10/07/2026

Law Guide Kannada

Online Guide

ಒಡಿಶಾದ ಎಸ್‌ಒಎ ವಿಶ್ವವಿದ್ಯಾಲಯದಿಂದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್

ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಕೃಷ್ಣ ಶ್ರೀಪಾದ್ ದೀಕ್ಷಿತ್ ಅವರಿಗೆ ಒಡಿಶಾದ ಸಿಕ್ಷಾ ‘ಓ’ ಅನುಸಂಧಾನ್ (SOA) ಡೀಮ್ಡ್ ಟು ಬಿ ಯುನಿವರ್ಸಿಟಿ ಗೌರವ ಡಾಕ್ಟರೇಟ್ (Honoris Causa) ಪ್ರದಾನ ಮಾಡಲು ನಿರ್ಧರಿಸಲಾಗಿದೆ.

ಜುಲೈ 18, 2026ರಂದು ಬೆಳಿಗ್ಗೆ 11 ಗಂಟೆಗೆ ಭುವನೇಶ್ವರದ ಎಸ್‌ಒಎ ವಿಶ್ವವಿದ್ಯಾಲಯದ ವಿಶೇಷ ಘಟಿಕೋತ್ಸವದಲ್ಲಿ ಈ ಗೌರವ ಪ್ರದಾನ ಮಾಡಲಾಗುತ್ತದೆ. ಈ ಸಮಾರಂಭದಲ್ಲಿ ಅತಿಥಿ ಗೌರವವಾಗಿ ಭಾಗವಹಿಸಿ ವಿದ್ಯಾರ್ಥಿಗಳು ಹಾಗೂ ಸಂಶೋಧಕರನ್ನು ಉದ್ದೇಶಿಸಿ ಭಾಷಣ ಮಾಡುವಂತೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪ್ರದೀಪ್ತ ಕುಮಾರ್ ನಂದಾ ಅವರು ನ್ಯಾಯಮೂರ್ತಿ ದೀಕ್ಷಿತ್ ಅವರಿಗೆ ಅಧಿಕೃತ ಆಹ್ವಾನ ನೀಡಿದ್ದಾರೆ.

ನ್ಯಾಯಮೂರ್ತಿ ಕೃಷ್ಣ ಶ್ರೀಪಾದ್ ದೀಕ್ಷಿತ್ ಅವರು ಕಾನೂನು ಕ್ಷೇತ್ರಕ್ಕೆ ನೀಡಿರುವ ವಿಶಿಷ್ಟ ಕೊಡುಗೆ, ನ್ಯಾಯದ ಪರವಾದ ಅಚಲ ಬದ್ಧತೆ, ನೈತಿಕ ಮೌಲ್ಯಗಳ ಪಾಲನೆ ಹಾಗೂ ಕಾನೂನು ವೃತ್ತಿಯ ಮೇಲೆ ಬೀರಿರುವ ಶಾಶ್ವತ ಪ್ರಭಾವವನ್ನು ಪರಿಗಣಿಸಿ ಕಾನೂನು ವಿಭಾಗದಲ್ಲಿ ಗೌರವ ಡಾಕ್ಟರೇಟ್ (Honoris Causa in Law) ನೀಡಲಾಗುತ್ತಿದೆ.

ಇನ್ನು ಎಸ್‌ಒಎ ವಿಶ್ವವಿದ್ಯಾಲಯವು ಯುಜಿಸಿ ಮಾನ್ಯತೆ ಪಡೆದ ಡೀಮ್ಡ್ ವಿಶ್ವವಿದ್ಯಾಲಯವಾಗಿದ್ದು, NAAC A++ ಶ್ರೇಯಾಂಕ ಮತ್ತು NIRF ದೇಶದ ಅಗ್ರ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಶಿಕ್ಷಣ ಸಂಸ್ಥೆಯಾಗಿದೆ. ವಿಶ್ವವಿದ್ಯಾಲಯವು ಶಿಕ್ಷಣ, ಸಂಶೋಧನೆ ಹಾಗೂ ನಾವೀನ್ಯತೆಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.