Employee Archives - Law Guide Kannada https://www.lawguidekannada.com/tag/employee/ Online Guide Tue, 06 Jan 2026 16:32:33 +0000 en-US hourly 1 https://wordpress.org/?v=7.0 https://www.lawguidekannada.com/wp-content/uploads/2022/09/cropped-Logo_512-32x32.jpg Employee Archives - Law Guide Kannada https://www.lawguidekannada.com/tag/employee/ 32 32 ಪದೋನ್ನತಿ ನಿರಾಕರಿಸಿದ್ರೆ ಉದ್ಯೋಗಿಗೆ ವರ್ಷದೊಳಗೆ ಮರುಪರಿಶೀಲನೆ ಕೇಳುವ ಹಕ್ಕಿಲ್ಲ- ಹೈಕೋರ್ಟ್ https://www.lawguidekannada.com/if-promotion-is-denied-employee-does-not-have-right-to-seek-review-within-a-year-high-court/ Tue, 06 Jan 2026 16:32:22 +0000 https://www.lawguidekannada.com/?p=3167 ಶಿಮ್ಲಾ: ಉನ್ನತ ಹುದ್ದೆಗೆ ಪದೋನ್ನತಿ ನೀಡಿದ್ದನ್ನು ನಿರಾಕರಿಸುವ ಉದ್ಯೋಗಿಗೆ ಒಂದು ವರ್ಷದೊಳಗೆ ಮರುಪರಿಶೀಲನೆ ಕೇಳುವ ಹಕ್ಕಿಲ್ಲ ಎಂದು ಹಿಮಾಚಲ ಪ್ರದೇಶ...

The post ಪದೋನ್ನತಿ ನಿರಾಕರಿಸಿದ್ರೆ ಉದ್ಯೋಗಿಗೆ ವರ್ಷದೊಳಗೆ ಮರುಪರಿಶೀಲನೆ ಕೇಳುವ ಹಕ್ಕಿಲ್ಲ- ಹೈಕೋರ್ಟ್ appeared first on Law Guide Kannada.

]]>
ಶಿಮ್ಲಾ: ಉನ್ನತ ಹುದ್ದೆಗೆ ಪದೋನ್ನತಿ ನೀಡಿದ್ದನ್ನು ನಿರಾಕರಿಸುವ ಉದ್ಯೋಗಿಗೆ ಒಂದು ವರ್ಷದೊಳಗೆ ಮರುಪರಿಶೀಲನೆ ಕೇಳುವ ಹಕ್ಕಿಲ್ಲ ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಹಿಮಾಚಲ ಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ರಂಜನ್ ಶರ್ಮಾ ಅವರಿದ್ದ ಪೀಠವು ಈ ತೀರ್ಪು ಪ್ರಕಟಿಸಿದೆ. ಭಾಷೆ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹಿರಿಯ ಸಹಾಯಕ (Senior Assistant) ಹುದ್ದೆಗೆ ತನ್ನ ಕಿರಿಯರ ನಿಯೋಜನೆ ಹಾಗೂ ಪದೋನ್ನತಿಯನ್ನು ಪ್ರಶ್ನಿಸಿ, ನಿವೃತ್ತ ಜೂನಿಯರ್ ಸಹಾಯಕಿಯಾದ ಇಂದು ಶರ್ಮಾ ರಿಟ್ ಸಲ್ಲಿಸಿದ್ದರು, ಈ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಪೀಠವು, “ಒಬ್ಬ ಉದ್ಯೋಗಿಗೆ ಉನ್ನತ ಹುದ್ದೆಗೆ ಪದೋನ್ನತಿ ನೀಡಲಾಗಿದ್ದು, ಆ ಉದ್ಯೋಗಿ ಅದನ್ನು ನಿರಾಕರಿಸಿದರೆ ಅಥವಾ ತ್ಯಜಿಸಿದರೆ, ಮೊದಲ ಪದೋನ್ನತಿಯನ್ನು ನಿರಾಕರಿಸಿದ ದಿನಾಂಕದಿಂದ ಒಂದು ವರ್ಷದ ಅವಧಿಯವರೆಗೆ ಅಥವಾ ಮುಂದಿನ ಖಾಲಿ ಹುದ್ದೆ ಉಂಟಾಗುವವರೆಗೆ (ಎರಡರಲ್ಲಿ ಯಾವುದು ನಂತರವಾಗುತ್ತದೋ ಅದುವರೆಗೆ), ಆ ಉದ್ಯೋಗಿಯನ್ನು ಮತ್ತೆ ಪದೋನ್ನತಿಗಾಗಿ ಪರಿಗಣಿಸಬಾರದು ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ದಿನಾಂಕ 278.2004ರ ಸರ್ಕಾರದ ಸೂಚನೆಗಳ ಹಿನ್ನೆಲೆಯಲ್ಲಿ, ಒಮ್ಮೆ ಉದ್ಯೋಗಿ ಪದೋನ್ನತಿಯನ್ನು ತ್ಯಜಿಸಿದರೆ, ಒಂದು ವರ್ಷದೊಳಗೆ ಮರುಪರಿಶೀಲನೆ ಕೋರಲು ಅವರಿಗೆ ಹಕ್ಕಿಲ್ಲ ಎಂದು ತೀರ್ಪು ನೀಡಿತು.

1985ರಲ್ಲಿ ಅರ್ಜಿದಾರರು ಸೇವೆಗೆ ಸೇರಿದ್ದರು. 1995ರಲ್ಲಿ ಜೂನಿಯರ್ ಸಹಾಯಕಿಯಾಗಿ ಪದೋನ್ನತಿ ಪಡೆದು ನಂತರ 2001ರಲ್ಲಿ ಹಿರಿಯ ಸಹಾಯಕಿಯಾಗಿ ಪದೋನ್ನತಿ ನೀಡಲಾದರೂ, ಅವರು ಆ ಹುದ್ದೆಗೆ ಸೇರ್ಪಡೆಯಾಗದೆ ಅದನ್ನು ನಿರಾಕರಿಸಿದರು.

