ಶಿಕ್ಷಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಕೇಸ್ ರದ್ದುಗೊಳಿಸಿದ ಸುಪ್ರೀಂ
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರೊಬ್ಬರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವನ್ನ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಪಶ್ಚಿಮಬಂಗಾಳದ ಶಿಕ್ಷಕ ರೊಬ್ಬರ ವಿರುದ್ಧಫೋಕ್ಕೊ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಅತುಲ್ಎಸ್.ಚಂದೂರ್ಕರ್ ಅವರಿದ್ದ ನ್ಯಾಯಪೀಠವು, ಪಾಠವನ್ನು ಪೂರ್ಣಗೊಳಿಸಲು ವಿಫಲರಾದ ವಿದ್ಯಾರ್ಥಿನಿಯರಿಗೆ ಹೊಡೆಯುವುದು, ಅವರ ಕೈಗಳನ್ನು ಹಿಡಿಯುವುದು, ಬೆನ್ನು ಅಥವಾ ಸೊಂಟವನ್ನು ಮುಟ್ಟುವುದು ಸೇರಿ ಲೈಂಗಿಕ ಉದ್ದೇಶವಿಲ್ಲದೆ ಶಿಕ್ಷಕರು ನೀಡುವ ದೈಹಿಕ ಶಿಕ್ಷೆಯು ಪೋಕ್ಸೋ ಅಪರಾಧವಲ್ಲ, ಇದು ಫೋಕ್ಕೊ ಕಾಯ್ದೆಯ ಸೆಕ್ಷನ್ 10ರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಶಿಕ್ಷಕನ ವಿರುದ್ದ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಿದ ನ್ಯಾಯಪೀಠವು, ಲೈಂಗಿಕ ಉದ್ದೇಶ ಸಾಬೀತಾಗದ ಹೊರತು, ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಧಿಸುವ ಶಿಕ್ಷೆ ಅಥವಾ ಅವರ ಸಂವೇದನಾಶೀಲವಲ್ಲದ ವರ್ತನೆಯಿಂದ ಉಂಟಾಗುವ ದೈಹಿಕ ಸ್ಪರ್ಶವು ಪೋಕ್ಕೊ ಕಾಯ್ದೆಯಡಿ ಲೈಂಗಿಕ ದೌರ್ಜನ್ಯದ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೆ ಶಿಕ್ಷಕರ ಇಂತಹ ನಡವಳಿಕೆಯು ಅನುಚಿತವಾದ ಶಿಕ್ಷಾ ಸ್ವರೂಪವಾಗಿದೆ. ಎಳೆಯ ವಯಸ್ಸಿನ ವಿದ್ಯಾರ್ಥಿಗಳೊಂದಿಗೆ ವ್ಯವಹರಿಸುವಾಗ ಶಿಕ್ಷಕರು ಹೆಚ್ಚು ಸಂವೇದನಾಶೀಲರಾಗಿ ಇರಬೇಕು ಎಂದು ತಿಳಿಹೇಳಿದೆ.
ಬಾಲಕಿಯರ ಅಥವಾ ಸಹ-ಶಿಕ್ಷಣ ಶಾಲೆಗಳಲ್ಲಿ ಶಿಕ್ಷಕರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪವು ‘ಮರಣ-ದಂಡನೆಯಂತೆ, ಇಂತಹ ಆರೋಪವು ಶಿಕ್ಷಕರ ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಶಾಶ್ವತವಾಗಿ ಹಾಳುಮಾಡುತ್ತದೆ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
