ನಿವೃತ್ತ ನ್ಯಾಯಾಧೀಶರ ಪುತ್ರನ ವಿರುದ್ದ ವರದಕ್ಷಿಣೆ ಕಿರುಕುಳ ಕೇಸ್: ಸಮಗ್ರ ತನಿಖೆಗೆ SIT ರಚನೆ
ಭೋಪಾಲ್: ನಿವೃತ್ತ ನ್ಯಾಯಾಧೀಶರೊಬ್ಬರ ಪುತ್ರನ (ವಕೀಲ) ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕೇಸ್ ನ ಸಮಗ್ರ ತನಿಖೆಗೆ ಆರು ಮಂದಿಯ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ.
ಈ ಘಟನೆ ಭೋಪಾಲ್ನಲ್ಲಿ ನಡೆದಿದ್ದು, ನಿವೃತ್ತ ನ್ಯಾಯಧೀಶರಾದ ಗಿರಿಬಾಲಾ ಸಿಂಗ್ ಅವರ ಪುತ್ರ, ವಕೀಲರಾದ ಸಮರ್ಥ್ ಸಿಂಗ್ ವಿರುದ್ದ ಈ ಆರೋಪ ಕೇಳಿ ಬಂದಿದೆ. ಸಮರ್ಥ್ ಸಿಂಗ್ ಅವರ ಪತ್ನಿ ತ್ರಿಶಾ ಶರ್ಮಾ (33) ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.ತ್ರಿಶಾ ಶರ್ಮಾ ಅವರ ಮೃತದೇಹವು ಭೋಪಾಲ್ ನ ಕತಾರ ಹಿಲ್ಸ್ ಪ್ರದೇಶದಲ್ಲಿರುವ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೇ 12ರಂದು ಪತ್ತೆಯಾಗಿತ್ತು.
ಈ ಘಟನೆ ಹಿನ್ನೆಲೆಯಲ್ಲಿ ನಿವೃತ್ತ ನ್ಯಾಯಾಧೀಶರು ಹಾಗೂ ಅವರ ವಕೀಲ ಪುತ್ರನ ವಿರುದ್ಧ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧದ ವರದಕ್ಷಿಣೆ ಕಿರುಕುಳ ಪ್ರಕರಣದ ತನಿಖೆ ನಡೆಸಲು ಆರು ಮಂದಿಯ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಭೋಪಾಲ್ ಪೊಲೀಸರು ತಿಳಿಸಿದ್ದಾರೆ.
ಇನ್ನು ತಲೆಮರಿಸಿಕೊಂಡಿರುವ ಗಿರಿಬಾಲಾ ಹಾಗೂ ಸಮರ್ಥ್ ಅವರನ್ನು ಪತ್ತೆಹಚ್ಚಲು, ಬಂಧಿಸಲು ಕಾರ್ಯಾಚರಣೆಯನ್ನು ತೀವುಗೊಳಿಸಲಾಗಿದೆ ಎಂದು ಎಸ್ಐಟಿ ಮುಖ್ಯಸ್ಥರಾಗಿರುವ ಸಹಾಯಕ ಪೊಲೀಸ್ ಆಯುಕ್ತ ರಜನೀಶ್ ಕಶ್ಯಪ್ ತಿಳಿಸಿದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
