ಶಾಲಾ ದಾಖಲೆಯಲ್ಲಿ ಹೆಸರು ಬದಲಾವಣೆ: ಅರ್ಜಿಇತ್ಯರ್ಥದ ನ್ಯಾಯವ್ಯಾಪ್ತಿ ಸಿವಿಲ್ ಕೋರ್ಟ್ಗಿದೆ-ಹೈಕೋರ್ಟ್
ಬೆಂಗಳೂರು: ಶಾಲಾ ದಾಖಲಾತಿಗಳಲ್ಲಿ ಹೆಸರು ಬದಲಾವಣೆ ಮಾಡುವ ಸಂಬಂಧ ಸಲ್ಲಿಸಲಾದ ಅರ್ಜಿಯನ್ನು ಇತ್ಯರ್ಥಪಡಿಸುವ ನ್ಯಾಯವ್ಯಾಪ್ತಿ ಸಿವಿಲ್ ಕೋರ್ಟ್ಗೆ ಇದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹೆಸರು ಬದಲಾವಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸಿವಿಲ್ ನ್ಯಾಯಾಲಯ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಲಕ್ಷ್ಮಿ ಎನ್ ಎಂಬುವವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ. ಹೆಸರು ಬದಲಾವಣೆ ಮಾಡಿಕೊಳ್ಳುವುದು ಮತ್ತು ಅದರ ಜೊತೆಗೆ ಗುರುತಿಸಿಕೊಳ್ಳುವುದು ವ್ಯಕ್ತಿಯ ಸಿವಿಲ್ ಹಕ್ಕು ಎಂದು ನ್ಯಾಯಪೀಠ ಹೇಳಿದೆ.
ಶಾಲಾ ದಾಖಲಾತಿಗಳಲ್ಲಿ ಹೆಸರು ಬದಲಾವಣೆ ಮಾಡುವ ಯಾವುದೇ ಅಧಿಕಾರ ಶಾಲಾ ಮುಖ್ಯಸ್ಥರಿಗೆ ಇಲ್ಲ. ಆದರೆ, ಈ ಕುರಿತಾಗಿ ಘೋಷಣಾತ್ಮಕ ಆದೇಶ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ನ್ಯಾಯ ತೀರ್ಮಾನ ಮಾಡುವ ನ್ಯಾಯವ್ಯಾಪ್ತಿ ಸಿವಿಲ್ ಕೋರ್ಟ್ಗೆ ಇದೆ ಎಂದು ನ್ಯಾಯಪೀಠವು ತಿಳಿಸಿದೆ.
ಪ್ರಕರಣದ ಹಿನ್ನೆಲೆ
ಸಂಖ್ಯಾಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದ ಆಧಾರದಲ್ಲಿ ತನ್ನ ಹೆಸರನ್ನು ಬೆಂಗಳೂರಿನ ಲಕ್ಷ್ಮಿ ಎನ್ಗೆ ಬದಲಾಗಿ ವೀಣಾ ಎನ್ ಎಂದು ಬದಲಾಯಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸಿವಿಲ್ ನ್ಯಾಯಾಲಯ ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
