06/03/2026

Law Guide Kannada

Online Guide

ಭ್ರಷ್ಟಾಚಾರ ಕೇಸ್: ಮೃತ ಸರ್ಕಾರಿ ನೌಕರನ ಕಾನೂನು ವಾರಸುದಾರ ಬಳಿ ದಂಡ ವಸೂಲಿಗೆ ಹೈಕೋರ್ಟ್ ಆದೇಶ

ತಿರುವನಂತಪುರಂ: ಮೃತ ಸರ್ಕಾರಿ ನೌಕರನ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ದೋಷಾರೋಪಣೆಯನ್ನು ಸ್ಥಿರಪಡಿಸಿದ ಕೇರಳ ಹೈಕೋರ್ಟ್, ದಂಡದ ಮೊತ್ತವನ್ನು ಮೃತ ಸರ್ಕಾರಿ ನೌಕರನ ಕಾನೂನು ವಾರಸುದಾರರ ಬಳಿಯೇ ವಸೂಲು ಮಾಡುವಂತೆ ಆದೇಶಿಸಿತು.

ಕುಲಶೇಖರಪುರಂ ನೀರಾವರಿ ಯೋಜನೆಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಇಬ್ಬರ ವಿರುದ್ಧ ವಿಧಿಸಲಾದ ದೋಷಾರೋಪಣೆಯನ್ನು ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಎ. ಬದರುದ್ದೀನ್ ಅವರಿದ್ದ ಪೀಠವು ಸ್ಥಿರಪಡಿಸಿದೆ. ಆರೋಪಿಗಳಲ್ಲೊಬ್ಬರು ಸಲ್ಲಿಸಿದ ಮೇಲ್ಮನವಿಯನ್ನು ತಿರಸ್ಕರಿಸಿ, ಇನ್ನೊಬ್ಬ ಆರೋಪಿಯ ಶಿಕ್ಷೆಯನ್ನು ಅವನು ಮೃತಪಟ್ಟಿರುವುದರಿಂದ ಪರಿಷ್ಕರಿಸಿತು.

ಕೆಲಸ ಕೈಗೊಂಡಿದ್ದ ಗುತ್ತಿಗೆದಾರನೊಂದಿಗೆ ಸೂಪರಿಂಟೆಂಡಿಂಗ್ ಎಂಜಿನಿಯರ್ ಅಪರಾಧ ಸಂಚು ರೂಪಿಸಿ, ಅಕ್ರಮ ಹಣಕಾಸು ಲಾಭ ಪಡೆಯುವ ಸಾಮಾನ್ಯ ಉದ್ದೇಶದಿಂದ ಲಿಮಿಟೆಡ್ ಕಂಪೆಟಿಟಿವ್ ಬಿಡ್ಡಿಂಗ್ (LCB) ನಿಯಮಗಳನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟ ಮತ್ತು ಅಕ್ರಮವೆಸಗಿದ್ದಾರೆ. ಗುತ್ತಿಗೆದಾರನು ತಾನು ಅರ್ಹನಾಗಿದ್ದದರಿಗಿಂತ ಹೆಚ್ಚುವರಿ ದರಗಳನ್ನು ಕೇಳಿಕೊಂಡಿದ್ದು. ಸೂಪರಿಂಟೆಂಡಿಂಗ್ ಎಂಜಿನಿಯರ್ ಒಟ್ಟು ರೂ. 8,65,000 ಹೆಚ್ಚುವರಿ ಮೊತ್ತವನ್ನು ಅನುಮೋದಿಸಿ ಸರ್ಕಾರಕ್ಕೆ ಸಮಾನ ಪ್ರಮಾಣದ ನಷ್ಟ ಉಂಟುಮಾಡಿದನೆಂದು ಅಭಿಯೋಜಕರು ಆರೋಪಿಸಿದರು.

