23/04/2026

Law Guide Kannada

Online Guide

ಬಾಡಿಗೆ ಮನೆ ಕೊಟ್ಟವರಿಗೆ ಶಾಕ್: ಮಾಲೀಕತ್ವ ಮಾತ್ರದಿಂದ ಬಾಡಿಗೆ, ಮಾಲೀಕ ಸಂಬಂಧ ಸಾಬೀತಾಗದು – ಹೈಕೋರ್ಟ್

ರಾಯ್ ಪುರ: ಬಾಡಿಗೆ ಮನೆ ಕೊಟ್ಟಿರುವ ಮಾಲೀಕರಿಗೆ ಛತ್ತೀಸ್ ಘಡ ಹೈಕೋರ್ಟ್ ಶಾಕ್ ನೀಡಿದ್ದು, ಕೇವಲ ಮಾಲೀಕತ್ವ ಮಾತ್ರದಿಂದ ಬಾಡಿಗೆದಾರನ, ಮಾಲೀಕನ ಸಂಬಂಧ ಸಾಬೀತಾಗದು ಎಂದು ತೀರ್ಪನ್ನಿತ್ತಿದೆ.

ಛತ್ತೀಸ್ ಘಡ ಬಾಡಿಗೆ ನಿಯಂತ್ರಣ ಕಾಯ್ದೆ 2011 ಅಡಿಯಲ್ಲಿ ಹೊರಹಾಕುವ ಪ್ರಕ್ರಿಯೆ ನಡೆಸಲು, ಬಾಡಿಗೆ ಸಂಬಂಧವನ್ನು ದೃಢಪಡಿಸುವ ಸ್ಪಷ್ಟ ಸಾಕ್ಷ್ಯ ಅಗತ್ಯ. Attornment (ಮಾಲೀಕನನ್ನು ಒಪ್ಪಿಕೊಳ್ಳುವಿಕೆ), ಬಾಡಿಗೆ ಪಾವತಿ, ಅಥವಾ ಬಾಡಿಗೆಗೆ ಸಂಬಂಧಿಸಿದ ದಾಖಲೆಗಳಿಲ್ಲದಿದ್ದರೆ, ಇಂತಹ ಅರ್ಜಿಗಳು ನಿರ್ವಹಣೀಯವಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಕೇವಲ ಆಸ್ತಿಯ ಮಲೀಕತ್ವ ಹೊಂದಿರುವುದರಿಂದ ಮಾತ್ರ ಮನೆಮಾಲೀಕ-ಬಾಡಿಗೆದಾರ ಸಂಬಂಧ ಸ್ಥಾಪಿತವಾಗುವುದಿಲ್ಲ. ಬಾಡಿಗೆ ಸಂಬಂಧದ ಸಾಕ್ಷ್ಯ ಇಲ್ಲದಿದ್ದಲ್ಲಿ. ಮಾಲೀಕತ್ವ ಹೊಂದಿದ್ದ ಪಕ್ಷಕಾರರು ಸಲ್ಲಿಸಿರುವ ಹೊರಹಾಕುವ (eviction) ಅರ್ಜಿಯನ್ನು ನಿರಾಕರಿಸಬಹುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಏನಿದು ಪ್ರಕರಣ.

ಅರ್ಜಿದಾರರು 2000ರಲ್ಲಿ ನೋಂದಾಯಿತ ಮಾರಾಟದ ಖರೀದಿ ಪತ್ರದ ಮೂಲಕ ರಾಯ್ಪುರದಲ್ಲಿನ ಅಂಗಡಿಯ ಸ್ವಾಮ್ಯ ಹೊಂದಿದ್ದಾಗಿ ಹೇಳಿಕೊಂಡು, ಛತ್ತೀಸ್ ಘಡ ಬಾಡಿಗೆ ನಿಯಂತ್ರಣ ಕಾಯ್ದೆ 2011ರ ಸೆಕ್ಷನ್ 12(2) ಅಡಿಯಲ್ಲಿ ಪ್ರತಿವಾದಿಗಳ ವಿರುದ್ಧ ಹೊರಹಾಕುವ ಕ್ರಮ ಕೈಗೊಂಡಿದ್ದರು. ಪ್ರತಿವಾದಿಗಳು ಮೂಲ ಬಾಡಿಗೆದಾರರ ವಾರಸುದಾರರಾಗಿದ್ದರು. ಅರ್ಜಿದಾರರು ಬಾಡಿಗೆ ಪಾವತಿಯಲ್ಲಿ ಡೀಫಾಲ್ಟ್ ಆಗಿರುವುದರಿಂದ ಹೊರಹಾಕಬೇಕು ಹಾಗೂ ಬಾಕಿ ಬಾಡಿಗೆ ಪಾವತಿಸಬೇಕು ಎಂದು ವಾದಿಸಿದರು.

