07/03/2026

Law Guide Kannada

Online Guide

ಭೂ ಸುಧಾರಣಾ ಕಾಯ್ದೆ: ನ್ಯಾಯಮಂಡಳಿ ಆದೇಶದ ಸಿಂಧುತ್ವ ನಿರ್ಧರಿಸಲು ಸಿವಿಲ್ ಕೋರ್ಟ್ ಗೆ ನ್ಯಾಯವ್ಯಾಪ್ತಿ ಇದೆಯೇ…?

ಬೆಂಗಳೂರು: ಭೂ ಸುಧಾರಣಾ ಕಾಯ್ದೆ ಅಡಿಯಲ್ಲಿ ಭೂ ನ್ಯಾಯಮಂಡಳಿ ನೀಡಿದ ಆದೇಶದ ಸಿಂಧುತ್ವ ನಿರ್ಧರಿಸುವ ಅಧಿಕಾರ ಸಿವಿಲ್ ನ್ಯಾಯಾಲಯಕ್ಕೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಈ ಕುರಿತು ವಿಚಾರಣೆ ನಡೆಸಿದ ಕ ಹೈಕೋರ್ಟ್ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠವು ಭೂ ಸುಧಾರಣಾ ಕಾಯ್ದೆ ಅಡಿಯಲ್ಲಿ ಭೂ ನ್ಯಾಯಮಂಡಳಿ ಮಾಡಿದ ಆದೇಶದ ಸಿಂಧುತ್ವ ನಿರ್ಧರಿಸಲು ಸಿವಿಲ್ ಕೋರ್ಟ್ ಗೆ ನ್ಯಾಯವ್ಯಾಪ್ತಿ ಇಲ್ಲ. ಭೂ ಸುಧಾರಣಾ ಕಾಯ್ದೆಯಲ್ಲಿ ಇದಕ್ಕೆ ನಿಷೇಧ ಇದೆ ಎಂದು ಹೇಳಿದೆ.

ಒಂದು ವೇಳೆ, ಸಿವಿಲ್ ನ್ಯಾಯಾಲಯವು ಭೂ ನ್ಯಾಯ ಮಂಡಳಿಯ ಆದೇಶವನ್ನು ರದ್ದು ಪಡಿಸಿದ್ದಲ್ಲಿ ಸದರಿ ಆದೇಶವು ಕಾನೂನಿನಡಿ ಊರ್ಜಿತವಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.