ಮೂರನೇ ಆರೋಪಿಯಾದ ಕಾರ್ಯನಿರ್ವಾಹಕ ಎಂಜಿನಿಯರ್ ತನ್ನ ಅಧಿಕೃತ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಗುತ್ತಿಗೆದಾರನೊಂದಿಗೆ ಸಂಚು ರೂಪಿಸಿ, ಐಅಃ ನಿಯಮಗಳನ್ನು ಪರಿಗಣಿಸದೆ ತಿರಸ್ಕರಿಸಬೇಕಾಗಿದ್ದ ಕೆಲವು ಬಿಲ್ಲುಗಳನ್ನು ಅನುಮೋದಿಸಿದ್ಧಾನೆ. ಹೀಗೆ ಗುತ್ತಿಗೆದಾರನು ರೂ. 16 ಲಕ್ಷಕ್ಕಿಂತ ಹೆಚ್ಚು ಅಕ್ರಮ ಆರ್ಥಿಕ ಲಾಭಪಡೆದನೆ ಎಂದು ಆರೋಪಿಸಿದರು.

ತಿರುವನಂತಪುರಂನ ಎನ್ ಕ್ವೈರಿ ಕಮಿಷನರ್ ಮತ್ತು ವಿಶೇಷ ನ್ಯಾಯಾಧೀಶರು 1ನೇ ಮತ್ತು 2ನೇ ಆರೋಪಿಗಳನ್ನು ಭ್ರಷ್ಟಾಚಾರ ತಡೆ ಕಾಯಿದೆ 1988 ರ ಸೆಕ್ಷನ್ 13(1)(d) ಸಂಯುಕ್ತವಾಗಿ 13(2) ಮತ್ತು ಭಾರತೀಯ ದಂಡ ಸಂಹಿತೆ 1860 ರ ಸೆಕ್ಷನ್ 120ಃ ಅಡಿಯಲ್ಲಿ ದೋಷಿಗಳೆಂದು ಘೋಷಿಸಿ, ಅವರಿಗೆ ತಲಾ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ. 17 ಲಕ್ಷ ದಂಡ ವಿಧಿಸಿದರು. 3ನೇ ಆರೋಪಿಯನ್ನು ಬಿಡುಗಡೆ ಮಾಡಲಾಯಿತು.

ಈ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಇವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಯುವ ವೇಳೆ 1ನೇ ಆರೋಪಿಯು ಮೃತರಾದರು. ಅವರ ಕಾನೂನು ವಾರಸುದಾರರನ್ನು ಹೆಚ್ಚುವರಿ ಮೇಲ್ಮನವಿದಾರರಾಗಿ ಸೇರಿಸಲಾಯಿತು.

ನ್ಯಾಯಾಲಯವು ಸಾಕ್ಷ್ಯಗಳನ್ನು ಪುನರ್ ಮೌಲ್ಯಮಾಪನ ಮಾಡಿ, ಅನುಮೋದಿಸಲಾದ ಮೊತ್ತಗಳು ಒಪ್ಪಂದದ ಷರತ್ತುಗಳಿಗೆ ಅನುಗುಣವಾಗಿರಲಿಲ್ಲ ಎಂಬ ನಿರ್ಣಯಕ್ಕೆ ಬಂತು. ಸೂಪರಿಂಟೆಂಡಿಂಗ್ ಎಂಜಿನಿಯರ್ ನಿವೃತ್ತಿಯ ದಿನವೇ ಗುತ್ತಿಗೆದಾರನ ಬೇಡಿಕೆಗಳನ್ನು ಸರಿಯಾಗಿ ಪರಿಶೀಲಿಸದೆ ಅನುಮೋದಿಸಿದ್ಧಾನೆಂಬುದನ್ನೂ ಗಮನಿಸಿತು. ಹೀಗಾಗಿ, 1ನೇ ಮತ್ತು 2ನೇ ಆರೋಪಿಗಳ ನಡುವೆ ರೂಪುಗೊಂಡ ಸಂಚಿನ ಭಾಗವಾಗಿ, 1ನೇ ಆರೋಪಿಯ ನಿವೃತ್ತಿಗೆ ಮುನ್ನ 2ನೇ ಆರೋಪಿಯು ಕೆಲವು ಬೇಡಿಕೆಗಳನ್ನು ಸಲ್ಲಿಸಿ, 1ನೇ ಆರೋಪಿಯು ನಿವೃತ್ತಿಯ ದಿನವೇ ತುರ್ತುಗತಿಯಲ್ಲಿ ಅವುಗಳನ್ನು ಅನುಮೋದಿಸಿದ್ದಾನೆ. ನ್ಯಾಯಾಲಯ ಗಮನಿಸಬಹುದಾದ ವಿಷಯವೆಂದರೆ, 1ನೇ ಆರೋಪಿಯು ನಿವೃತ್ತಿಯ ಕೊನೆಯ ದಿನ ಇತರ ಗುತ್ತಿಗೆದಾರರಿಗೂ ಇದೇ ರೀತಿಯಲ್ಲಿ ಮೊತ್ತಗಳನ್ನು ಮಂಜೂರು ಮಾಡಿ ರಾಜ್ಯ ಖಜಾನೆಗೆ ಭಾರೀ ನಷ್ಟ ಉಂಟುಮಾಡಿದ್ದಾನೆ.”

