23/04/2026

Law Guide Kannada

Online Guide

ಕೇವಲ ನೋಂದಣಿಯಾದ್ರೆ ಸಾಲದು: ಆಸ್ತಿಯ ಕಾನೂನುಬದ್ಧ ಮಾಲೀಕರೆನಿಸಿಕೊಳ್ಳುಲು ಈ 12 ದಾಖಲೆಗಳು ಅತ್ಯಗತ್ಯ

ನವದೆಹಲಿ: ಪ್ರತಿಯೊಬ್ಬರಿಗೂ ಆಸ್ತಿ ಅಥವಾ ಜಮೀನು ಖರೀದಿಸುವ ಒಂದು ದೊಡ್ಡ ಕನಸು, ಆಸೆ ಇದ್ದೇ ಇರುತ್ತದೆ. ಆದರೆ ಆಸ್ತಿ ಖರೀದಿಗೆ ಹತ್ತು ಹಲವು ನಿಯಮಗಳು, ದಾಖಲೆಗಳನ್ನ ಒದಗಿಸಬೇಕು ಈ ಹಿಂದೆ ಕೇವಲ Sಚಿಟe ಆeeಜ ಅಥವಾ ನೋಂದಣಿ (Registration) ಮಾಡಿಸಿದರೆ ತಾವೇ ಆ ಆಸ್ತಿಯ ಸಂಪೂರ್ಣ ಮಾಲೀಕರು ಎಂದು ಜನರು ನಂಬಿದ್ದರು. ಆದರೆ, ಈಗ ಕೇವಲ ನೋಂದಣಿಯಾದ ಮಾತ್ರಕ್ಕೆ ಆಸ್ತಿ ಮಾಲೀಕರಾಗುವುದಿಲ್ಲ. ಆಸ್ತಿಯ ಸಂಪೂರ್ಣ ಹಕ್ಕು ಪಡೆಯಲು, ಆಸ್ತಿಯ ಕಾನೂನುಬದ್ಧ ಮಾಲೀಕರೆನಿಸಿಕೊಳ್ಳುಲು 12 ದಾಖಲೆಗಳು ಅಗತ್ಯ.

ಹೌದು ಇಂತಹದೊಂದು ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ. ನ್ಯಾಯಾಲಯದ ಪ್ರಕಾರ, ಕೇವಲ ನೋಂದಣಿ ದಾಖಲೆ ಇರುವುದರಿಂದ ನೀವು ಆಸ್ತಿಯ ಕಾನೂನುಬದ್ಧ ಮಾಲೀಕರೆನಿಸಿಕೊಳ್ಳುವುದಿಲ್ಲ. “ಆಸ್ತಿ ನೋಂದಣಿಯು ಒಬ್ಬ ವ್ಯಕ್ತಿಯ ಹಕ್ಕನ್ನು ಬೆಂಬಲಿಸಬಹುದೇ ಹೊರತು, ಅದು ಆ ಆಸ್ತಿಯ ಮೇಲಿನ ಸಂಪೂರ್ಣ ಕಾನೂನುಬದ್ಧ ಸ್ವಾಧೀನ ಅಥವಾ ಅಂತಿಮ ಮಾಲೀಕತ್ವದ ಪುರಾವೆಯಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.

ಅಂದರೆ ನಿಮ್ಮ ಹೆಸರಿಗೆ ಆಸ್ತಿ ನೋಂದಣಿಯಾಗಿದ್ದರೂ, ಆಸ್ತಿಯ ಮೂಲ ಹಕ್ಕುಗಳು (Title Rights) ಸರಿಯಿಲ್ಲದಿದ್ದರೆ ಅಥವಾ ಬೇರೆ ಪೂರಕ ದಾಖಲೆಗಳಿಲ್ಲದಿದ್ದರೆ ನಿಮ್ಮ ಮಾಲೀಕತ್ವವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ವಂಚನೆ ಪ್ರಕರಣಗಳನ್ನು ತಡೆಯಲು ಮತ್ತು ಆಸ್ತಿ ವಿವಾದಗಳನ್ನು ಕಡಿಮೆ ಮಾಡಲು ಸುಪ್ರೀಂಕೋರ್ಟ್ ಈ ಕಠಿಣ ನಿಲುವನ್ನು ತಳೆದಿದೆ.

