ವಕೀಲನಿಗೆ ಜೀವಾವಧಿ ಶಿಕ್ಷೆ ಮತ್ತು 5.10 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್: ಕಾರಣ ಏನು…?
ಲಖನೌ: ದಲಿತ ಮಹಿಳೆಯ ಹೆಸರಿನಲ್ಲಿ ತನ್ನ ವಿರೋಧಿಗಳ ವಿರುದ್ದ ನಕಲಿ ಪ್ರಕರಣಗಳನ್ನ ದಾಖಲಿಸಿದ್ದ ವಕೀಲನೊಬ್ಬನಿಗೆ ಜೀವಾವಧಿ ಶಿಕ್ಷೆ ಮತ್ತು 5.10 ಲಕ್ಷ ರೂ. ದಂಡವನ್ನ ವಿಧಿಸಿ ಲಕ್ನೋ ನ್ಯಾಯಾಲಯ ತೀರ್ಪು ನೀಡಿದೆ.
ವಿಶೇಷ ನ್ಯಾಯಾಧೀಶ (ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ) ವಿವೇಕಾನಂದ ಶರಣ್ ತ್ರಿಪಾಠಿ ಅವರು ವಕೀಲನಾದ ಪರಮಾನಂದ ಗುಪ್ತಾ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ವಕೀಲ ಪರಮಾನಂದ ದಲಿತ ಮಹಿಳೆಯ ಗುರುತು ದುರುಪಯೋಗಪಡಿಸಿ ಎದುರಾಳಿಗಳ ವಿರುದ್ಧ ನಕಲಿ ಪ್ರಕರಣ ದಾಖಲಿಸಿದ್ದನು.
ವಕೀಲ ಪರಮಾನಂದ ಗುಪ್ತಾ ತನ್ನ ಎದುರಾಳಿ ಅರವಿಂದ ಯಾದವ್ ಎಂಬುವವರ ವಿರುದ್ದ ವಿರುದ್ಧ 18 ಪ್ರಕರಣಗಳನ್ನು ದಾಖಲಿಸಿದ್ದನು. ಅಲ್ಲದೆ ಪೂಜಾ ರಾವತ್ ಮೂಲಕ 11 ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದ. ಇವುಗಳಲ್ಲಿ ಕೆಲವು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಇದ್ದರೆ, ಕೆಲವು ಪ್ರಕರಣಗಳು ಅತ್ಯಾಚಾರ ಮತ್ತು ಕಿರುಕುಳ ಆರೋಪ ಹೊರಿಸಿಯೂ ದಾಖಲಿಸಿದ್ದ.
ಅಲಹಾಬಾದ್ ಹೈಕೋರ್ಟ್ ನಲ್ಲಿ ಅರ್ಜಿಗಳು ವಿಚಾರಣೆಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ 2025ರ ಮಾರ್ಚ್ 5ರಂದು ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತ್ತು. ಇದೀಗ ದಲಿತ ಗುರುತು ಬಳಸಿ ಕಾನೂನು ದುರುಪಯೋಗಪಡಿಸಿಕೊಳ್ಳಳು ಯತ್ನಿಸಿದ್ದಕ್ಕಾಗಿ ವಕೀಲನಿಗೆ ಜೀವಾವಧಿ ಶಿಕ್ಷಯಾಗಿದ್ದರೇ ಮಹಿಳೆಗೆ ಷರತ್ತುಬದ್ಧ ಕ್ಷಮದಾನ ದೊರೆತಿದೆ ಎನ್ನಲಾಗಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
