23/04/2026

Law Guide Kannada

Online Guide

ಗರ್ಭಪಾತ: ಮಹಿಳೆಯ ಸಮ್ಮತಿಯೇ ಸರ್ವಶ್ರೇಷ್ಠ: ಹೈಕೋರ್ಟ್

ಅರ್ಜಿದಾರರಿಗೆ ತನ್ನ ಪತಿಯ ಒಪ್ಪಿಗೆಯಿಲ್ಲದೆ ಗರ್ಭಪಾತಕ್ಕೆ ಒಳಗಾಗಲು ಅವಕಾಶ ನೀಡುವಾಗ ವಿವಾಹಿತ ಮಹಿಳೆಯ ಇಚ್ಛೆ ಮತ್ತು ಒಪ್ಪಿಗೆಯೇ ಮುಖ್ಯ. ಮಹಿಳೆಯ ಸಮ್ಮತಿಯೇ ಸರ್ವಶ್ರೇಷ್ಠ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.

ಪತಿಯ ಒಪ್ಪಿಗೆ ಇಲ್ಲದೆ ಗರ್ಭಪಾತ ಮಾಡಿಸಿಕೊಳ್ಳಲು ಮಹಿಳೆಯೊಬ್ಬರಿಗೆ ಅನುಮತಿ ನೀಡಲಾಗಿದೆ. ತನ್ನ 16 ವಾರಗಳ ಗರ್ಭ ತೆಗೆಸಲು ಅನುಮತಿ ನೀಡುವಂತೆ ಕೋರಿ ಪಂಜಾಬ್ ನ 21 ವರ್ಷದ ಮಹಿಳೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ವೇಳೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ತಾನು 2025ರ ಮೇ 2 ರಂದು ಮದುವೆಯಾಗಿದ್ದು ಪತಿಯೊಂದಿಗೆ ತನ್ನ ಸಂಬಂಧ ಉತ್ತಮವಾಗಿರಲಿಲ್ಲ ಎಂದು ಅರ್ಜಿದಾರ ಮಹಿಳೆ ತಿಳಿಸಿದ್ದಾರೆ. ಹಿಂದಿನ ವಿಚಾರಣೆಯಲ್ಲಿ ಮಹಿಳೆಯ ತಪಾಸಣೆ ನಡೆಸಲು ವೈದ್ಯಕೀಯ ಮಂಡಳಿ ರಚಿಸುವಂತೆ ಸ್ನಾತಕೋತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ಕೋರ್ಟ್ ನಿರ್ದೇಶನ ನೀಡಿತ್ತು.

ವೈದ್ಯಕೀಯ ವರದಿಯ ಪ್ರಕಾರ, ಮಹಿಳೆ ಎಂಟಿಪಿ (ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯ) ಗೆ ಒಳಗಾಗಲು ವೈದ್ಯಕೀಯವಾಗಿ ಸದೃಢರಾಗಿದ್ದರು. ಗರ್ಭಪಾತಕ್ಕೆ ಒಳಗಾಗಲು ಮಹಿಳೆಯ ಸಮರ್ಥರಿದ್ದಾರೆ ಎಂದು ವೈದ್ಯಕೀಯ ವರದಿ ಹೇಳಿತು. ಈ ಹಿನ್ನೆಲೆಯಲ್ಲಿ ಮಹಿಳೆಯ ಇಚ್ಛೆ ಮತ್ತು ಒಪ್ಪಿಗೆಯಷ್ಟೇ ಗರ್ಭಪಾತಕ್ಕೆ ಮುಖ್ಯವೆಂದು ಅಭಿಪ್ರಾಯಪಟ್ಟ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಪತಿ ಒಪ್ಪಿಗೆ ಇಲ್ಲದೆ ಗರ್ಭಪಾತ ನಡೆಸಲು ಮಹಿಳೆಗೆ ಅನುಮತಿ ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.