ಇದಾದ ಬಳಿಕ ಮತ್ತೆ ಜೂನ್ 2004ರಲ್ಲಿ ಹಿರಿಯ ಸಹಾಯಕಿಯಾಗಿ ಅವರಿಗೆ ಪದೋನ್ನತಿ ನೀಡಲಾಗಿದ್ದು ಅದನ್ನೂ ಸಹ ಅವರು ನಿರಾಕರಿಸಿದ್ದರು. ನಂತರ ಇತರ ಅಭ್ಯರ್ಥಿಗಳಿಗೆ ಹಿರಿಯ ಸಹಾಯಕ ಹುದ್ದೆಗೆ ನಿಯೋಜನೆ (placement) ನೀಡಲಾಯಿತು. ತಮ್ಮನ್ನು ಪರಿಗಣಿಸದೆ ಇರುವುದರಿಂದ ಅಸಮಾಧಾನಗೊಂಡ ಅರ್ಜಿದಾರರು, ಇತರ ಅಭ್ಯರ್ಥಿಗಳ ಪದೋನ್ನತಿ ಹಾಗೂ ನಿಯೋಜನೆಯನ್ನು ಪ್ರಶ್ನಿಸಿ ಮರುಪರಿಶೀಲನೆ ಮಾಡುವಂತೆ ಕೋರಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ನ್ಯಾಯಾಲಯವು, ಇತರ ಅಭ್ಯರ್ಥಿಗೆ ಪದೋನ್ನತಿ ನೀಡಲಾಗಿಲ್ಲ, ಕೇವಲ ಹಿರಿಯ ಸಹಾಯಕಿಯಾಗಿ ನಿಯೋಜನೆ ನೀಡಲಾಗಿದೆ ಎಂದು ಗಮನಿಸಿ, ಈ ಅಂಶದಲ್ಲಿ ಅರ್ಜಿದಾರರ ಆಕ್ಷೇಪಣೆ ತಪ್ಪು ಕಲ್ಪನೆಯ ಮೇರೆಗೆ ಇದೆ ಎಂದು ಹೇಳಿತು.

ಇದಲ್ಲದೆ, ಅರ್ಜಿದಾರರು ಸಂಬಂಧಿತ ಸರ್ಕಾರದ ಸೂಚನೆಗಳನ್ನು ಪ್ರಶ್ನಿಸಿಲ್ಲ ಮತ್ತು ಸೂಚನೆಗಳಿಗೆ ಕಟ್ಟುನಿಟ್ಟಾಗಿ ಅನುಗುಣವಾಗಿ ನೀಡಲಾದ ತಮ್ಮ ಮನವಿಯ ತಿರಸ್ಕಾರದ ಆದೇಶವನ್ನೂ ಪ್ರಶ್ನಿಸಿಲ್ಲ ಎಂದು ಕಂಡುಕೊಂಡ ನ್ಯಾಯಪೀಠವು, ಅರ್ಜಿದಾರರಿಗೆ ಹಿರಿಯ ಸಹಾಯಕ ಹುದ್ದೆಗೆ ಪರಿಗಣನೆ ಹಾಗೂ ಪದೋನ್ನತಿ ನಿರಾಕರಿಸಿರುವ ಕ್ರಮವನ್ನು ಸಮರ್ಥಿಸಿಕೊಂಡಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

The post ಪದೋನ್ನತಿ ನಿರಾಕರಿಸಿದ್ರೆ ಉದ್ಯೋಗಿಗೆ ವರ್ಷದೊಳಗೆ ಮರುಪರಿಶೀಲನೆ ಕೇಳುವ ಹಕ್ಕಿಲ್ಲ- ಹೈಕೋರ್ಟ್ appeared first on Law Guide Kannada.

]]>
ನೌಕರನ ತಪ್ಪಿಲ್ಲದೆ ಬಡ್ತಿ ನಿರಾಕರಣೆ, ವಿಳಂಬ: ಆರ್ಥಿಕ ಸವಲತ್ತು ನೀಡತಕ್ಕದ್ದು – ಸುಪ್ರೀಂ ಕೋರ್ಟ್  https://www.lawguidekannada.com/denial-of-promotion-delay-without-fault-of-employee-financial-benefits-should-be-given-supreme-court/ Mon, 04 Aug 2025 12:35:49 +0000 http://www.lawguidekannada.com/?p=2133 ನವದೆಹಲಿ: ಉದ್ಯೋಗದಾತನು ಉದ್ಯೋಗಿಯ ಕಡೆಯಿಂದ ಯಾವುದೇ ತಪ್ಪಿಲ್ಲದೆ ಇದ್ದರೂ ಆತನ ಬಡ್ತಿಯನ್ನು  ನಿರಾಕರಣೆ ಮಾಡಿದರೆ ವಿಳಂಬ ಮಾಡಿದರೆ ಆ ಉದ್ಯೋಗಿಗೆ...

The post ನೌಕರನ ತಪ್ಪಿಲ್ಲದೆ ಬಡ್ತಿ ನಿರಾಕರಣೆ, ವಿಳಂಬ: ಆರ್ಥಿಕ ಸವಲತ್ತು ನೀಡತಕ್ಕದ್ದು – ಸುಪ್ರೀಂ ಕೋರ್ಟ್  appeared first on Law Guide Kannada.

]]>
ನವದೆಹಲಿ: ಉದ್ಯೋಗದಾತನು ಉದ್ಯೋಗಿಯ ಕಡೆಯಿಂದ ಯಾವುದೇ ತಪ್ಪಿಲ್ಲದೆ ಇದ್ದರೂ ಆತನ ಬಡ್ತಿಯನ್ನು  ನಿರಾಕರಣೆ ಮಾಡಿದರೆ ವಿಳಂಬ ಮಾಡಿದರೆ ಆ ಉದ್ಯೋಗಿಗೆ ವೇತನ ಮತ್ತು ಭತ್ಯೆಗಳ ಬಾಕಿಯೊಂದಿಗೆ ಪೂರ್ವಾನ್ವಯ ಬಡ್ತಿ ಪಡೆಯುವ ಅರ್ಹತೆ ಇರುತ್ತದೆ ಎಂದು  ಸುಪ್ರೀಂಕೋರ್ಟ್ ತೀರ್ಪು ನೀಡಿದೆ. 