“ಭ್ರಷ್ಟಾಚಾರ ತಡೆ ಕಾಯಿದೆ 1988 ರ ಸೆಕ್ಷನ್ 19 ಅಡಿಯಲ್ಲಿ ವಿಚಾರಣೆ ಆರಂಭಿಸಲು ಅಗತ್ಯ ಅನುಮತಿ ಬೇಕಾಗಿರುವ 1ನೇ ಆರೋಪಿಯು 28.02.1991 ರಂದು ನಿವೃತ್ತರಾದರು. ಅವರ ನಿವೃತ್ತಿಯ ನಂತರವೇ ತನಿಖೆ ಹಾಗೂ ವಿಚಾರಣೆ ಪ್ರಾರಂಭಿಸಲಾಯಿತು. ಸೆಕ್ಷನ್ 19(1) ನಿವೃತ್ತರಾದ ನೌಕರರ ಪ್ರಕರಣದಲ್ಲಿ ಅನುಮತಿ ಪಡೆಯಬೇಕೆಂದು ಹೇಳುವುದಿಲ್ಲ. ಆದ್ದರಿಂದ ಈ ವಾದ ಅಸ್ಥಿರವಾಗಿದೆ.”

ನ್ಯಾಯಾಲಯವು 2ನೇ ಆರೋಪಿಯಾದ ಗುತ್ತಿಗೆದಾರನ ವಿರುದ್ಧ ವಿಧಿಸಲಾದ ಶಿಕ್ಷೆಯನ್ನು ದೃಢಪಡಿಸಿತು. 1ನೇ ಆರೋಪಿಯ ವಿಷಯದಲ್ಲಿ, ಅವರ ನಿಧನದಿಂದ ಕಾರಾಗೃಹ ಶಿಕ್ಷೆ ರದ್ದುಗೊಂಡಿದೆ. ಆದ್ದರಿಂದ 1ನೇ ಆರೋಪಿಯ ಶಿಕ್ಷೆ ಜಾರಿಗೆ ಸಂಬಂಧಿಸಿದಂತೆ, ಅವರ ಕಾನೂನು ವಾರಸುದಾರರು (ಹೆಚ್ಚುವರಿ ಮೇಲ್ಮನವಿದಾರರು ಸೇರಿ) ವಾರಸಾಗತವಾಗಿ ಪಡೆದಿರುವ ಖಾತೆಗಳಿಂದ ದಂಡ ಮೊತ್ತವನ್ನು ಮಾತ್ರ ವಸೂಲು ಮಾಡಬೇಕು,” ಎಂದು ನ್ಯಾಯಪೀಠ ತೀರ್ಪು ಪ್ರಕಟಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.