05/03/2026

Law Guide Kannada

Online Guide

ನ್ಯಾ. ಜಿ.ಆರ್.ಸ್ವಾಮಿನಾಥನ್ ಗುರಿಯಾಗಿಸಿ ಬರೆಯಲಾಗಿದ್ದ ಪುಸ್ತಕ ಬಿಡುಗಡೆಗೆ ಬಿತ್ತು ತಡೆಯಾಜ್ಞೆ

ಚೆನ್ನೈ: ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರನ್ನು ಟಾರ್ಗೆಟ್ ಮಾಡಿ ಬರೆಯಲಾಗಿದ್ದ ತಿರುಪ್ಪರನಕುಂದ್ರನ್ ಅಫೇರ್, ಜಿಆರ್ಎಸ್ ನ್ಯಾಯಾಧೀಶರೇ ಅಥವಾ’ ಎಂಬ ಶೀರ್ಷಿಕೆಯ ಪುಸ್ತಕವನ್ನು ಬಿಡುಗಡೆ ಮಾಡುವುದಕ್ಕೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಅರುಲ್ ಮುರುಗನ್ ಅವರಿದ್ದ ಪೀಠವು ನವೀನ್ ಪ್ರಸಾದ್ ವಿರುದ್ಧ ತಮಿಳುನಾಡು ರಾಜ್ಯ ಪ್ರಕರಣದಲ್ಲಿ ಈ ಆದೇಶವನ್ನು ಹೊರಡಿಸಿದೆ.

‘ತಿರುಪ್ಪರಂಕುಂದ್ರನ್ ಅಫೇರ್: ಜಿಆರ್ಎಸ್ ಒಬ್ಬ ನ್ಯಾಯಾಧೀಶರೇ ಅಥವಾ ಎಂಬ ಶೀರ್ಷಿಕೆಯ ಪುಸ್ತಕದ ಪ್ರತಿಗಳನ್ನು ವಶಪಡಿಸಿಕೊಳ್ಳಲು ರಾಜ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ವಕೀಲ ಪಿ ನವೀನ್ ಪ್ರಸಾದ್ ರಿಟ್ ಅರ್ಜಿ ಸಲ್ಲಿಸಿದ್ದರು. ಚೆನ್ನೈ ಪುಸ್ತಕ ಮೇಳ ಸೇರಿದಂತೆ ಸಾರ್ವಜನಿಕ ವೇದಿಕೆಗಳಲ್ಲಿ ಪುಸ್ತಕದ ಪ್ರದರ್ಶನ ಅಥವಾ ಮಾರಾಟವನ್ನು ನಿರ್ಬಂಧಿಸುವಂತೆ ಸಹ ಅರ್ಜಿದಾರರು ಮನವಿ ಮಾಡಿದ್ದರು.

ಪುಸ್ತಕವು ನ್ಯಾಯಮೂರ್ತಿ ಜಿ.ಆರ್.ಸ್ವಾಮಿನಾಥನ್ ವಿರುದ್ಧ ನಿರ್ದೇಶಿಸಲ್ಪಟ್ಟಿದೆ ಮತ್ತು ಪ್ರಕಟಣೆಯ ಶೀರ್ಷಿಕೆ ಮತ್ತು ಮುಖಪುಟ ವಿನ್ಯಾಸವು ಅವಮಾನಕರ, ನಿಂದನೀಯ ಮತ್ತು ಅವಹೇಳನಕಾರಿ” ಎಂದು ಹೇಳಲಾಗಿದೆ. ಮುಖಪುಟವು ನ್ಯಾಯಾಧೀಶರನ್ನು ಅಪಹಾಸ್ಯ ಮಾಡುವ ಮತ್ತು ಅಸಹ್ಯಕರ ರೀತಿಯಲ್ಲಿ ಚಿತ್ರಿಸಿದೆ, ವೈಯಕ್ತಿಕ ನ್ಯಾಯಾಧೀಶರು ಮತ್ತು ನ್ಯಾಯಾಂಗ ಸಂಸ್ಥೆ ಎರಡನ್ನೂ ಅವಮಾನಿಸುವ ಸ್ಪಷ್ಟ ಉದ್ದೇಶದಿಂದ ಇದು ಕಾರ್ಯನಿರ್ವಹಿಸುತ್ತಿದೆ ಎಂದು ಪಿಐಎಲ್ ಆರೋಪಿಸಿದೆ.