ತಮಿಳುನಾಡು ರಾಜ್ಯ ಸರಕಾರದಲ್ಲಿ ಪೊಲೀಸ್ ಕಾನ್ಸೆಬಲ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪಿ. ಶಕ್ತಿ ಎಂಬವರು ತನಗೆ ಬಡ್ತಿಯನ್ನು ಅನ್ಯಾಯವಾಗಿ ನಿರಾಕರಿಸಿದ್ದು ಅರ್ಹತಾ ದಿನಾಂಕದಿಂದ ಪೂರ್ವಾನ್ವಯವಾಗಿ ಪದೋನ್ನತಿ ನೀಡಬೇಕು ಹಾಗೂ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯ ಮತ್ತು ಕೆ. ವಿನೋದ ಚಂದ್ರನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ತೀರ್ಪು ಪ್ರಕಟಿಸಿದ್ದು, ನೌಕರನ ತಪ್ಪಿಲ್ಲದೇ ಬಡ್ತಿಯನ್ನು ನಿರಾಕರಿಸಿದರೆ ಅಥವಾ ವಿಳಂಬ ಮಾಡಿದರೆ ಬಡ್ತಿಗೆ ಅರ್ಹನಾದ ದಿನಾಂಕದಿಂದ ಪೂರ್ವಾನ್ವಯವಾಗಿ ಬಡ್ತಿ ಹಾಗೂ ಸಂಬಂಧಿತ ಆರ್ಥಿಕ ಸವಲತ್ತುಗಳನ್ನು ನೀಡತಕ್ಕದ್ದು ಸೂಚನೆ ನೀಡಿದೆ.

ತೀರ್ಪಿನ ವಿವರ…

ಬಡ್ತಿಯಲ್ಲಿನ ವಿಳಂಬವು ಕೇವಲ ಉದ್ಯೋಗದಾತರ ತಪ್ಪು ಅಥವಾ ಆಡಳಿತಾತ್ಮಕ ದೋಷದಿಂದಾಗಿರಬೇಕು. ಉದ್ಯೋಗಿಯು ಪದೋನ್ನತಿಗೆ ಅರ್ಹನಾಗಿದ್ದು ಆತನ ವಿರುದ್ಧ ಯಾವುದೇ ದೋಷಾರೋಪಣೆ ಇರಬಾರದು. ಪೂರ್ವಾನ್ವಯ ಬಡ್ತಿಯ ಸಂದರ್ಭಗಳಲ್ಲಿ ನಿಜವಾಗಿಯೂ ಬಡ್ತಿ ನೀಡಿದ ದಿನಾಂಕವನ್ನು ಪರಿಗಣಿಸದೆ ಆತನು ಬಡ್ತಿಗೆ ಅರ್ಹನಾಗಿದ್ದ ದಿನಾಂಕದಿಂದ ಬಡ್ತಿಯನ್ನು ನೀಡಲಾಗುತ್ತದೆ.

ಈ ಪೂರ್ವಾನ್ವಯ ಬಡ್ತಿಯು ಎಲ್ಲಾ ಹಣಕಾಸಿನ ಪ್ರಯೋಜನಗಳೊಂದಿಗೆ ಸಿಗುತ್ತದೆ. ಇದರಲ್ಲಿ ನಿಗದಿತ ದಿನಾಂಕದಂದು ಬಡ್ತಿ ಪಡೆದಿದ್ದರೆ ಉದ್ಯೋಗಿಯು ಪಡೆಯುತ್ತಿದ್ದ ವೇತನ ಮತ್ತು ಭತ್ಯೆಗಳ ಬಾಕಿ ಸೇರಿವೆ. ಈ ತತ್ತ್ವವು ನ್ಯಾಯ ಮತ್ತು ಸಮಾನತೆಯ ಕಲ್ಪನೆಯನ್ನು ಆಧರಿಸಿದೆ. ಉದ್ಯೋಗಿಗಳು ತಮ್ಮ ಉದ್ಯೋಗದಾತರಿಂದ ಉಂಟಾಗುವ ವಿಳಂಬಗಳಿಗೆ ಶಿಕ್ಷೆಗೊಳಪಡಬಾರದು ಎಂಬುದನ್ನು ಖಚಿತಪಡಿಸುತ್ತದೆ.

“ಭಾರತ ಒಕ್ಕೂಟ ವಿರುದ್ಧ ಎಂ. ಸಿ. ಮುರಳಿ” ಮತ್ತು “ಸುನೈನಾ ಶರ್ಮ ವಿರುದ್ಧ ಜಮ್ಮ ಮತ್ತು ಕಾಶ್ಮೀರ ರಾಜ್ಯ” ಈ ಪ್ರಕರಣಗಳಲ್ಲಿ ನಿಯಮಗಳು ಅನುಮತಿಸದಿದ್ದಾಗ ಅಥವಾ ಉದ್ಯೋಗಿ ಬಡ್ತಿ ಹುದ್ದೆಯಲ್ಲಿನ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ವಹಿಸಿಕೊಳ್ಳದಿದ್ದಾಗ ಪೂರ್ವಾನ್ವಯ ಬಡ್ತಿ ನಿರಾಕರಿಸಲಾಗಿತ್ತು.

ಇದಕ್ಕೆ ವಿರುದ್ಧವಾಗಿ “ರಮೇಶ್ ಕುಮಾರ್ ವಿರುದ್ಧ ಭಾರತ ಸರಕಾರ” ಮತ್ತಿತರರು ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪೂರ್ವಾನ್ವಯ ಬಡ್ತಿಯ ಅನಿವಾರ್ಯತೆಯನ್ನು ಎತ್ತಿ ಹಿಡಿದಿದೆ.

