02/07/2026

Law Guide Kannada

Online Guide

ಕೇವಲ 500 ರೂ. ವಾಚ್ ಗಾಗಿ ನಡೆದ ಗಲಾಟೆ ವಿಕೋಪಕ್ಕೆ: 29 ವರ್ಷಗಳಿಂದ ಜೈಲುವಾಸದಲ್ಲಿದ್ದ ವೃದ್ಧ ಅಪರಾಧಿ ರಿಲೀಸ್..!

ನವದೆಹಲಿ: 29 ವರ್ಷಗಳ ಹಿಂದೆ ಕೇವಲ 500 ರೂ ವಾಚ್ ಗಾಗಿ ನಡೆದ ಗಲಾಟೆಯಲ್ಲಿ ವ್ಯಕ್ತಿಯೋರ್ವ ಸಾವನ್ನಪಿದ ಹಿನ್ನೆಲೆಯಲ್ಲಿ ಅಂದಿನಿಂದಲೂ ಜೈಲುವಾಸ ಅನುಭವಿಸಿದ್ದ ವೃದ್ಧ ಅಪರಾಧಿ ಕೊನೆಗೂ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಹೌದ ಅಂದು 500 ರೂ. ವಾಚ್ ಗೆ ಸಂಬಂಧಿಸಿದಂತೆ ಆದ ಜಗಳದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಈ ಪ್ರಕರಣದಲ್ಲಿ 29 ವರ್ಷಗಳ ಕಾನೂನು ಹೋರಾಟದ ಬಳಿಕ ವೃದ್ಧ ಅಪರಾಧಿ ಬಿಡುಗಡೆ ಹೊಂದಿದ್ದಾರೆ. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ವಲ್ ಭುಯಾನ್ ಅವರಿದ್ದ ನ್ಯಾಯಪೀಠ ಮುಕ್ತಾಯಗೊಳಿಸಿದೆ. ಇದರಿಂದ ಕ್ಷುಲ್ಲಕ ಕಾರಣಕ್ಕಾಗಿ 29 ವರ್ಷಗಳ ಹಿಂದೆ ಜೈಲು ಸೇರಿದ್ದ ವ್ಯಕ್ತಿಗೆ ರಿಲೀಫ್ ಸಿಕ್ಕಿದೆ.

ಈ ಘಟನೆ ನಡೆದಿದ್ದು ಉತ್ತರಾಖಂಡದಲ್ಲಿ. ಪ್ರಕರಣದಲ್ಲಿ ಜೀವಂತವಿರುವ ಕೊನೆಯ ವೃದ್ಧ ಅಪರಾಧಿಯ 5 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಕಡಿತಗೊಳಿಸಿ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ನ್ಯಾಯಪೀಠವು ಅನುಮತಿಸಿದೆ.

ಘಟನೆ ನಡೆದ 1997ರಲ್ಲಿ ಅರ್ಜಿದಾರ ಜಗದೀಶ್ ಅವರಿಗೆ 33 ವರ್ಷ ವಯಸ್ಸಾಗಿತ್ತು. ಈಗ ನಾವು 2026ರಲ್ಲಿದ್ದೇವೆ. ಘಟನೆ ಆಗಿ ಸುಮಾರು ಮೂರು ದಶಕಗಳು ಕಳೆದಿವೆ. ಅರ್ಜಿದಾರನಿಗೆ ಈಗ 60 ವರ್ಷ ದಾಟಿದೆ’ ಎಂಬುದನ್ನು ನ್ಯಾಯಪೀಠ ಗಮನಿಸಿತು. ಮೃತ ವ್ಯಕ್ತಿ ಮತ್ತು ಆರೋಪಿಗಳ ನಡುವೆ ವಾಚ್ ವಿಷಯವಾಗಿ ಆರಂಭವಾದ ಸಣ್ಣ ಜಗಳವು ಹೇಗೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು ಮತ್ತು ಆ ಗಲಾಟೆಯಲ್ಲಿ ಮೃತ ವ್ಯಕ್ತಿ ಪಕ್ಕದಲ್ಲಿದ್ದ ಒಣ ಕಾಲುವೆಗೆ ಬಿದ್ದು ಮೃತಪಟ್ಟರು ಎಂಬುದನ್ನು ಗಮನಿಸಬೇಕು” ಎಂದು ನ್ಯಾಯಪೀಠವು ಹೇಳಿದ್ದು ಈ ಆದೇಶದೊಂದಿಗೆ, ವರ್ಷಗಳ ಕಾಲ ನಡೆದ ಸುದೀರ್ಘ ಕಾನೂನು ಹೋರಾಟಕ್ಕೆ ಕೊನೆಗೂ ತೆರೆ ಬಿದ್ದಿದ್ದು, ವೃದ್ಧ ಅಪರಾಧಿಗೆ ಜೈಲುವಾಸ ಅಂತ್ಯವಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.