05/03/2026

Law Guide Kannada

Online Guide

4 ವರ್ಷಗಳಿಂದ ಆರೋಪಿಯನ್ನು ಹಾಜರುಪಡಿಸದ ಹಿನ್ನೆಲೆ ಜೈಲು ಅಧಿಕಾರಿಗಳ ವಿರುದ್ದ ಹೈಕೋರ್ಟ್ ಗರಂ

ಬೆಂಗಳೂರು: ನಾಲ್ಕು ವರ್ಷಗಳಿಂದ ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸದ ಜೈಲು ಅಧಿಕಾರಿಗಳ ವರ್ತನೆಗೆ ಕರ್ನಾಟಕ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಹೈಕೋರ್ಟ್ ನ್ಯಾಯಮೂರ್ತಿ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠವು ಜೈಲು ಅಧಿಕಾರಿಗಳ ವರ್ತನೆಗೆ ಗರಂ ಆಗಿದ್ದು, ಆರೋಪಿಯನ್ನು ಕೋರ್ಟ್ಗೆ ಹಾಜರುಪಡಿಸದಿದ್ದರೆ ಟ್ರಯಲ್ ನಡೆಯುವುದು ಹೇಗೆ? ನಿಮ್ಮ ಜೈಲನ್ನು ವ್ಯವಸ್ಥಿತವಾಗಿಡಿ ಎಂದು ಕೋರ್ಟ್ಗೆ ಹಾಜರಾಗಿದ್ದ ಕಾರಾಗೃಹ ಇಲಾಖೆ ಡಿಐಜಿಗೆ ಸೂಚಿಸಿದೆ.

6 ತಿಂಗಳಿನಿಂದ ಕೋರ್ಟ್ಗೆ ಹಾಜರುಪಡಿಸದ ಕೈದಿಗಳ ವಿವರ ಮತ್ತು ಕಾಲಕಾಲಕ್ಕೆ ಕೋರ್ಟ್ಗೆ ಹಾಜರುಪಡಿಸಲು ಕೈಗೊಂಡ ಕ್ರಮದ ಬಗ್ಗೆ ವರದಿ ನೀಡುವಂತೆ ಸರ್ಕಾರಕ್ಕೆ ಪೀಠ ಹೇಳಿದೆ.
ಕಳ್ಳತನ ಪ್ರಕರಣದ ಆರೋಪಿ ಇಮ್ರಾನ್ ಎಂಬಾತ ಶ್ಯೂರಿಟಿ ಸಿಗದೇ ಜೈಲಿನಲ್ಲಿದ್ದ. ಕೋರ್ಟ್ ವಾರಂಟ್ ಹೊರಡಿಸಿದರೂ ಜಾರಿಗೊಳಿಸದ ಪೊಲೀಸರು, ಆರೋಪಿ ಜೈಲಿನಲ್ಲೇ ಇದ್ದರೂ ಸಿಕ್ಕಿಲ್ಲ ಎಂದು ಉತ್ತರಿಸಿದ್ದರು. ಹೀಗಾಗಿ ಮುಖ್ಯ ಪೇದೆ ವಿರುದ್ಧ ಇಲಾಖಾ ವಿಚಾರಣೆಗೆ ಸೂಚನೆ ನೀಡಿರುವ ಹೈಕೋರ್ಟ್, ವಿಚಾರಣೆ ಮಾರ್ಚ್ 6ಕ್ಕೆ ಮುಂದೂಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.