ಸಾಮಾನ್ಯವಾಗಿ ವಿಳಂಬವಾಗಿ ಪದೋನ್ನತಿ ನೀಡಿದ ಪ್ರಕರಣಗಳಲ್ಲಿ ನೌಕರರಿಗೆ ಕಾಲ್ಪನಿಕ ಬಡ್ತಿಯನ್ನು ನೀಡಲಾಗುತ್ತದೆ. ಅವರಿಗೆ ಸಂಬಂಧಿಸದ ಕಾರಣಗಳಿಂದ ವಿಳಂಬವಾದರೆ ಹಣಕಾಸಿನ ಪ್ರಯೋಜನವನ್ನು ನೀಡದೆ ಸೇವಾ ಹಿರಿತನವನ್ನು ಉಳಿಸಿಕೊಳ್ಳಲು ಅವಕಾಶ ನೀಡುತ್ತದೆ.

ಬಡ್ತಿಯನ್ನು ಅನ್ಯಾಯವಾಗಿ ನಿರಾಕರಿಸಿದರೆ ಅಥವಾ ರದ್ದುಗೊಳಿಸಿದರೆ ನೌಕರರು ಸಂವಿಧಾನದ 226 ನೇ ವಿಧಿಯ ಅಡಿಯಲ್ಲಿ ಸಾಂವಿಧಾನಿಕ ನ್ಯಾಯಾಲಯದಲ್ಲಿ ತಮ್ಮ ಹಕ್ಕನ್ನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಬಹುದು.

ಹುದ್ದೆ ಅಥವಾ ವೇತನದಲ್ಲಿ ಯಾವುದೇ ಬದಲಾವಣೆ ಇಲ್ಲದೆ ನೀಡಲಾಗುವ ಕಾಲ್ಪನಿಕ ಬಡ್ತಿಯು ಸರಕಾರಿ ನೌಕರನಿಗೆ ನ್ಯಾಯವಾಗಿ ಸಿಗತಕ್ಕ ಬಡ್ತಿಗೆ ಅನ್ವಯಿಸಲಾಗುವುದಿಲ್ಲ. ಓರ್ವ ನೌಕರ ಬಡ್ತಿಗೆ ಅರ್ಹನಾಗಿದ್ದರೆ ಆತನು ಸಂಬಂಧಿತ ಪ್ರಯೋಜನಗಳನ್ನು ಪೂರ್ವಾನ್ವಯವಾಗಿ ಪಡೆಯಬೇಕು ಎಂದು ಕೇರಳ ಹೈಕೋರ್ಟ್ ನಾರಾಯಣ ಮೆನನ್ ವಿರುದ್ಧ ಕೇರಳ ರಾಜ್ಯ ಈ ಪ್ರಕರಣದಲ್ಲಿ ತೀರ್ಪು ನೀಡಿದೆ.

“ಶೇಕ್ ಮೆಹಬೂಬ್ ವಿರುದ್ಧ ರೈಲ್ವೆ ಮಂಡಳಿ ಮತ್ತಿತರರು” ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಎಂ ರಾಮಾ ಜೋಯಿಸ್ ಅವರು ರಿಟ್ ಅರ್ಜಿ ಸಂಖ್ಯೆ 3014/1976 ರಲ್ಲಿ ದಿನಾಂಕ 1.9.1981 ರಂದು ತೀರ್ಪು ನೀಡಿದ್ದು ಪದೋನ್ನತಿಗೆ ಅರ್ಹನಾದ ದಿನಾಂಕದಿಂದ ಪೂರ್ವಾನ್ವಯವಾಗಿ ಸಲ್ಲತಕ್ಕ ಎಲ್ಲಾ ವೇತನ ಹಾಗೂ ಬತ್ತೆಗಳನ್ನು ಅರ್ಜಿದಾರರಿಗೆ ನೀಡುವಂತೆ ಆದೇಶಿಸಿದ್ದರು. ಕರ್ನಾಟಕ ಹೈಕೋರ್ಟ್ ನೀಡಿದ ಈ ತೀರ್ಪಿನ ಬೆಳಕಿನಲ್ಲಿ ಕರ್ನಾಟಕ ರಾಜ್ಯ ಸರಕಾರವು ಡಿಪಿಆರ್ 3 ಐಪಿಪಿ 81 ದಿನಾಂಕ 26.9.1983 ಪ್ರಕಾರ ಆದೇಶ ಹೊರಡಿಸಿದ್ದು ಪೂರ್ವಾನ್ವಯ ಬಡ್ತಿಯ ಪ್ರಕರಣಗಳಲ್ಲಿ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಬಡ್ತಿ, ವೇತನ ಮತ್ತು ಪಿಂಚಣಿ ನಿಯಂತ್ರಣ) ಕಾಯ್ದೆ 1973 ರ ಸೆಕ್ಷನ್ 3 ರ ಪ್ರಕಾರ ಬಾಕಿ ವೇತನ ಹಾಗೂ ಬತ್ತೆಗಳನ್ನು ಪಡೆಯಲು ನೌಕರರು ಅರ್ಹರಾಗಿರುತ್ತಾರೆ. ಈ ಪ್ರಕರಣವು ಪೂರ್ವಾನ್ವಯ ಬಡ್ತಿಯ ನಂತರ ಬಾಕಿ ವೇತನಕ್ಕಾಗಿ ರೈಲ್ವೆ ಉದ್ಯೋಗಿಯ ಹಕ್ಕಿನ ಕುರಿತು ಸ್ಪಷ್ಟ ತೀರ್ಪು ನೀಡಿದೆ.