ತಮಿಳುನಾಡಿನ ಗೃಹ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು, ಚೆನ್ನೈ ಪೊಲೀಸ್ ಆಯುಕ್ತರು, ಸ್ಥಳೀಯ ಸ್ಟೇಷನ್ ಹೌಸ್ ಅಧಿಕಾರಿ ಮತ್ತು ಪ್ರಕಾಶಕರನ್ನು ಸದ್ದಿ ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಜನವರಿ 6 ರಂದು ಅಧಿಕಾರಿಗಳಿಗೆ ಮನವಿ ನೀಡಿದ್ದರೂ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ನ್ಯಾಯಪೀಠಕ್ಕೆ ತಿಳಿಸಿದರು.

ಈ ಕುರಿತು ವಿಚಾರಣೆ ನಡೆಸಿದ ನ್ಯಾಯಪೀಠವು, ತಿರುಪ್ಪರನಕುಂದ್ರನ್ ಅಫೇರ್, ಜಿಆರ್ಎಸ್ ನ್ಯಾಯಾಧೀಶರೇ ಅಥವಾ’ ಎಂಬ ಶೀರ್ಷಿಕೆಯ ಪುಸ್ತಕದ ಶೀರ್ಷಿಕೆ ಮತ್ತು ಮುಖಪುಟ ವಿನ್ಯಾಸವು ಅವಮಾನಕರ, ನಿಂದನೀಯ ಮತ್ತು ಅವಹೇಳನಕಾರಿ’ಯಾಗಿದೆ. ಈ ವಿಷಯವು ನ್ಯಾಯಾಂಗದ ಘನತೆ ಮತ್ತು ಸಾಂಸ್ಥಿಕ ಅಧಿಕಾರಕ್ಕೆ ಸಂಬಂಧಿಸಿದ ಗಂಭೀರ ಕಳವಳಗಳನ್ನು ಹುಟ್ಟುಹಾಕುತ್ತದೆ ಎಂದು ತಿಳಿಸಿತು.

ಪುಸ್ತಕವನ್ನು ಪ್ರಕಟಿಸಿದ ಕೀ ಕಾಟ್ಟು ಪ್ರಕಾಶಕರ ವಿರುದ್ಧ ನ್ಯಾಯಾಲಯವು ನ್ಯಾಯಾಂಗ ನಿಂದನೆ ಕ್ರಮಗಳನ್ನು ಪ್ರಾರಂಭಿಸಿದ್ದು ಮತ್ತು ಆಕ್ಷೇಪಾರ್ಹ ಪುಸ್ತಕಗಳನ್ನು ವಶಪಡಿಸಿಕೊಳ್ಳಲು ನ್ಯಾಯಪೀಠವು ಆದೇಶಿಸಿತು.