ಮಾಲೀಕತ್ವ ಸಾಬೀತುಪಡಿಸಲು ಅಥವಾ ಆಸ್ತಿಯ ಸಂಪೂರ್ಣ ಹಕ್ಕು ಪಡೆಯಲು ಈ ಕೆಳಕಂಡ ಪ್ರಮುಖ 12 ದಾಖಲೆಗಳು ಇರುವುದು ಅತ್ಯಗತ್ಯ
ಆಸ್ತಿಯನ್ನು ಖರೀದಿಸಿದಾಗ ಅಥವಾ ಉತ್ತರಾಧಿಕಾರವಾಗಿ ಪಡೆದಾಗ ಈ ಕೆಳಗಿನ 12 ದಾಖಲೆಗಳನ್ನು ನಿಮ್ಮ ಹೆಸರಿನಲ್ಲಿ ಹೊಂದುವುದು ಕಡ್ಡಾಯವಾಗಿದೆ.

ಮಾರಾಟ ಪತ್ರ (Sale Deed): ಆಸ್ತಿಯನ್ನು ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾಯಿಸುವ ಮೂಲ ದಾಖಲೆ.

ಮದರ್ ಡೀಡ್ (Mother Deed): ಆಸ್ತಿಯ ಹಿಂದಿನ ಎಲ್ಲಾ ವಹಿವಾಟುಗಳ ಇತಿಹಾಸ ತಿಳಿಸುವ ತಾಯಿ ದಾಖಲೆ. ಬ್ಯಾಂಕ್ ಸಾಲ ಪಡೆಯಲು ಇದು ಅತೀ ಮುಖ್ಯ.

ಮಾರಾಟ ಮತ್ತು ಖರೀದಿ ಒಪ್ಪಂದ (SPA): ಖರೀದಿ ಬೆಲೆ ಮತ್ತು ಷರತ್ತುಗಳನ್ನು ಒಳಗೊಂಡಿರುವ ಒಪ್ಪಂದದ ಪ್ರತಿ.

ಸ್ವಾಧೀನ ಪತ್ರ (Possession Letter): ಬಿಲ್ಡರ್ನಿಂದ ಖರೀದಿದಾರರಿಗೆ ಆಸ್ತಿಯ ಹಸ್ತಾಂತರವನ್ನು ದೃಢೀಕರಿಸುವ ಪತ್ರ.

ಕಟ್ಟಡ ಅನುಮೋದನೆ ಯೋಜನೆ (Building Approval Plan): ಮನೆ ಕಟ್ಟುವ ಮುನ್ನ ಸ್ಥಳೀಯ ಪಾಲಿಕೆ ಅಥವಾ ಪ್ರಾಧಿಕಾರ ನೀಡಿದ ಅನುಮತಿ ಪತ್ರ.

ಪೂರ್ಣಗೊಳಿಸುವಿಕೆ ಪ್ರಮಾಣಪತ್ರ (Completion Certificate): ಕಟ್ಟಡವು ನಿಯಮಗಳ ಪ್ರಕಾರ ಪೂರ್ಣಗೊಂಡಿದೆ ಎಂದು ತಿಳಿಸುವ ದಾಖಲೆ. ನೀರು ಮತ್ತು ವಿದ್ಯುತ್ ಸಂಪರ್ಕಕ್ಕೆ ಇದು ಅಗತ್ಯ.

ಖಾತೆ ಪ್ರಮಾಣಪತ್ರ (Khata Certificate): ಆಸ್ತಿ ತೆರಿಗೆ ಪಾವತಿಸಲು ಮತ್ತು ಕಂದಾಯ ದಾಖಲೆಗಳಲ್ಲಿ ಹೆಸರು ಬದಲಾಯಿಸಲು ಇರುವ ಪ್ರಮುಖ ಪತ್ರ.