“ಬಿಹಾರ ರಾಜ್ಯ ವಿದ್ಯುತ್ ಮಂಡಳಿ ವಿರುದ್ಧ ಧರ್ಮದೇವದಾಸ್” ಈ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಬಡ್ತಿಗೆ ಪರಿಗಣಿಸಲ್ಪಡುವ ಹಕ್ಕು ಸಂವಿಧಾನದ ವಿಧಿ 14 ಮತ್ತು 16 (1) ಅಡಿಯಲ್ಲಿ ಮೂಲಭೂತ ಹಕ್ಕು ಆಗಿದೆ ಎಂದು ಹೇಳಿದೆ. ಇದು ಬಡ್ತಿಗೆ ಸ್ವಯಂ ಚಾಲಿತ ಹಕ್ಕನ್ನು ಒದಗಿಸದಿದ್ದರೂ ಅರ್ಹತೆಯ ಆಧಾರದ ಮೇಲೆ ಉದ್ಯೋಗಿಯನ್ನು ಪದೋನ್ನತಿಗೆ ಪರಿಗಣಿಸುವ ಅಗತ್ಯವನ್ನು ಎತ್ತಿ ಹಿಡಿದಿದೆ.

ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್ ಗಳಲ್ಲಿರುವ ಹಲವಾರು ಪ್ರಕರಣಗಳಲ್ಲಿ ವಿಳಂಬವಾದ ಬಡ್ತಿಗೆ ಸಂಬಂಧಿಸಿದಂತೆ ಅರ್ಹತೆಯ ದಿನಾಂಕದಿಂದ ಹಣಕಾಸಿನ ಪ್ರಯೋಜನಗಳನ್ನು ನೀಡುವ ತತ್ವವನ್ನು ಎತ್ತಿ ಹಿಡಿದಿವೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ನೌಕರನ ತಪ್ಪಿಲ್ಲದೆ ಬಡ್ತಿ ನಿರಾಕರಣೆ, ವಿಳಂಬ: ಆರ್ಥಿಕ ಸವಲತ್ತು ನೀಡತಕ್ಕದ್ದು – ಸುಪ್ರೀಂ ಕೋರ್ಟ್  appeared first on Law Guide Kannada.

]]>
ಪ್ರಮಾದದಿಂದ ಪಾವತಿಸಲಾದ ನೌಕರನ ಹೆಚ್ಚುವರಿ ವೇತನ ವಸೂಲಿ ಮಾಡುವಂತಿಲ್ಲ – ಸುಪ್ರೀಂಕೋರ್ಟ್ https://www.lawguidekannada.com/additional-salary-of-employee-paid-by-mistake-cannot-be-recovered-supreme-court/ Mon, 29 Jul 2024 07:58:33 +0000 https://www.lawguidekannada.com/?p=548 ನಿಯಮಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ ಅಥವಾ ಪ್ರಮಾದದಿಂದ ಯಾವುದೇ ಸರಕಾರಿ ನೌಕರರಿಗೆ ಪಾವತಿಸಲಾದ ಹೆಚ್ಚುವರಿ ವೇತನವನ್ನ ಆತನಿಂದ ಮರಳಿ ವಸೂಲಿ ಮಾಡುವಂತಿಲ್ಲ...

The post ಪ್ರಮಾದದಿಂದ ಪಾವತಿಸಲಾದ ನೌಕರನ ಹೆಚ್ಚುವರಿ ವೇತನ ವಸೂಲಿ ಮಾಡುವಂತಿಲ್ಲ – ಸುಪ್ರೀಂಕೋರ್ಟ್ appeared first on Law Guide Kannada.

]]>
ನಿಯಮಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ ಅಥವಾ ಪ್ರಮಾದದಿಂದ ಯಾವುದೇ ಸರಕಾರಿ ನೌಕರರಿಗೆ ಪಾವತಿಸಲಾದ ಹೆಚ್ಚುವರಿ ವೇತನವನ್ನ ಆತನಿಂದ ಮರಳಿ ವಸೂಲಿ ಮಾಡುವಂತಿಲ್ಲ ಎಂದು ಸುಪ್ರೀಂಕರ‍್ಟ್ ತರ‍್ಪು ನೀಡಿದೆ.

ಸುಪ್ರೀಂಕೋರ್ಟ್ ನ ನ್ಯಾಯಮರ‍್ತಿಗಳಾದ ಎಸ್. ಅಬ್ದುಲ್ ನಝೀರ್ ಮತ್ತು ವಿಕ್ರಮ್ ನಾಥ್ ಅವರನ್ನೊಳಗೊಂಡ ವಿಭಾಗಿಯ ನ್ಯಾಯಪೀಠವು ಥಾಮಸ್ ಡೇನಿಯಲ್ ವಿರುದ್ಧ ಕೇರಳ ರಾಜ್ಯ ಮತ್ತಿತರರು ಪ್ರಕರಣದಲ್ಲಿ ಈ ಮಹತ್ವದ ತರ‍್ಪನ್ನು ನೀಡಿದೆ.

ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದ ಮೇಲ್ಮನವಿದಾರ ಧಾಮಸ್ ಡೇನಿಯಲ್ ಅವರು ವರ‍್ಷಿಕ ವೇತನ ಬಡ್ತಿ ಬಾಬು ಹಾಗೂ ವೇತನ ರೂಪದಲ್ಲಿ ತಮಗೆ ಪಾವತಿಸಿದ ಹೆಚ್ಚುವರಿ ಮೊತ್ತವನ್ನು ಮರು ಪಾವತಿಸಬೇಕೆಂಬ ಕೇರಳ ರಾಜ್ಯ ಸರಕಾರದ ಅದೇಶವನ್ನು ಪ್ರಶ್ನಿಸಿ ಸುಪ್ರೀಂಕರ‍್ಟ್ ಗೆ ಮೇಲ್ಮನವಿಯನ್ನು ಸಲ್ಲಿಸಿದ್ದರು.

ಈ ಮೇಲ್ಮನವಿಯನ್ನು ಆಲಿಸಿದ ಸುಪ್ರೀಂಕರ‍್ಟ್ ನ ನ್ಯಾಯಮರ‍್ತಿಗಳಾದ ಎಸ್. ಅಬ್ದುಲ್ ನಝೀರ್ ಮತ್ತು ವಿಕ್ರಮ್ ನಾಥ್ ಅವರನ್ನೊಳಗೊಂಡ ವಿಭಾಗಿಯ ನ್ಯಾಯಪೀಠ ರ‍್ಜಿಯನ್ನ ಪುರಸ್ಕರಿಸಿ ವಿಚಾರಣೆ ನಡೆಸಿತು.

