಳಿಗೆಯ ಆಸ್ತಿಯಾಗಿದ್ದರೆ, ಮಗಳು ಕೂಡ ವಾರಸುದಾರಳಾಗುತ್ತಾಳೆ.
ಹಾಗೆಯೇ ಮದುವೆಯಾದ ಬಳಿಕವೂ ತಂದೆಯ ಆಸ್ತಿಯಲ್ಲಿ ಮಗಳು ಹಕ್ಕು ಕಳೆದುಹೋಗುವುದಿಲ್ಲ. ವಿವಾಹಸ್ಥಿತಿಯು ಹಕ್ಕಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಾನೂನು ಹೇಳುತ್ತದೆ. - ತಂದೆ ವಿಲ್ (Will) ಮಾಡದೆ ಸತ್ತಿದ್ದರೆ: ತಂದೆಯು ಆಸ್ತಿ ಯಾರ ಹೆಸರಿಗೂ ಬರೆದು ಕೊಟ್ಟಿರದಿದ್ದರೆ, ಮಗಳು ಕಾನೂನಿನ ಪ್ರಕಾರ ವಾರಸುದಾರಳಾಗುತ್ತಾಳೆ. ಈ ಮೇಲಿನ ಸಂದರ್ಭಗಳಲ್ಲಿ ಹೆಣ್ಣುಮಕ್ಕಳು ತಂದೆಯ ಆಸ್ತಿಯಲ್ಲಿ ಹಕ್ಕನ್ನು ಹೊಂದಿರುತ್ತಾರೆ.
ಯಾವ ಸಂದರ್ಭಗಳಲ್ಲಿ ಮಗಳಿಗೆ ಹಕ್ಕು ಸಿಗೋದಿಲ್ಲ ಗೊತ್ತೆ..?
- ತಂದೆ 2005ರ ಮೊದಲು ಸಾವಿಗೀಡಾದರೆ ಈ ಸಂದರ್ಭದಲ್ಲಿ ಹೊಸ ಕಾನೂನು ಅನ್ವಯವಾಗುವುದಿಲ್ಲ, ಅಂದರೆ ಮಗಳಿಗೆ ಹಕ್ಕು ಸಿಗುವುದಿಲ್ಲ. ತಂದೆಯು ವಿಲ್ ಅಥವಾ ಗಿಫ್ಟ್ ಡೀಡ್ ಮೂಲಕ ಬರೆದು ಕೊಟ್ಟಿದ್ದರೆ, ತಂದೆಯು ತನ್ನ ಆಸ್ತಿಯನ್ನು ಯಾರಿಗಾದರೂ ಬರೆದು ಕೊಟ್ಟಿದ್ದರೆ, ಮಗಳು ಆ ಆಸ್ತಿಗೆ ಹಕ್ಕು ಹೇಳಿಕೊಳ್ಳಲು ಸಾಧ್ಯವಿಲ್ಲ.
- ತಂದೆಯು ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿ : ಇಂತಹ ಆಸ್ತಿಯನ್ನು ತಂದೆಯು ತನ್ನ ಇಷ್ಟದಂತೆ ಯಾರಿಗಾದರೂ ಕೊಡುವ ಹಕ್ಕು ಹೊಂದಿರುತ್ತಾನೆ. ಈ ಸಂದರ್ಭದಲ್ಲಿ ಮಗಳಿಗೆ ಹಕ್ಕು ಇಲ್ಲ.
- ಆಸ್ತಿ ಹಂಚಿಕೆ 2005ರ ಮೊದಲು ಆಗಿದ್ದರೆ: ಕಾನೂನಿನ ಬದಲಾವಣೆ ನಂತರಕ್ಕಿಂತ ಮುಂಚೆ ಹಂಚಿಕೆ ಆಗಿದ್ದರೆ, ಮಗಳು ಹಕ್ಕು ಕೇಳಲು ಸಾಧ್ಯವಿಲ್ಲ.
ಕಾನೂನಿನ ಪ್ರಕಾರ ಮಗಳು ಹೇಗೆ ಹಕ್ಕು ಪಡೆಯಬಹುದು?
- ಹೆಣ್ಣು ಮಗಳು ತನ್ನ ಹಕ್ಕು ಪಡೆಯಲು ಈ ದಾಖಲೆಗಳು ಅಗತ್ಯ:
- ತಂದೆಯ ಮರಣ ಪ್ರಮಾಣ ಪತ್ರ
- ಜನನ ಪ್ರಮಾಣ ಪತ್ರ (ತಂದೆ-ಮಗಳ ಸಂಬಂಧ ದೃಢಪಡಿಸಲು)
- ಆಸ್ತಿಯ RTC / ಖಾತೆ ನಕಲು
- ಆಧಾರ್ ಅಥವಾ ರೇಷನ್ ಕಾರ್ಡ್ – ಕುಟುಂಬದ ಸಾಬೀತಿಗೆ
- ಅಗತ್ಯವಿದ್ದರೆ ಕೋರ್ಟ್ನಲ್ಲಿ ಹಕ್ಕು ಮೊಕದ್ದಮೆ ಸಲ್ಲಿಸಬಹುದು
ಸುಪ್ರೀಂ ಕೋರ್ಟ್ನ ಮಹತ್ವದ ತೀರ್ಪು (2020)
2020ರ ಆಗಸ್ಟ್ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ಹೇಳಲಾಗಿದೆ:
ತಂದೆ 2005ರ ಮೊದಲು ಸತ್ತರೂ, ಆಸ್ತಿ ಹಂಚಿಕೆ ಆಗದಿದ್ದರೆ ಮಗಳು ತನ್ನ ಹಕ್ಕು ಕೇಳಬಹುದು. ಅಂದರೆ, ಆಸ್ತಿ ಹಂಚಿಕೆ ಆಗದೇ ಉಳಿದಿದ್ದರೆ, ಮಗಳು ಕೋರ್ಟ್ ಮೂಲಕವೂ ತನ್ನ ಹಕ್ಕು ಪಡೆಯಬಹುದು.
ಆದರೆ ಇದರಿಗಾಗಿ ದೃಢ ದಾಖಲೆಗಳು ಮತ್ತು ಕುಟುಂಬದ ಆಸ್ತಿ ಸಾಬೀತು ಅಗತ್ಯ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
