22/09/2026

Law Guide Kannada

Online Guide

ಕಳ್ಳಬಟ್ಟಿ ದುರಂತ ತಡೆಗೆ ಕ್ರಮ: ಹಲವು ಸಲಹೆಗಳನ್ನ ನೀಡಿದ ಸುಪ್ರೀಂ

ನವದೆಹಲಿ: ದೇಶದಲ್ಲಿ ಕಳ್ಳಬಟ್ಟಿ ತಯಾರಿಕೆ, ಸಾಗಾಟ ಮತ್ತು ಮಾರಾಟವನ್ನು ತಡೆಯಲು ಸುಪ್ರೀಂಕೋರ್ಟ್ ಹಲವು ಕ್ರಮಗಳನ್ನ ಸೂಚಿಸಿದೆ.

ವಿಷಯುಕ್ತ ಅಥವಾ ಕಳಪೆ ಮದ್ಯ ಸೇವನೆಯಿಂದ ಸಂಭವಿಸುವ ದುರಂತಗಳನ್ನು ತಡೆಗಟ್ಟಲು ಕಳ್ಳಬಟ್ಟಿ ತಯಾರಿಕೆ, ಸಾಗಾಟ ಮತ್ತು ಮಾರಾಟಕ್ಕೆ ಕಡಿವಾಣ ಹಾಕಲು ವಿವಿಧ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಸಲಹೆಗಳನ್ನ ನೀಡಿದೆ  ಮುಂಬೈನಲ್ಲಿ ಸಂಭವಿಸಿದ್ದ ಕಳ್ಳಬಟ್ಟಿ ದುರಂತ ಘಟನೆ ನಂತರ 2011ರ ಅಧಿಸೂಚನೆಯ ಮೂಲಕ ‘ಮಹಾರಾಷ್ಟ್ರ ವಿಷಕಾರಿ ವಸ್ತುಗಳ ನಿಯಮಾವಳಿ’ಗೆ ಸೇರಿಸಲಾಗಿದ್ದ 18ಎ ಮತ್ತು 18ಬಿ ನಿಯಮಗಳನ್ನು ರದ್ದುಪಡಿಸುವ ವೇಳೆ .ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠ ಈ ಸಲಹೆಗಳನ್ನು ನೀಡಿದೆ.

ಅಕ್ರಮ ಮದ್ಯ ತಯಾರಿಕೆ ಮತ್ತು ಪೂರೈಕೆಯ ಸರಪಳಿಯನ್ನು ಮುರಿಯುವುದು, ರಾಜ್ಯದ ಗಡಿಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸುವುದು ಹಾಗೂ ಕಳಪೆ ಮದ್ಯ ತಯಾರಿಕೆಗೆ ಬಳಸುವ ರಾಸಾಯನಿಕ ‘ಮೆಥನಾಲ್’ ಮೇಲಿನ ನಿಯಂತ್ರಣ ಬಿಗಿಗೊಳಿಸುವುದು ಸೇರಿದಂತೆ ಹಲವು ಸಲಹೆಗಳನ್ನ ನ್ಯಾಯಪೀಠವು ನೀಡಿದೆ.

‘ಮದ್ಯದ ಮೇಲೆ ಸಂಪೂರ್ಣ ನಿಷೇಧ ಹೇರಿದರೆ ಕೆಲವೊಮ್ಮೆ ಮದ್ಯದ ಸಂಗ್ರಹ, ಸಾಗಾಟವನ್ನು ಭೂಗತ ಚಟುವಟಿಕೆಯನ್ನಾಗಿ ಪರಿವರ್ತಿಸುತ್ತದೆ ಮತ್ತು ನಕಲಿ ಮದ್ಯದ ಹಾವಳಿಯನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ’ ನ್ಯಾಯಪೀಠವು ತಮ್ಮ ತೀರ್ಪಿನಲ್ಲಿ ತಿಳಿಸಿದೆ. ಹೀಗಾಗಿ ಮದ್ಯದ ಸಂಪೂರ್ಣ ನಿಷೇಧದ ಬದಲಿಗೆ ಕೆಲವು ಪರ್ಯಾಯ ಕ್ರಮಗಳನ್ನು ನ್ಯಾಯಪೀಠ

ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು

Copyright © All rights reserved. | Newsphere by AF themes.