ಪ್ರಕರಣದ ಹಿನ್ನೆಲೆ ಏನು…?
ಪ್ರೌಢಶಾಲಾ ಶಿಕ್ಷಕರಾಗಿ 1966ರಲ್ಲಿ ಕೊಲ್ಲಂನ ಕ್ರೇವನ್ ಅನುದಾನಿತ ಪ್ರೌಢ ಶಾಲೆಯಲ್ಲಿ ಸೇವೆಗೆ ಸೇರಿದ ಪ್ರಕರಣದ ಮೇಲ್ಮನವಿದಾರ ಥಾಮಸ್ ಡೇನಿಯಲ್, ರಸಾಯನ ಶಾಸ್ತ್ರದಲ್ಲಿ ಎಂ. ಎಸ್ಸಿ, ಸ್ನಾತಕೋತ್ತರ ಪದವಿ ವ್ಯಾಸಂಗವನ್ನು ಮುಂದುವರಿಸಲು ದಿನಾಂಕ 20.10.1972 ರಿಂದ 31.3.1973 ರ ವರೆಗೆ ಹಾಗೂ ದಿನಾಂಕ 2.7.1973 ರಿಂದ 28.3.1974 ರ ವರೆಗೆ ವೇತನ ರಹಿತ ರಜೆ ಪಡೆದಿದ್ದರು. ದಿನಾಂಕ 1.6.1989 ರಂದು ಮುಖ್ಯೋಪಾಧ್ಯಾಯರ ಹುದ್ದೆಗೆ ಬಡ್ತಿ ಪಡೆದರು. ಬಳಿಕ ಹಿರಿಯ ವೇತನ ಶ್ರೇಣಿಯಲ್ಲಿ ಕಾಲಬದ್ಧ ವೇತನ ಬಡ್ತಿ ಪಡೆದರು.

ದಿನಾಂಕ 9.10.1997 ರಂದು ಕೇರಳ ರಾಜ್ಯ ಮಹಾಲೇಖಪಾಲರ ಕಚೇರಿಯ ಲೆಕ್ಕಪರಿಶೋಧನಾ ವರದಿಯನ್ನು ಲಗತ್ತಿಸಿ ಕೊಲ್ಲಂನ ಜಿಲ್ಲಾ ಶಿಕ್ಷಣಾಧಿಕಾರಿ ಅವರು ಉನ್ನತ ವ್ಯಾಸಂಗಕ್ಕಾಗಿ ಪಡೆದ ವೇತನ ರಹಿತ ರಜೆಯ ಅವಧಿಯನ್ನು ಸೇವಾವಧಿ ಎಂದು ಪರಿಗಣಿಸಿ ವರ‍್ಷಿಕ ವೇತನ ಬಡ್ತಿ ನೀಡಿರುವುದು ನಿಯಮಾನುಸಾರ ಸರಿಯಲ್ಲ. ಸದರಿ ಅವಧಿಯನ್ನು ರ‍್ಹತಾ ಸೇವೆಯಲ್ಲಿ ಸೇರಿಸುವಂತಿಲ್ಲ, ಹಾಗಾಗಿ ಈಗಾಗಲೇ ಹೆಚ್ಚುವರಿಯಾಗಿ ಪಾವತಿಸಲಾದ ವೇತನ ಮತ್ತು ವೇತನ ಭಡ್ತಿಯನ್ನು ಮರು ಪಾವತಿ ಮಾಡತಕ್ಕದ್ದು ಎಂಬುದಾಗಿ ಥಾಮಸ್ ಡೇನಿಯಲ್ ಅವರಿಗೆ ನೋಟಿಸ್ ನೀಡಿದ್ದರು.

ಈ ನಡುವೆ ಡೇನಿಯಲ್ ಥಾಮಸ್ ದಿನಾಂಕ 31.3.1999 ರಂದು ಸೇವೆಯಿಂದ ನಿವೃತ್ತರಾದರು. ಆದರೆ ಅವರಿಗೆ ಸಿಗತಕ್ಕ ನಿವೃತ್ತಿವೇತನ, ಉಪಾದಾನ ಮುಂತಾದ ನಿವೃತ್ತಿ ಸೌಲಭ್ಯಗಳನ್ನು ತಡೆಹಿಡಿಯಲಾಯಿತು. ಇಲಾಖೆಯ ಅಧಿಕಾರಿಗಳಿಗೆ ಅವರು ಸಲ್ಲಿಸಿದ ಮನವಿಗೆ ಯಾವುದೇ ಸ್ಪಂದನೆ ಸಿಗಲಿಲ್ಲ. ಅಂತಿಮವಾಗಿ ದಿನಾಂಕ 25.5.2000 ರಂದು ಮೇಲ್ಮನವಿದಾರರು ವಸೂಲಾತಿ ನಡವಳಿಯನ್ನು ಪ್ರಶ್ನಿಸಿ ಕೇರಳ ರಾಜ್ಯ ಮುಖ್ಯಮಂತ್ರಿಗಳ ಸರ‍್ವಜನಿಕ ಕುಂದುಕೊರತೆ ಪರಿಹಾರ ವಿಭಾಗಕ್ಕೆ, ದೂರ ರ‍್ಜಿ ಸಲ್ಲಿಸಿದರು.

ವೇತನ ರಹಿತ ರಜೆಯನ್ನು ರ‍್ಹತಾ ಸೇವೆಯಲ್ಲಿ ಪರಿಗಣಿಸಲು ಸಾಧ್ಯವಿಲ್ಲ ಹಾಗೂ ಕೇರಳ ಸೇವಾ ನಿಯಮ 91A ಭಾಗ 3ರಡಿ ಎಂಎಸ್ಸಿ ಸ್ನಾತಕೋತ್ತರ ವ್ಯಾಸಂಗವು ಸರ‍್ವಜನಿಕ ಸೇವೆಗೆ ಉಪಯುಕ್ತವಲ್ಲ ಎಂಬ ಕಾರಣ ನೀಡಿ ಸರಕಾರವು ದೂರು ರ‍್ಜಿಯನ್ನು ತಿರಸ್ಕರಿಸಿತು.

