23/04/2026

Law Guide Kannada

Online Guide

ಆನ್ ಲೈನ್ ಗೆ ತಕ್ಷಣವೇ ಫೋಟೊ, ವಿಡಿಯೋ ಅಪ್ ಲೋಡ್: ನ್ಯಾಯಸಮ್ಮತ ವಿಚಾರಣೆಗೆ ಎಫೆಕ್ಟ್: ಸುಪ್ರೀಂ ಕಳವಳ

ನವದೆಹಲಿ: ಮೊಬೈಲ್ ಫೋನ್ ನಲ್ಲಿ ಚಿತ್ರೀಕರಿಸಿದ ಫೋಟೊ, ವೀಡಿಯೊಗಳನ್ನು ಜನರು ತಕ್ಷಣ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡುವ ಪ್ರವೃತ್ತಿಯ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಇಂತಹ ಪ್ರವೃತ್ತಿಯು ನ್ಯಾಯಯುತ ವಿಚಾರಣೆಗೆ ಗಂಭೀರ ಪರಿಣಾಮವನ್ನುಂಟು ಮಾಡುತ್ತವೆ ಎಂದು ಹೇಳಿದೆ.

‘ಪೊಲೀಸರು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಿಗಳ ವಿಡಿಯೊ ಮತ್ತು ಫೋಟೊಗಳನ್ನು ಅಪ್ಲೋಡ್ ಮಾಡುತ್ತಾ, ಜನರ ಮನಸ್ಸಿನಲ್ಲಿ ಪಕ್ಷಪಾತದ ಭಾವನೆಯನ್ನು ಸೃಷ್ಟಿಸುತ್ತಾರೆ’ ಎಂದು ಆರೋಪಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್ ಮಾಲ್ಯಾ ಬಾಗ್ಚಿ ಮತ್ತು ವಿಪುಲ್ ಎಂ ಪಂಚೋಲಿ ಅವರನ್ನೊಳಗೊಂಡ ಪೀಠವು, ಜನರು ಮೊಬೈಲ್ ಫೋನ್ ಗಳಲ್ಲಿ ಚಿತ್ರೀಕರಿಸಿದ ವಿಡಿಯೊಗಳನ್ನು ತಕ್ಷಣವೇ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡುವ ಪ್ರವೃತ್ತಿಯಿಂದ ಇಂತಹ ಚಟುವಟಿಕೆಗಳಿಂದ ನ್ಯಾಯಯುತ ವಿಚಾರಣೆ ಮೇಲೆ ಗಂಭೀರ ಅಪಾಯವನ್ನುಂಟು ಮಾಡುತ್ತದೆ ಎಂದು ತಿಳಿಸಿತು.
ಮತ್ತೊಂದು ಪ್ರಕರಣದಲ್ಲಿ, ‘ಪೊಲೀಸರು ಮಾಧ್ಯದವರಿಗೆ ಮಾಹಿತಿ ನೀಡುವ ವಿಚಾರದಲ್ಲೂ ಮಾರ್ಗಸೂಚಿಗಳನ್ನು ರೂಪಿಸುವಂತೆ ನ್ಯಾಯಾಲಯವು ಈಗಾಗಲೇ ರಾಜ್ಯಗಳನ್ನು ಕೇಳಿದೆ. ಇದರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವಂತಹ ಪೋಸ್ಟ್ಗಳೂ ಸೇರುತ್ತವೆ’ ಎಂದು ಪಿಐಎಲ್ ವಾದಿಸಿದೆ ಈ ಮಾರ್ಗಸೂಚಿಗಳಿಂದ ಬದಲಾವಣೆ ಆಗಲಿರುವುದನ್ನು ನಿರೀಕ್ಷಿಸುವಂತೆ ನ್ಯಾಯಪೀಠವು ಅರ್ಜಿದಾರ ಹೇಮೇಂದ್ರ ಪಟೇಲ್ ಅವರಿಗೆ ಹೇಳಿತು. ‘ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಹೊಂದಿರುವ ಪ್ರತಿಯೊಬ್ಬರೂ ಮಾಧ್ಯಮವಾಗಿದ್ದಾರೆ’ ಎಂಬ ಪಟೇಲ್ ಪರ ಹಾಜರಾಗಿದ್ದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರ ಮಾತನ್ನು ಪೀಠ ಸಮ್ಮತಿಸಿತು.

ಆರೋಪಿಗಳ ಫೋಟೋ/ವಿಡಿಯೋಗಳನ್ನು ಪೊಲೀಸರು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡುವುದು ನ್ಯಾಯಯುತ ವಿಚಾರಣೆಗೆ (Fair Trial) ಮತ್ತು ವೈಯಕ್ತಿಕ ಘನತೆಗೆ ಧಕ್ಕೆ ತರುತ್ತದೆ. ಇಂತಹ ಕ್ರಮವು ಸಾರ್ವಜನಿಕ ಅಭಿಪ್ರಾಯವನ್ನು ತಪ್ಪು ದಾರಿಗೆಳೆಯುತ್ತದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠವು, ಇದು “ಡಿಜಿಟಲ್ ಬಂಧನ”ದಂತಿದೆ ಎಂದು ಎಚ್ಚರಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.