ಹಂಚಿಕೆ ಪತ್ರ (Allotment Letter): ನಿರ್ಮಾಣ ಹಂತದಲ್ಲಿರುವ ಆಸ್ತಿಯನ್ನು ಕಾಯ್ದಿರಿಸಿದಾಗ ಬಿಲ್ಡರ್ ನೀಡುವ ದಾಖಲೆ.


ಹೊರೆ ಪ್ರಮಾಣಪತ್ರ (Encumbrance Certificate – EC): ಆಸ್ತಿಯ ಮೇಲೆ ಯಾವುದೇ ಸಾಲ ಅಥವಾ ಕಾನೂನು ವಿವಾದಗಳಿಲ್ಲ ಎಂದು ಸಾಬೀತುಪಡಿಸುವ 15 ಅಥವಾ 30 ವರ್ಷಗಳ ವರದಿ.


ನಿರಾಕ್ಷೇಪಣಾ ಪ್ರಮಾಣಪತ್ರ (NOC): ಬ್ಯಾಂಕ್ ಸಾಲ ತೀರಿಸಿದ ನಂತರ ಅಥವಾ ಯಾವುದೇ ಪ್ರಾಧಿಕಾರದಿಂದ ಆಕ್ಷೇಪವಿಲ್ಲವೆಂದು ಪಡೆಯುವ ಪತ್ರ.


ಗುರುತಿನ ಪುರಾವೆ (ID Proof): ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಅಥವಾ ಪಾಸ್ ಪೋರ್ಟ್ನಂತಹ ಅಧಿಕೃತ ದಾಖಲೆಗಳು.


RERA ಅನುಸರಣೆ: ರಿಯಲ್ ಎಸ್ಟೇಟ್ ಕಾಯ್ದೆ 2016 ರ ಅಡಿಯಲ್ಲಿ ಯೋಜನೆ ನೋಂದಣಿಯಾಗಿರುವುದನ್ನು ಖಚಿತಪಡಿಸಿಕೊಳ್ಳುವ ದಾಖಲೆ.


ಈ ಮೇಲಿನ ದಾಖಲೆಗಳನ್ನ ಹೊಂದಿದ್ದರೆ ಮಾತ್ರ ಆಸ್ತಿಯ ಕಾನೂನುಬದ್ಧ ಮಾಲೀಕರೆನಿಸಿಕೊಳ್ಳುಲು ಸಾಧ್ಯ. ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಇನ್ನು ಮುಂದೆ ಕೇವಲ ಹಣ ನೀಡಿ ನೋಂದಣಿ ಮಾಡಿಸಿಕೊಳ್ಳುವುದು ಸಾಕಾಗುವುದಿಲ್ಲ. ಖರೀದಿದಾರರು ಪ್ರತಿ ಹಂತದಲ್ಲೂ ಹೆಚ್ಚು ಜಾಗರೂಕರಾಗಿರಬೇಕು. ಕಾನೂನು ತಜ್ಞರ ಸಲಹೆ: ಆಸ್ತಿ ಖರೀದಿಸುವ ಮುನ್ನ ನುರಿತ ವಕೀಲರಿಂದ ದಾಖಲೆಗಳ ತಪಾಸಣೆ ಮಾಡಿಸುವುದು ಕಡ್ಡಾಯವಾಗಿದೆ. ಆಸ್ತಿ ಬೆಲೆಗಳ ಮೇಲೆ ಇದು ಪರಿಣಾಮ ಬೀರಬಹುದು, ಏಕೆಂದರೆ ಈಗ ಕಾನೂನುಬದ್ಧ ಮಾಲೀಕತ್ವಕ್ಕೆ ಹೆಚ್ಚು ಮೌಲ್ಯ ಸಿಗಲಿದೆ. ಸುಳ್ಳು ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ ಮಾಡುವವರಿಗೆ ಈ ತೀರ್ಪು ದೊಡ್ಡ ಹೊಡೆತ ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.