ಕೇರಳ ಸರಕಾರದ ಆದೇಶದಿಂದ ಬಾಧಿತರಾದ ಮೇಲ್ಮನವಿದಾರರು ಸದರಿ ಆದೇಶದ ವಿರುದ್ಧ ಕೇರಳ ಹೈಕರ‍್ಟಿನಲ್ಲಿ ರಿಟ್ ರ‍್ಜಿ ಸಲ್ಲಿಸಿದ್ದರು. ಕೇರಳ ಹೈಕರ‍್ಟಿನ ಏಕಸದಸ್ಯ ನ್ಯಾಯಪೀಠವು ವೇತನರಹಿತ ಅವಧಿಯನ್ನು ರ‍್ಹತಾ ಸೇವೆಗೆ ಸೇರಿಸುವಂತಿಲ್ಲ ಎಂಬ ಸರಕಾರದ ವಾದವನ್ನು ಎತ್ತಿ ಹಿಡಿದು ದಿನಾಂಕ 5.1.2006 ರಂದು ರಿಟ್ ರ‍್ಜಿಯನ್ನು ವಜಾಗೊಳಿಸಿತು. ಸದರಿ ಆದೇಶದ ವಿರುದ್ಧ ಸಲ್ಲಿಸಲಾದ ರಿಟ್ ಅಪೀಲನ್ನು ದಿನಾಂಕ 1.3.2009 ರಂದು ವಿಭಾಗೀಯ ಪೀಠವು ವಜಾಗೊಳಿಸಿ ಏಕಸದಸ್ಯ ಪೀಠದ ಅದೇಶವನ್ನು ಸರ‍್ಥಿಸಿತು. ಸರಕಾರಕ್ಕೆ ಪಾವತಿಸತಕ್ಕ ಹಣವನ್ನು ರ‍್ಜಿದಾರರ ಉಪದಾನದ (ಡಿ ಸಿ.ಆರ್.ಜಿ) ಮೊತ್ತದಿಂದ ವಸೂಲು ಮಾಡತಕ್ಕದು ಎಂಬ ಆದೇಶ ನೀಡಿತು. ಕೇರಳ ಹೈಕರ‍್ಟಿನ ಆದೇಶದಿಂದ ಬಾಧಿತರಾದ ಥಾಮಸ್ ಡೇನಿಯಲ್ ಅವರು ಭಾರತದ ರ‍್ವೋಚ್ಛ ನ್ಯಾಯಾಲಯದಲ್ಲಿ ಸಿವಿಲ್ ಅಪೀಲ್ ಸಂಖ್ಯೆ, 7115/2010 ಪ್ರಕಾರ ಮೇಲ್ಮನವಿ ಸಲ್ಲಿಸಿದರು.

ಮೇಲ್ಮನವಿದಾರರ ಪರ ವಕೀಲರು ಮಂಡಿಸಲಾದ ವಾದದ ಪ್ರಕಾರ ರ‍್ಜಿದಾರರು ಮೋಸದಿಂದ ಅಥವಾ ತಪ್ಪು ಮಾಹಿತಿ ನೀಡಿ ಸರಕಾರವನ್ನು ವಂಚಿಸಿ ಹೆಚ್ಚುವರಿ ಹಣವನ್ನು ಪಡೆದಿಲ್ಲ. ಕೇರಳ ರಾಜ್ಯ ಸೇವಾ ನಿಯಮಗಳನ್ನು ತಪ್ಪಾಗಿ ವ್ಯಾಖ್ಯಾನಿಸಿದ ಪರಿಣಾಮವಾಗಿ ಈ ಪ್ರಮಾದ ಉಂಟಾಗಿದೆ. ರ‍್ಜಿದಾರರು ಈಗಾಗಲೇ ಸೇವೆಯಿಂದ ನಿವೃತ್ತರಾಗಿದ್ದಾರೆ. ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದು ಬೈಪಾಸ್ ಶಸ್ತ್ರಚಿಕಿತ್ಸೆ ಗೊಳಪಟ್ಟಿದ್ದಾರೆ. ಸಾಕಷ್ಟು ಮನವಿಗಳನ್ನು ಸಲ್ಲಿಸಿದ ಬಳಿಕ ಉಪದಾನದ ಮೊತ್ತವನ್ನು ಬಿಡುಗಡೆಗೊಳಿಸಲಾಗಿದೆ. ರ‍್ಜಿದಾರರ ಸಂಕಷ್ಟವನ್ನು ಪರಿಗಣಿಸಿ ಮೇಲ್ಮನವಿಯನ್ನು ಪುರಸ್ಕರಿಸಬೇಕೆಂದು ರ‍್ಜಿದಾರರ ಪರವಾಗಿ ಪ್ರರ‍್ಥಿಸಲಾಯಿತು.

