02/05/2026

Law Guide Kannada

Online Guide

ಕೋರ್ಟ್ ನಲ್ಲಿ ಕಡತ ನಾಪತ್ತೆ: ಗುಮಾಸ್ತನ ವಿರುದ್ದ ಶಿಸ್ತು ಕ್ರಮ ಎತ್ತಿಹಿಡಿದ ಹೈಕೋರ್ಟ್

ಅಲಹಾಬಾದ್: ರಾಂಪುರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕಚೇರಿಯಿಂದ ಕಡತವೊಂದು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಮಾಸ್ತನ ವಿರುದ್ದ ನಡೆಸಿದ ಇಲಾಖಾ ತನಿಖೆಯ ನಂತರ ಶಿಸ್ತು ಪ್ರಾಧಿಕಾರ ವಿಧಿಸಿದ ಶಿಸ್ತು ಕ್ರಮವನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿದೆ.

ಗುಮಾಸ್ತನ ಪ್ರಮಾದ ಗಂಭೀರ ಎಂದು ಪರಿಗಣಿಸಿದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಅನೀಶ್ ಕುಮಾರ್ ಗುಪ್ತಾ ಅವರಿದ್ದ ನ್ಯಾಯಪೀಠವು, ತಪ್ಪಿತಸ್ತ್ರ ಗುಮಾಸ್ತರ ನಾಲ್ಕು ವಾರ್ಷಿಕ ವೇತನ ಬಡ್ತಿಯನ್ನು ತಡೆಹಿಡಿಯುವ ಆದೇಶ ಹೊರಡಿಸಿದ್ದ ಶಿಸ್ತು ಪ್ರಾಧಿಕಾರದ ತೀರ್ಪನ್ನು ಎತ್ತಿಹಿಡಿದಿದೆ.

ರಾಂಪುರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕಚೇರಿಯಿಂದ ಕಡತವೊಂದು ಕಣ್ಮರೆಯಾದ ಪ್ರಕರಣದಲ್ಲಿ ಇಲಾಖಾ ವಿಚಾರಣೆ ನಡೆಸಿದ ಶಿಸ್ತು ಪ್ರಾಧಿಕಾರವು ತಪ್ಪಿತಸ್ತ್ರ ಗುಮಾಸ್ತರ ನಾಲ್ಕು ವಾರ್ಷಿಕ ವೇತನ ಬಡ್ತಿಯನ್ನು ತಡೆಹಿಡಿಯುವ ಆದೇಶ ಹೊರಡಿಸಿತು. ಇದರಿಂದ ಬಾಧಿತರಾದ ಗುಮಾಸ್ತರು ಇಲಾಖಾ ಕ್ರಮದ ವಿರುದ್ಧ ಮೇಲ್ಮನವಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದರು.ಆದರೆ ಈ ಮೇಲ್ಮನವಿಯನ್ನು ವಜಾಗೊಳಿಸಲಾಯಿತು. ಇದನ್ನು ಪ್ರಶ್ನಿಸಿ ಗುಮಾಸ್ತ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು, “ನ್ಯಾಯಾಂಗದ ದಾಖಲೆಯಿಂದ ನ್ಯಾಯಾಂಗ ಕಡತ ಕಳೆದುಹೋಗುವುದು ಅಥವಾ ಲಭ್ಯವಾಗದೇ ಇರುವುದು ಬಹಳ ಗಂಭೀರ ಆಪರಾಧ. ಇದು ನ್ಯಾಯದ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದನ್ನು ಕಟುವಾಗಿ ನಿರ್ವಹಿಸಬೇಕಾಗುತ್ತದೆ’ ಎಂದು ಆದೇಶದಲ್ಲಿ ತಿಳಿಸಿದೆ.

