ಸರ್ಕಾರಿ ನೌಕರನ ಸಸ್ಪೆಂಡ್ ಆದೇಶ ಅನಿರ್ದಿಷ್ಟಾವಧಿಯವರೆಗೆ ಮುಂದುವರಿಸಲು ಸಾಧ್ಯವಿಲ್ಲ-ಹೈಕೋರ್ಟ್
ಬೆಂಗಳೂರು: ಸರ್ಕಾರಿ ನೌಕರನ ಅಮಾನತು ಅನಿರ್ದಿಷ್ಟಾವಧಿಯವರೆಗೆ ಮುಂದುವರಿಯಬಾರದು ಅದು ನ್ಯಾಯಸಮ್ಮತವಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ಸರ್ಕಾರಿ ನೌಕರನ ಅಮಾನತು ಆದೇಶವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದುವರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಅಮಾನತು ಆದೇಶದಿಂದ ನೌಕರನಿಗೆ ಅನಗತ್ಯ ತೊಂದರೆಯನ್ನು ತಪ್ಪಿಸಲು 90 ದಿನದೊಳಗೆ ಇಲಾಖಾ ಶಿಸ್ತು ಕ್ರಮ ಪ್ರಾರಂಭಿಸಬೇಕು. ಇಲ್ಲದಿದ್ದಲ್ಲಿ ಅಮಾನತು ವಿಚಾರಣೆಯ ಪ್ರಕ್ರಿಯೆಗಿಂತಲೂ ಶಿಕ್ಷೆಯಾಗಿ ಪರಿಣಮಿಸುತ್ತದೆ. ಸರ್ಕಾರಿ ನೌಕರನ ಅಮಾನತು ಆದೇಶವು ಕೇವಲ ಆತನ ವಿರುದ್ಧದ ಅಪರಾಧ ಪ್ರಕರಣ ಬಾಕಿ ಇದೆ ಎಂಬುದನ್ನೇ ಆಧಾರವಾಗಿ ಇಟ್ಟುಕೊಂಡಿದ್ದರೆ ಮತ್ತು ಸಮಂಜಸವಾದ ಅವಧಿಯೊಳಗೆ ಯಾವುದೇ ಇಲಾಖಾ ಶಿಸ್ತು ಕ್ರಮವನ್ನು ಪ್ರಾರಂಭಿಸದಿದ್ದಲ್ಲಿ ಅಂತಹ ಅಮಾನತು ಮುಂದುವರಿಯುವುದು ನ್ಯಾಯಸಮ್ಮತವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ ಹೀಗಾಗಿ ಅಮಾನತು ಒಬ್ಬ ಸರ್ಕಾರಿ ನೌಕರನ ವಿರುದ್ಧ ಜಾರಿಗೊಳಿಸಲಾದ ಆದೇಶವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದುವರಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
