SC, ST ದೌರ್ಜನ್ಯ ತಡೆ ಕಾಯ್ದೆ: ಕೆಲವೊಂದು ಆರೋಪಗಳು ಸ್ವಯಂಚಾಲಿತ ಅಪರಾಧವಲ್ಲ- ಹೈಕೋರ್ಟ್
ಕಲ್ಕತ್ತಾ: ವೃತ್ತಿಪರ ಭಿನ್ನಾಭಿಪ್ರಾಯ, ಕೆಲಸದ ಸ್ಥಳದ ಕುಂದುಕೊರತೆಗಳನ್ನು ಎಸ್ಸಿ, ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಸ್ವಯಂಚಾಲಿತವಾಗಿ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ಕಲ್ಕತ್ತಾ ಹೈಕೋಟ್ ಮಹತ್ವದ ತೀರ್ಪು ನೀಡಿದೆ.
ಸಂಸ್ಕೃತ ಪ್ರಾಧ್ಯಾಪಕರ ವಿರುದ್ಧದ ಎಸ್ಸಿ ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದ ದೂರನ್ನು ರದ್ದುಗೊಳಿಸಿದ ಹೈಕೋರ್ಟ್ ನ್ಯಾಯಮೂರ್ತಿ ಚೈತಾಲಿ ಚಟರ್ಜಿ ಅವರು ಸಿಆರ್ ಪಿಸಿ ಸೆಕ್ಷನ್ 482 ರ ಅಡಿಯಲ್ಲಿ ವಿಚಾರಣೆಗೆ ಅನುಮತಿ ನೀಡಿದರು. ಅದರೆ ಅಮ್ಮೆರ್ಸ್ ಸ್ಟ್ರೀಟ್ ಪೊಲೀಸ್ ಠಾಣೆಯ ಪ್ರಕರಣ ಸಂಖ್ಯೆ 10/21 ರಲ್ಲಿ ಎಸ್ ಸಿ-ಎಸ್ ಟಿ ಕಾಯ್ದೆಯಡಿಯಲ್ಲಿ ಆರೋಪಗಳನ್ನು ರದ್ದುಗೊಳಿಸಿದರು.
ಸಾರ್ವಜನಿಕ ದೃಷ್ಟಿಯಲ್ಲಿ ಸ್ಪಷ್ಟವಾದ ಜಾತಿ ಆಧಾರಿತ ಅವಮಾನ ಅಥವಾ ನಿಂದನೆ ಇಲ್ಲದಿದ್ದರೆ, ಎಲ್ಲಾ ರೀತಿಯ ವೃತ್ತಿಪರ ಭಿನ್ನಾಭಿಪ್ರಾಯಗಳು, ಆಡಳಿತಾತ್ಮಕ ವಿವಾದಗಳು ಅಥವಾ ಕೆಲಸದ ಸ್ಥಳದಲ್ಲಿ ಅವಮಾನವನ್ನು ಎದುರಿಸುವ ಸಂದರ್ಭಗಳು ಎಸ್ ಸಿ, ಎಸ್ಟಿ (ರ್ಜನ್ನ ತಡೆ) ಕಾಯ್ದೆಯಡಿಯಲ್ಲಿ ಸ್ವಯಂಚಾಲಿತವಾಗಿ ಅಪರಾಧಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.
ದೂರುದಾರರು ಎಸ್ಸಿ ಸಮುದಾಯಕ್ಕೆ ಸೇರಿದವರಾಗಿದ್ದರೂ ವಾಗ್ವಾದ ಮತ್ತು ಅವಮಾನದ ಘಟನೆಯನ್ನು ಜಾತಿ ಆಧಾರಿತ ದೌರ್ಜನ್ಯ ಎಂದು ಕರೆಯಲಾಗುವುದಿಲ್ಲ ಮತ್ತು ಅದು ಕಾಯ್ದೆಯ ಸೆಕ್ಷನ್ 3 (1)(ಆರ್) ಅಡಿಯಲ್ಲಿ ಬರುವುದಿಲ್ಲ ಎಂದು ಹೇಳಿದೆ.
ಈ ಪ್ರಾಧ್ಯಾಪಕರು ಸಂಸ್ಕೃತದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದು ಸಂಸ್ಕೃತ ಕಾಲೇಜು ಮತ್ತು ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಮರಾಗಿ ಸೇವೆ ಸಲ್ಲಿಸಿದ್ದರು. ಅದೇ ವಿಶ್ವವಿದ್ಯಾಲಯದ ಎಸ್ಸಿ ಸಮುದಾಯಕ್ಕೆ ಸೇರಿದ ಸಹಾಯಕ ಪ್ರಾಧ್ಯಾಪಕರೊಬ್ಬರು ಅವರ ವಿರುದ್ಧ ವೃತ್ತಿಪರ ಅಸೂಯೆ ಮತ್ತು ಕಿರುಕುಳದ ಆರೋಪ ಹೊರಿಸಿದ್ದರು.