ಕಣ್ಮರೆಯಾಗದ ಕಡತ ಪತ್ತೆಯಾಗದ ಹಿನ್ನೆಲೆ ಗುಮಾಸ್ತನ ವಿರುದ್ದ ಇಲಾಖಾ ವಿಚಾರಣೆ ಆರಂಭಿಸಲಾಯಿತು. ಸಂಬಂಧಿತ ಸಮಯದಲ್ಲಿ ಕರ್ತವ್ಯ ನಿರತ ಗುಮಾಸ್ತರಾಗಿದ್ದ ಅರ್ಜಿದಾರರನ್ನು ನಷ್ಟಕ್ಕೆ ಹೊಣೆಗಾರರನ್ನಾಗಿ ಮಾಡಲಾಯಿತು. ಹಾಗೆಯೇ 1956 ರ ಯುಪಿ ಸರ್ಕಾರಿ ಸೇವಕ ನಡವಳಿಕೆ ನಿಯಮಗಳ ಅಡಿಯಲ್ಲಿ ಇಲಾಖಾ, ವಿಚಾರಣೆ ನಡೆಸಿ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ದುರ್ನಡತೆಯ ಅಪರಾಧಿ ಎಂದು ತೀರ್ಮಾನಿಸಲಾಯಿತು. ಅರ್ಜಿದಾರರಿಗೆ ವಿಚಾರಣೆಯ ಅವಕಾಶವನ್ನು ಒದಗಿಸಿದ ನಂತರ, ಶಿಸ್ತು, ಪ್ರಾಧಿಕಾರವು ಸಂಚಿತ ಪರಿಣಾಮದೊಂದಿಗೆ ನಾಲ್ಕು ವೇತನ ಏರಿಕೆಗಳನ್ನು ತಡೆಹಿಡಿಯುವ ಆದೇಶವನ್ನು ಹೊರಡಿಸಿತು ಹೈಕೋರ್ಟ್ ನಲ್ಲಿ ಅರ್ಜಿದಾರ ಗುಮಾಸ್ತನ ಪರ ವಾದ ಮಂಡಿಸಿದ ವಕೀಲರು, ಕಚೇರಿಯಲ್ಲಿ ಕೆಲಸದ ಹಂಚಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿಲ್ಲ ಮತ್ತು ಕಾಣೆಯಾದ ಫೈಲ್ಗೆ ಜವಾಬ್ದಾರಿಯನ್ನು ನಿರ್ಣಾಯಕವಾಗಿ ನಿಗದಿಪಡಿಸಲಾಗಿಲ್ಲ. ಕಾಣೆಯಾದ ಫೈಲ್ಗೆ ನಿಜವಾಗಿಯೂ ಕಾರಣರಾದ ವ್ಯಕ್ತಿ ಯಾರು ಎಂಬುದನ್ನು ಖಚಿತಪಡಿಸಿಕೊಳ್ಳದೆ ತನಿಖಾ ಅಧಿಕಾರಿ ಅರ್ಜಿದಾರರನ್ನು ಕಾನೂನುಬಾಹಿರವಾಗಿ ತಪ್ಪಿತಸ್ತರೆಂದು ಪರಿಗಣಿಸಿದ್ದಾರೆ ಎಂಬ ಆಕ್ಷೇಪಿಸಿದರು.

ಮತ್ತೊಂದೆಡೆ, ಅರ್ಜಿಯನ್ನು ವಿರೋಧಿಸಿದ ಶಿಸ್ತು ಪ್ರಾಧಿಕಾರದ ಪರ ವಕೀಲರು, ನ್ಯಾಯಾಲಯವು ನ್ಯಾಯಾಂಗ ಪರಿಶೀಲನೆಯ ಅಧಿಕಾರವನ್ನು ಚಲಾಯಿಸುವಾಗ ಪ್ರಕರಣದ ಅರ್ಹತೆಯನ್ನು ಪರಿಶೀಲಿಸಲು ಸಾಧ್ಯವಿಲ್ಲ ಎಂದು ವಾದಿಸಿದರು. ಶಿಸ್ತು ಕ್ರಮಗಳ ಸಮಯದಲ್ಲಿ ಸರಿಯಾದ ವಿಧಾನವನ್ನು ಅನುಸರಿಸಲಾಗಿರುವುದರಿಂದ ಶಿಕ್ಷೆಯ/ದಂಡನೆಯ ಆದೇಶದಲ್ಲಿ ನ್ಯಾಯಾಲಯವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ವಾದಿಸಲಾಯಿತು. ಆದ್ದರಿಂದ, ಅರ್ಜಿಯನ್ನು ವಜಾಗೊಳಿಸಲು ಪ್ರಾರ್ಥನೆ ಸಲ್ಲಿಸಲಾಯಿತು.

ಆರಂಭದಲ್ಲಿ, ಅಲಹಾಬಾದ್ ಹೈಕೋರ್ಟ್ ಅರ್ಜಿದಾರರಿಗೆ ವಿಚಾರಣೆಯ ಅವಕಾಶವನ್ನು ನೀಡದಿರುವ ಬಗ್ಗೆ ಯಾವುದೇ ಆರೋಪವಿಲ್ಲ ಎಂದು ಗಮನಿಸಿತು. ಅರ್ಜಿದಾರರ ಅಪರಾಧಕ್ಕೆ ಶಿಕ್ಷೆಯು ಅನುಪಾತದಲ್ಲಿಲ್ಲ ಎಂಬ ಬಗ್ಗೆ ಯಾವುದೇ ವಾದವನ್ನು ಮಂಡಿಸಲಾಗಿಲ್ಲ ಎಂದು ನ್ಯಾಯಾಲಯವು ಗಮನಿಸಿತು. ಹಾಗೆಯೇ ಶಿಸ್ತು, ಪ್ರಾಧಿಕಾರ ಮತ್ತು ಮೇಲ್ಮನವಿ ಪ್ರಾಧಿಕಾರವು ಹೊರಡಿಸಿದ ಅಕ್ಷೇಪಾರ್ಹ ಆದೇಶಗಳಲ್ಲಿ ಈ ನ್ಯಾಯಾಲಯವು ಯಾವುದೇ ಕಾನೂನುಬಾಹಿರತೆಯನ್ನು ಕಂಡುಕೊಳ್ಳುವುದಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.