‘ಚೆನ್ನೈ ಪುಸ್ತಕ ಮೇಳದಲ್ಲಿ ಬಿಡುಗಡೆ ಮಾಡಲು/ಪ್ರಕಟಿಸಲು ಪ್ರಸ್ತಾಪಿಸಲಾದ ಪುಸ್ತಕದ ಶೀರ್ಷಿಕೆ ಪುಟ/ಮುಖಪುಟ ಎಂದು ಹೇಳಲಾದ ಸದರಿ ದಾಖಲೆಯನ್ನು ಒಮ್ಮೆಲೇ ಪರಿಶೀಲಿಸಿದಾಗ, ಚಿತ್ರಾತ್ಮಕ ಪ್ರಾತಿನಿಧ್ಯ, ಮಂಗ್ಯಚಿತ್ರ ಮತ್ತು ಬಳಸಲಾದ ಅಭಿವ್ಯಕ್ತಿಗಳು/ಪದಗಳು ಹೆಚ್ಚು ಅವಹೇಳನಕಾರಿ ಮಾತ್ರವಲ್ಲದೆ, ವಾಸ್ತವಿಕವಾಗಿ ನಿಂದನೀಯವಾಗಿವೆ ಎಂದು ತೋರಿಸುತ್ತದೆ. ಚಿತ್ರಾತ್ಮಕ ಪ್ರಾತಿನಿಧ್ಯವು ಈ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ಮುಖ ಮತ್ತು ಹೆಸರಿನೊಂದಿಗೆ ನೇರವಾಗಿ ಗಮನಸೆಳೆದಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಪುಸ್ತಕದ ಶೀರ್ಷಿಕೆ ಮತ್ತು ಅದರ ಮುಖವುಟದಲ್ಲಿನ ದೃಶ್ಯ ಚಿತ್ರಣವನ್ನು ನ್ಯಾಯಾಲಯವು ವಿಚಾರಣೆಯ ಸಮಯದಲ್ಲಿ ಗಮನಿಸಿತು ಮತ್ತು ಅಂತಹ ಪ್ರಸ್ತುತಿಯು ಕಾನೂನುಬದ ಟೀಕೆಯನ್ನು ನೀಡುವ ಬದಲು ಹಾಲಿ ನ್ಯಾಯಾಧೀಶರನ್ನು ಅಪಹಾಸ್ಯ ಮಾಡುವ ಉದ್ದೇಶದಿಂದ ಕಂಡುಬಂದಿದೆ ಎಂದು ಗಮನಿಸಿತು.

ತೀರ್ಪುಗಳ ಟೀಕೆಗೆ ಅವಕಾಶವಿದ್ದರೂ, ನ್ಯಾಯಾಧೀಶರ ಮೇಲಿನ ವೈಯಕ್ತಿಕ ದಾಳಿಗಳು ವಿಶೇಷವಾಗಿ ಅಣಕಿಸುವ ದೃಶ್ಯಗಳು ಮತ್ತು ಭಾಷೆಯ ಮೂಲಕ -ವಾಕ್ ಸ್ವಾತಂತ್ರದ ನೆಪದಲ್ಲಿ ಸಮರ್ಧಿಸಲಾಗುವುದಿಲ್ಲ ಎಂದು ನ್ಯಾಯಪೀಠ ಗಮನಿಸಿತು. ಪ್ರಕಟಣೆಗಳ ಮೂಲಕ ಹಾಲಿ ನ್ಯಾಯಾಧೀಶರನ್ನು ಅವಹೇಳನ ಮಾಡುವುದು ನ್ಯಾಯಾಂಗ ಸಂಸ್ಥೆಯ ಮೇಲಿನ ಸಾರ್ವಜನಿಕ ವಿಶ್ವಾಸದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು.

ಅದ್ದರಿಂದ ಪುಸ್ತಕದ ಬಿಡುಗಡೆ, ಪ್ರಸಾರ ಮತ್ತು ಮಾರಾಟಕ್ಕೆ ಹೈಕೋರ್ಟ್ ನ್ಯಾಯಪೀಠವು ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಮುಂದಿನ ಆದೇಶದವರೆಗೆ ಚೆನ್ನೈ ಪುಸ್ತಕ ಮೇಳದಲ್ಲಿ ಪುಸ್ತಕವನ್ನು ಪ್ರದರ್ಶಿಸಬಾರದು ಅಥವಾ ಮಾರಾಟ ಮಾಡಬಾರದು ಎಂದು ಪೊಲೀಸ್ ಅಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.