ಆರೋಪಿ ತಮ್ಮನ್ನು ಇಲಾಖಾ ನಿರ್ಧಾರಗಳಿಂದ ಹೊರಗಿಟ್ಟಿದ್ದಾರೆ, ತರಗತಿಗಳನ್ನು ನಿಲ್ಲಿಸಿದ್ದಾರೆ. ಇಲಾಖಾ ಕರ್ತವ್ಯಗಳನ್ನು ನಿರ್ವಹಿಸದಂತೆ ತಡೆದಿದ್ದಾರೆ ಮತ್ತು ಆನ್ ಲೈನ್ ಸಭೆಯ ಸಮಯದಲ್ಲಿ ಆಕ್ಷೇಪಾರ್ಹ ಭಾಷೆಯನ್ನು ಬಳಸಿ ಅವಮಾನಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು. ಎಚ್ಒಡಿ ಅವರ ನಡವಳಿಕೆಯು ಅವರ ಜಾತಿ ಗುರುತಿನಿಂದ ಪ್ರೇರಿತವಾಗಿದೆ ಎಂದು ಅವರು ಆರೋಪಿಸಿದ್ದರು.
ವಿಚಾರಣೆಯ ಸಮಯದಲ್ಲಿ ಆರೋಪಗಳು ಇಲಾಖೆಯೊಳಗಿನ ವೃತ್ತಿಪರ ಮತ್ತು ಆಡಳಿತಾತ್ಮಕ ಕುಂದುಕೊರತೆಗಳಿಗೆ ಸಂಬಂಧಿಸಿವೆ ಮತ್ತು ದೂರುದಾರರು ಅನುಭವಿಸಿದ ಅವಾದಿತ ಭಿನ್ನಾಭಿಪ್ರಾಯ ಅಥವಾ ‘ಅವಮಾನ’ದ ಯಾವುದೇ ಘಟನೆಗಳು ಆರೋಪಿ ಅಥವಾ ದೂರುದಾರರ ಜಾತಿ ಗುರುತುಗಳಿಗೆ ಕಾರಣವೆಂದು ಹೇಳಲಾಗುವುದಿಲ್ಲ ಎಂದು ನ್ಯಾಯಾಲಯ ಗಮನಿಸಿತು. ಜಾತಿ ಆಧಾರಿತ ಅವಮಾನವು ಸಾರ್ವಜನಿಕ ದೃಷ್ಟಿಯಲ್ಲಿ ಸಂಭವಿಸಿದೆ ಎಂಬ ಅಂಶಗಳನ್ನು ಹೊಂದಿರುವುದು ಕಡ್ಡಾಯವಾಗಿದೆ ಎಂದು ಪೀಠವು ಪುನರುಚ್ಚರಿಸಿತು.
ಈ ತೀರ್ಪು ಒಂದು ಕಾಲೇಜಿನ ಒಳಗಿನ ವಿವಾದದಿಂದ ಹೊರಬಂದದ್ದು ಈ ಪ್ರಕರಣವು ಸಂಸ್ಕೃತ ಕಾಲೇಜು ಮತ್ತು ವಿಶ್ವವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕರನ್ನು ಒಳಗೊಂಡಿತ್ತು. ಅನುಸೂಚಿತ ಜಾತಿಗೆ ಸೇರಿದ ಸಹಾಯಕ ಪ್ರಾಧ್ಯಾಪಕ ಅವರು ವಿರುದ್ಧ ದೂರು ಸಲ್ಲಿಸಿದರು.
ಆರೋಪಗಳು ಮುಖ್ಯವಾಗಿ ಉದ್ಯೋಗ ಸ್ಥಳ ಮತ್ತು ಆಡಳಿತಾತ್ಮಕ ವಿವಾದಗಳಿಗೆ ಸಂಬಂಧಿಸಿದ್ದವು. ದೂರುದಾರರನ್ನು ‘ಆದರ್ಶ ಸರ್’ ಎಂದು ಕರೆಯಲಾಗಿದೆ ಎಂಬ ಆರೋಪವೂ ಅವಮಾನಕಾರಿ ಎಂದು ಪರಿಗಣಿಸಲಾಗುವುದಿಲ್ಲ. ದೌರ್ಜನ್ಯ ತಡೆ ಕಾಯ್ದೆ ಅನ್ವಯಿಸಲು ಸ್ಪಷ್ಟ ಹಾಗೂ ಉದ್ದೇಶಪೂರ್ವಕ ಜಾತಿ ಆಧಾರಿತ ನಿಂದನೆ ಇರಬೇಕು. ಅದು “ಸಾರ್ವಜನಿಕ ದೃಷ್ಟಿಯಲ್ಲಿ ನಡೆದಿರಬೇಕು. ಈ ಪ್ರಕರಣದಲ್ಲಿ ಜಾತಿಯ ಕಾರಣದಿಂದ ಅವಮಾನಿಸಲಾಗಿದೆ ಎಂಬ ಸ್ಪಷ್ಟ ಸಾಕ್ಷ್ಯ ಇರಲಿಲ್ಲ. ಈ ಪ್ರಮುಖ ಕಾನೂನು ಅವಶ್ಯಕತೆಗಳು ಇಲ್ಲದ ಕಾರಣ ಕ್ರಿಮಿನಲ್ ಪ್ರಕ್ರಿಯೆಯನ್ನು ಹೈಕೋರ್ಟ್ ನ್ಯಾಯಪೀಠ ರದ್ದುಪಡಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
