23/04/2026

Law Guide Kannada

Online Guide

ಕೋರ್ಟ್ ಆದೇಶಗಳು ತಿಂಗಳುಗಟ್ಟರೇ ಅಪ್ ಲೋಡ್ ಆಗದೆ ವಿಳಂಬ: ನೇರ ಅಮಾನತು ಎಚ್ಚರಿಕೆ ಕೊಟ್ಟ ಹೈಕೋರ್ಟ್

ಮುಂಬೈ: ನ್ಯಾಯಾಲಯದ ಆದೇಶಗಳು ದಿನಗಟ್ಟಲೆ, ತಿಂಗಳುಗಟ್ಟಲೆ ಅಪ್ ಲೋಡ್ ಆಗದೇ ನಾಗರಿಕರು ಕಾಯುತ್ತಿದ್ದ ಸಮಸ್ಯೆಗೆ ಪರಿಹಾರ ಹುಡುಕಿರುವ ಬಾಂಬೆ ಹೈಕೋರ್ಟ್, ಇದೀಗ ನ್ಯಾಯಾಧೀಶರು ತೀರ್ಪು ಪ್ರಕಟಿಸದೆ ತಡೆಹಿಡಿದರೆ, ಕೋರ್ಟ್ ಆದೇಶಗಳು ತಿಂಗಳುಗಟ್ಟರೇ ಅಪ್ ಲೋಡ್ ಆಗದೆ ವಿಳಂಬವಾದರೆ ನೇರ ಅಮಾನತು ಮಾಡುವ ಎಚ್ಚರಿಕೆ ನೀಡಿದೆ.

ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಎಲ್ಲಾ ನ್ಯಾಯಾಧೀಶರಿಗೆ ಮುಂಬೈ ಉಚ್ಚ ನ್ಯಾಯಾಲಯದ ರಿಜಿಸ್ಟರ್ ಜನರಲ್ ಸ್ವಪ್ನಿಲ್ ಸಿ. ಕಾಟಿ ಸಂಖ್ಯೆ RG/1611/67/2026 ರ ಅಧಿಕೃತ ಪತ್ರ ಹೊರಡಿಸಿದ್ದು, ಈ ಪತ್ರದ ಮೂಲಕ ಸ್ಪಷ್ಟ ನಿರ್ದೇಶನ ನೀಡಲಾಗಿದೆ.

ನ್ಯಾಯಾಧೀಶರು ನೀಡಿದ ಆದೇಶ ಮತ್ತು ತೀರ್ಪುಗಳನ್ನು ಅದೇ ದಿನ CIS Seಡಿveಡಿ ನಲ್ಲಿ ಅಪ್ ಲೋಡ್ ಮಾಡಬೇಕು. ಒಂದು ವೇಳೆ ಅದೇ ದಿನ ಅಪ್ ಲೋಡ್ ಮಾಡಲು ಸಾಧ್ಯವಾಗದಿದ್ದರೆ, ಕಾರಣ ಸಹಿತ ವಿವರಣೆ ನೀಡಬೇಕು ಎಂದು ಖಡಕ್ ಸೂಚನೆ ನೀಡಿದೆ.

ನಿಗದಿತ ಸಮಯದೊಳಗೆ ಆದೇಶ ಅಪ್ ಲೋಡ್ ಮಾಡದಿರುವುದನ್ನು ನ್ಯಾಯಾಧೀಶರ ಸಚ್ಛಾರಿತ್ರ್ಯಕ್ಕೆ ಸಂಬಂಧಿಸಿದ ದುರ್ನಡತೆ ಎಂದು ಪರಿಗಣಿಸಲಾಗುವುದೆಂದು ನಿರ್ದೇಶನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅಲ್ಲದೇ, ಪ್ರತಿ ತಿಂಗಳು Annexure A ಪ್ರಮಾಣಪತ್ರ ಸಲ್ಲಿಸುವ ಕಡ್ಡಾಯ ನಿಯಮ ಜಾರಿಗೊಳಿಸಲಾಗಿದೆ. ಸಲ್ಲಿಸಿದ ಮಾಹಿತಿಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದರೆ, ಇಲಾಖಾ ವಿಚಾರಣೆಯಿಲ್ಲದೇ ನೇರವಾಗಿ ಅಮಾನತು ಮಾಡಲಾಗುವುದೆಂದು ವಾರ್ನಿಂಗ್ ನೀಡಲಾಗಿದೆ.

ತೀರ್ಪು ಅಪ್ ಲೋಡ್ ಆಗದಿದ್ದಾಗ ನಾಗರಿಕರು ಮಾಹಿತಿಯಿಂದ ವಂಚಿತರಾಗುತ್ತಾರೆ, RTI ಅರ್ಜಿದಾರರಿಗೆ ದಾಖಲೆ ಸಿಗದೇ ನ್ಯಾಯ ವಿಳಂಬವಾಗುತ್ತದೆ. ಆದ್ದರಿಂದ ಇದು ಕೇವಲ ಆಡಳಿತ ಸುಧಾರಣೆಯಲ್ಲ, ಇದು ನಾಗರಿಕರ ಮಾಹಿತಿ ಹಕ್ಕಿನ ಸಂರಕ್ಷಣೆ. ಈ ಆದೇಶ ನ್ಯಾಯ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ದಿಸೆಯಲ್ಲಿ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ನ್ಯಾಯಾಲಯದ ಆದೇಶಗಳು ತಕ್ಷಣ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವುದು ಪ್ರಜಾತಂತ್ರದ ಮೂಲ ಆಶಯವಾಗಿದ್ದು ಇಂದು ಹೈಕೋರ್ಟ್ ಆ ಆಶಯವನ್ನು ಅಧಿಕಾರಯುತವಾಗಿ ಎತ್ತಿಹಿಡಿದಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.