ವಿವಾಹಪೂರ್ವ ದೈಹಿಕ ಸಂಬಂಧ ವ್ಯಕ್ತಿತ್ವಕ್ಕೆ ಅಬಾಧಿತ – ಸುಪ್ರೀಂಕೋರ್ಟ್
ನವದೆಹಲಿ: ಅವಿವಾಹಿತ ವಯಸ್ಕರ ಒಪ್ಪಿತ ದೈಹಿಕ ಸಂಬಂಧದ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪುನ್ನ ನೀಡಿದೆ.
ಅವಿವಾಹಿತ ವಯಸ್ಕರ ನಡುವಿನ ಒಪ್ಪಿತ ದೈಹಿಕ ಸಂಬಂಧವು ವ್ಯಕ್ತಿಯ ಚಾರಿತ್ರ ಬಗ್ಗೆ ವ್ಯತಿರಿಕ್ತ ಪ್ರಭಾವ ಬೀರಲು ಕಾರಣವಾಗುವುದಿಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಭ್ಯರ್ಥಿಯು ಪರಿಚಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪ್ರಕರಣ ಸಂಬಂಧ ಪೊಲೀಸ್ ಕಾನ್ಸ್ ಟೆಬಲ್ ಪರೀಕ್ಷೆಯಲ್ಲಿ ಅಭ್ಯರ್ಥಿಯ ಆಯ್ಕೆಯನ್ನು ರದ್ದು ಮಾಡಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ತೆಲಂಗಾಣ ಪೊಲೀಸ್ ಕಾನ್ಸ್ ಟೆಬಲ್ ಪರೀಕ್ಷೆಯಲ್ಲಿ ಅಭ್ಯರ್ಥಿಯ ಆಯ್ಕೆಯನ್ನು ರದ್ದುಗೊಳಿಸಿರುವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
2014 ರಲ್ಲಿ ತೆಲಂಗಾಣ ರಾಜ್ಯಮಟ್ಟದ ಪೊಲೀಸ್ ನೇಮಕಾತಿ ಮಂಡಳಿಯು ಕ್ರಿಮಿನಲ್ ಪ್ರಕರಣವೊಂದರಲ್ಲಿ ‘ಸ್ಟೆಪೆಂಡಿಯರಿ ಕೆಡೆಟ್ ಟ್ರೈನಿ ಪೋಲೀಸ್ ಕಾನ್ಸ್ ಟೇಬಲ್’ ಆಗಿ ತಾತ್ಕಾಲಿಕ ಆಯ್ಕೆಯನ್ನು ರದ್ದುಗೊಳಿಸಿತ್ತು.
ಅಭ್ಯರ್ಥಿಯು ಪರಿಚಿತ ಮಹಿಳೆಯೊಂದಿಗೆ ಮದುವೆಯ ಸುಳ್ಳು ಭರವಸೆಯ ಮೇಲೆ ಲೈಂಗಿಕ ಸಂಬಂಧ ಹೊಂದಿದ್ದ ಆರೋಪದಿಂದ ಈ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ‘ಈ ವಿಷಯವನ್ನು 2015 ರಲ್ಲಿ ಲೋಕ ಅದಾಲತ್ ಮುಂದೆ ಇತ್ಯರ್ಥಪಡಿಸಲಾಯಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
