ಸಿವಿಲ್ ಜಡ್ಜ್ ಹುದ್ದೆಗೆ ಸ್ಪರ್ಧಿಸಲು ನ್ಯಾಯಾಂಗ ನೌಕರರಿಗೂ ಅವಕಾಶ: ಹೈಕೋರ್ಟ್ ಆದೇಶ
ಬೆಂಗಳೂರು: ಸಿವಿಲ್ ಜಡ್ಜ್ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನ್ಯಾಯಾಂಗ ನೌಕರರೂ ಭಾಗವಹಿಸಲು ಅವಕಾಶ ನೀಡಿ ಹೈಕೋರ್ಟ್ ಆದೇಶಿಸಿದೆ
90 ಸಿವಿಲ್ ಜಡ್ಜ್ ಹುದ್ದೆಗಳ ಭರ್ತಿಗಾಗಿ ಹೊರಡಿಸಿದ್ದ ಅಧಿಸೂಚನೆಯಲ್ಲಿ ಕಾನೂನು ಪದವಿ ಪಡೆದ ನ್ಯಾಯಾಂಗ ಇಲಾಖೆ ನೌಕರರಿಗೆ (In-service Candidate) ಅವಕಾಶವನ್ನು ನಿರಾಕರಿಸಲಾಗಿತ್ತು. ಆದ್ದರಿಂದ ಕಾನೂನು ಪದವಿಧರ ನ್ಯಾಯಾಂಗ ನೌಕರರಿಗೆ ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ಅವಕಾಶ ಕೋರಿ ಕರ್ನಾಟಕ ಹೈಕೋರ್ಟನ ಮೊರೆ ಹೋಗಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಇದೀಗ ಕಾನೂನು ಪದವಿ ಪಡೆದು ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯಾಯಾಂಗ ನೌಕರರಿಗೆ ಸಿವಿಲ್ ಜಡ್ಜ್ ಹುದ್ದೆಗೆ ಸ್ಪರ್ಧಿಸಲು ಅವಕಾಶ ನೀಡಿ ತೀರ್ಪು ಪ್ರಕಟಿಸಿದೆ.
ಯೋಗೇಶ.ಬಿ, ಮೋನಿತಾ. ಸ ಮಹಾದೇವಿ ಬೊಮ್ಮನಗಿ, ಶ್ಯಾಮ್ ರಾವ್, ಗಂಗಾಧರ್, ಕಿರಣ್, ನಾಗಾರ್ಜುನ, ಶಂಕರಲಿಂಗಯ್ಯ, ಪರಪ್ಪ ಹೂಗಾರ್, ಸುದರ್ಶನ್, ಅವಿನಾಶ್, ಬಸವರಾಜು ಜೆಲ್ಲಿ ಮಂಜುನಾಥ್, ಕೆ ವಿಜಯಲಕ್ಷ್ಮಿ ಪ್ರೀತಿ ನ್ಯಾಯಾಂಗ ಇಲಾಖೆಯ ಈ 15 ನೌಕರರು ಹೈಕೋರ್ಟ್ ಮೆಟ್ಟಿಲೇರಿದ್ದರು.
15 ಮಂದಿ ನ್ಯಾಯಾಂಗ ಇಲಾಖೆ ನೌಕರರ ಪರವಾಗಿ ವಕೀಲರಾದ ವೈಭವ್ ಮಳಿಮಠ ರವರು ಮಂಡಿಸಿದ ವಾದವನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಕೃಷ್ಣ ಕುಮಾರ್ ರವರ ಏಕಸದಸ್ಯ ಪೀಠ IA 1/2026 ರಲ್ಲಿ ಅರ್ಜಿದಾರರಿಗೆ ಸಿವಿಲ್ ಜಡ್ಜ್ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ನೀಡಿ ಆದೇಶ ಹೊರಡಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