ಕೇರಳ ಸರಕಾರದ ಪರ ವಕೀಲರು ಕೇರಳ ಹೈಕರ‍್ಟ್ ನೀಡಿದ ಆದೇಶವು ನಿಯಮಾನುಸಾರ ಸರ‍್ಪಕವಾಗಿದ್ದು ಮೇಲ್ಮನವಿಯನ್ನು ತಿರಸ್ಕರಿಸಬೇಕೆಂದು ಪ್ರರ‍್ಥಿಸಿದರು.
ಉಭಯ ಪಕ್ಷಗಾರರ ವಾದವನ್ನು ಆಲಿಸಿದ ಸುಪ್ರೀಂಕರ‍್ಟ್, ಮೇಲ್ಮನವಿದಾರರು ಮೋಸದಿಂದ ಅಥವಾ ತಪ್ಪು ಮಾಹಿತಿ ನೀಡಿ ಸರಕಾರವನ್ನು ವಂಚಿಸಿ ಹೆಚ್ಚುವರಿ ಮೊತ್ತವನ್ನು ಪಡೆದಿಲ್ಲ. ನರ‍್ದಿಷ್ಟ ನಿಯಮವನ್ನು ತಪ್ಪಾಗಿ ವ್ಯಾಖ್ಯಾನಿಸಿ ಮಾಡಲಾದ ಪಾವತಿಯನ್ನು ಹಲವು ರ‍್ಷಗಳ ಬಳಿಕ ನಿಯಮಬಾಹಿರವಾಗಿ ಮಾಡಲಾದ ಪಾವತಿ ಎಂದು ತರ‍್ಮಾನಿಸಿ ವಸೂಲು ಮಾಡುವಂತಿಲ್ಲ. ಈ ಆದೇಶವನ್ನು ಸರಕಾರಿ ನೌಕರರು ತಮ್ಮ ಹಕ್ಕು ಎಂದು ಪರಿಗಣಿಸುವಂತಿಲ್ಲ. ಆದರೆ ನ್ಯಾಯ ಹಾಗೂ ಸಮಾನತೆ ದೃಷ್ಟಿಯಿಂದ ಮತ್ತು ನ್ಯಾಯಿಕ ವಿವೇಚನೆಯ ಅಧಿಕಾರವನ್ನು ಚಲಾಯಿಸಿ ಮೇಲ್ಮನವಿದಾರನ ಸಂಕಷ್ಟವನ್ನು ಮನಗಂಡು ಈ ಆದೇಶ ನೀಡಲಾಗಿದೆ. ಎಂದಿತು.

ಕೆಳಹಂತದ ಉದ್ಯೋಗಿಯಾಗಿ ಸೇವೆ ಸಲ್ಲಿಸುವ ಸರಕಾರಿ ನೌಕರರು ತಮಗೆ ದೊರೆತ ಯಾವುದೇ ಹೆಚ್ಚುವರಿ ಪಾವತಿಯನ್ನು ನ್ಯಾಯಯುತವಾಗಿ ತಮಗೆ ಸಲ್ಲತಕ್ಕ ರ‍್ಥಿಕ ಸೌಲಭ್ಯ ಎಂದು ಭಾವಿಸಿ ತಮ್ಮ ಕುಟುಂಬದ ಅವಶ್ಯಕತೆಗಳನ್ನು ಪೂರೈಸಲು ರ‍್ಚು ಮಾಡಿರುತ್ತಾರೆ, ಎಷ್ಟೋ ಸಮಯದ ಬಳಿಕ ಸದರಿ ಮೊತ್ತ ಹೆಚ್ಚುವರಿಯೆಂದು ಕಂಡು ಬಂದಲ್ಲಿ ಅದನ್ನು ಮರು ಪಾವತಿಸಲು ಸರಕಾರಿ ನೌಕರರು ಬಹಳಷ್ಟು ಕಷ್ಟಪಡಬೇಕಾಗುತ್ತದೆ ಎಂಬ ಅಂಶವನ್ನು ಸುಪ್ರೀಂ ಕರ‍್ಟ್ ತನ್ನ ತರ‍್ಪಿನಲ್ಲಿ ಪರಿಗಣಿಸಿದೆ.

ಒಂದು ವೇಳೆ ತಮಗೆ ಹೆಚ್ಚುವರಿಯಾಗಿ ಪಾವತಿಯಾದ ಹಣ ತಪ್ಪಾಗಿ ಪಾವತಿಯಾದ ಹಣ ಎಂಬ ಸಂಗತಿಯು ಸರಕಾರಿ ನೌಕರನ ಗಮನಕ್ಕೆ, ಆ ಕೂಡಲೇ ಬಂದಲ್ಲಿ ಅಥವಾ ಹೆಚ್ಚುವರಿ ಪಾವತಿಯ ವಸೂಲಾತಿಗೆ ಸಕ್ಷಮ ಪ್ರಾಧಿಕಾರವು ನೀವು ಕ್ರಮ ಕೈಗೊಂಡಲ್ಲಿ ನ್ಯಾಯಾಲಯಗಳು ವಸೂಲಾತಿ ಆದೇಶವನ್ನು ಸರ‍್ಥಿಸಬೇಕಾಗುತ್ತದೆ ಎಂದು ತರ‍್ಪಿನಲ್ಲಿ ಅಭಿಪ್ರಾಯಪಡಲಾಗಿದೆ. ಮೇಲ್ಮನವಿದಾರರು ಸೇವೆಯಿಂದ ನಿವೃತ್ತರಾಗಿ 10 ವರ್ಷಗಳು ಕಳೆದಿವೆ. ಈಗ ವಸೂಲಾತಿ ಪ್ರಕ್ರಿಯೆ ಆರಂಭಿಸುವುದು ಸರ‍್ಥನೀಯವಲ್ಲ ಎಂಬ ಅಭಿಪ್ರಾಯದೊಂದಿಗೆ ಸುಪ್ರೀಂಕರ‍್ಟ್ ಮೇಲ್ಮನವಿಯನ್ನು ಪುರಸ್ಕರಿಸಿ ಕೇರಳ ರಾಜ್ಯ ಮುಖ್ಯಮಂತ್ರಿಗಳ ಸರ‍್ವಜನಿಕ ಕುಂದುಕೊರತೆ ಪರಿಹಾರ ವಿಭಾಗದ ಆದೇಶವನ್ನು ಹಾಗೂ ಕೇರಳ ಹೈಕರ‍್ಟಿನ ಏಕಸದಸ್ಯ ಮತ್ತು ವಿಭಾಗೀಯ ಪೀಠದ ಆದೇಶಗಳನ್ನು ರದ್ದುಪಡಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

The post ಪ್ರಮಾದದಿಂದ ಪಾವತಿಸಲಾದ ನೌಕರನ ಹೆಚ್ಚುವರಿ ವೇತನ ವಸೂಲಿ ಮಾಡುವಂತಿಲ್ಲ – ಸುಪ್ರೀಂಕೋರ್ಟ್ appeared first on Law Guide Kannada.

]]>