ಪಕ್ಕದ ಮನೆಯವರ ಮೇಲೂ ‘ವರದಕ್ಷಿಣೆ ಕಿರುಕುಳ ಕೇಸ್’ ದಾಖಲಿಸಬಹುದೇ…? ಹೈಕೋರ್ಟ್ ಅಭಿಪ್ರಾಯವೇನು?
ಬೆಂಗಳೂರು: ವರದಕ್ಷಿಣೆ ಕಿರುಕುಳ ಆರೋಪದಡಿ ಪಕ್ಕದ ಮನೆಯವರ ಮೇಲೂ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಬಹುದೇ ಎಂಬ ವಿಚಾರವಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ತಮ್ಮ ಮೇಲೆ ದಾಖಲಾಗಿರುವ ವರದಕ್ಷಿಣೆ ಕಿರುಕುಳ ಕೇಸ್ ರದ್ದುಪಡಿಸುವಂತೆ ಮನವಿ ಮಾಡಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯಮಾಡಿದ ಹೈಕೋರ್ಟ್ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಪೀಠ, ದೂರು ರದ್ದುಗೊಳಿಸಿದ್ದು, ಪಕ್ಕದ ಮನೆಯವರ ಮೇಲೆ 498ಎ ಅಡಿ ಕೇಸ್ ದಾಖಲಿಸುವಂತಿಲ್ಲ ಎಂದು ತಿಳಿಸಿದೆ.
ಮುನಿರತ್ನಮ್ಮ ಎಂಬಾಕೆ ಪತಿ, ಅತ್ತೆ, ಮಾವ, ನಾದಿನಿ ಹಾಗೂ ಪಕ್ಕದ ಮನೆ ಮಹಿಳೆ ಮೇಲೆಯೂ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆಂದು ದೂರು ದಾಖಲಿಸಿದ್ದರು. ಆಶಾ ಎಂಬುವವರ ವಿರುದ್ಧ IPC ಸೆಕ್ಷನ್ 498A, 504, 506, 323 ಹಾಗೂ 34 ಅಡಿಯಲ್ಲಿ ಆರೋಪಿಯಾಗಿಸಲಾಗಿತ್ತು.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಪೀಠವು 498ಎ ಅಡಿ ಸಂಬಂಧಿಗಳ ವಿರುದ್ಧ ದೂರು ದಾಖಲಿಸಬಹುದೇ ಹೊರತು, ಪಕ್ಕದ ಮನೆಯವರ ವಿರುದ್ಧ ದೂರಿಗೆ ಅವಕಾಶವಿಲ್ಲ. ವೈವಾಹಿಕ ವಿವಾದದಲ್ಲಿ ಪತಿ, ಪತ್ನಿ ಅಥವಾ ಇತರ ಕುಟುಂಬ ಸದಸ್ಯರ ನಡುವಿನ ವಿಷಯದಲ್ಲಿ ಪರಿಚಿತವಲ್ಲದ ವ್ಯಕ್ತಿ ಅಥವಾ ನೆರೆಹೊರೆಯವರನ್ನು IPC ಸೆಕ್ಷನ್ 498ಂ ಅಡಿಯಲ್ಲಿ ಪ್ರಕರಣಕ್ಕೆ ಒಳಪಡಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದ್ದು, ಬಳಿಕ
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