ಆದರೆ, ಪ್ರತಿವಾದಿಗಳು ಮನೆಮಾಲೀಕ-ಬಾಡಿಗೆದಾರ ಸಂಬಂಧವೇ ಇಲ್ಲ ಎಂದು ತಿರಸ್ಕರಿಸಿದರು. ಅವರು ಈ ಆಸ್ತಿ ಸಂಯುಕ್ತ ಕುಟುಂಬದ ಆದಾಯದಿಂದ ಖರೀದಿಸಲ್ಪಟ್ಟಿದ್ದು, ತಾವು ಜೊತೆ ಹಕ್ಕುದಾರರಾಗಿದ್ದೇವೆ, ಬಾಡಿಗೆದಾರರಲ್ಲ ಎಂದರು. ಜೊತೆಗೆ, ಅರ್ಜಿದಾರರನ್ನು ಮನೆಮಾಲೀಕರಾಗಿ ಒಪ್ಪಿಕೊಂಡಿಲ್ಲ ಎಂದು ತಿಳಿಸಿದರು.

ಬಾಡಿಗೆ ನಿಯಂತ್ರಣ ಪ್ರಾಧಿಕಾರ ಮತ್ತು ನ್ಯಾಯಮಂಡಳಿ ಎರಡೂ ಈ ವಿಚಾರವನ್ನು ಪರಿಶೀಲಿಸಿ, ಅರ್ಜಿದಾರರು ಸ್ವಾಮ್ಯವನ್ನು ಸಾಬೀತುಪಡಿಸಿದರೂ, ಬಾಡಿಗೆ ಸಂಬಂಧವನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ವಿಚಾರಣಾ ನ್ಯಾಯಾಲಯ ಕಂಡುಕೊಂಡು ಹೊರಹಾಕುವ ಅರ್ಜಿಯನ್ನು ತಿರಸ್ಕರಿಸಿತು.

ನಂತರ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿ, ಆಸ್ತಿ ವರ್ಗಾವಣೆ ಕಾಯ್ದೆಯ ಸೆಕ್ಷನ್ 109 ಅನ್ನು ಆಧರಿಸಿ, ಸ್ಕ್ಯಾಮ್ಯ ಹಾಗೂ ಮೂಲ ಬಾಡಿಗೆ ಸಂಬಂಧ ಒಪ್ಪಿಕೊಂಡಿರುವುದರಿಂದ ತಮಗೆ ಮನೆಮಾಲೀಕ ಹಕ್ಕುಗಳು ವರ್ಗಾಯಿಸುತ್ತವೆ ಎಂದು ವಾದಿಸಿದರು.

ಆದರೆ ಈ ವಾದವನ್ನು ತಳ್ಳಿಹಾಕಿದ ಹೈಕೋರ್ಟ್ ಬಾಡಿಗೆ ಕಾಯ್ದೆಯಡಿ ಹೊರಹಾಕುವ ಕ್ರಮ ಕೈಗೊಳ್ಳಲು ಮೊದಲ ಅವಶ್ಯಕತೆ ಮನೆಮಾಲೀಕ-ಬಾಡಿಗೆದಾರ ಸಂಬಂಧವೇ ಆಗಿದೆ. ಆ ಸಂಬಂಧವನ್ನು ಸಾಬೀತುಪಡಿಸುವ ಹೊಣೆಗಾರಿಕೆ ಅರ್ಜಿದಾರರ ಮೇಲಿದೆ. ದಾಖಲೆಗಳ ಪರಿಶೀಲನೆಯಲ್ಲಿ attornment, ಬಾಡಿಗೆ ಪಾವತಿ ಅಥವಾ ಇತರೆ ಯಾವುದೇ ಮಾನ್ಯ ಸಾಕ್ಷ್ಯ ಕಾಣಿಸಲಿಲ್ಲ ಎಂಬುದನ್ನು ನ್ಯಾಯಪೀಠ ಗಮನಿಸಿತು.

ಇಂತಹ ಸಂಕೀರ್ಣ ಸ್ವಾಮ್ಯ ವಿವಾದಗಳನ್ನು ಬಾಡಿಗೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ನಡೆಯುವ ಸಂಕ್ಷಿಪ್ತ ವಿಚಾರಣೆಯಲ್ಲಿ ತೀರ್ಮಾನಿಸಲು ಸಾಧ್ಯವಿಲ್ಲ. ಬಾಡಿಗೆ ಸಂಬಂಧ ಸಾಬೀತಾಗದ ಕಾರಣ, ಹೊರಹಾಕುವ ಆದೇಶ ನೀಡಲು ಸಾಧ್ಯವಿಲ್ಲ. ಹಾಗೆಯೇ, ಕೆಳ ನ್ಯಾಯಾಂಗಗಳು ನೀಡಿದ ವಾಸ್ತವಾಂಶಗಳ ಸಮಾನ (concurrent) ನಿರ್ಣಯಗಳಲ್ಲಿ ಯಾವುದೇ ದೋಷ ಇಲ್ಲದಿರುವುದರಿಂದ, ಸಂವಿಧಾನದ ವಿಧಿ 227ರ ಅಡಿಯಲ್ಲಿ ಹಸ್ತಕ್ಷೇಪ ಮಾಡಲು ನ್ಯಾಯಾಲಯ ನಿರಾಕರಿಸಿದ್ದು ರಿಟ್ ಅರ್ಜಿಯನ್ನು ತಿರಸ್ಕರಿಸಿ, ಪಕ್ಷಗಳು ತಮ್ಮ ಹಕ್ಕುಗಳಿಗಾಗಿ ಪ್ರತ್ಯೇಕ ಸಿವಿಲ್ ದಾವೆಗಳಲ್ಲಿ ಮುಂದುವರೆಯಬಹುದು ಎಂದು ನ್ಯಾಯಪೀಠ ಸೂಚಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.