ಡಿಕ್ರಿ ತಪಶೀಲು ಅಸ್ತಿ ಮೇಲಿನ ಹಕ್ಕು: CPC ಕಲಂ 146ರಡಿ ಅಮಲ್ದಾರಿ ಪ್ರಕ್ರಿಯೆ ಮುಂದುವರಿಸಬಹುದು – ಹೈಕೋರ್ಟ್
ತಿರುವನಂತಪುರಂ: ಡಿಕ್ರಿ ತಪಶೀಲು ಅಸ್ತಿ ಮೇಲಿನ ಹಕ್ಕು ಸಂಬಂಧ ನೇರ ಅಮಲ್ದಾರಿ ಪ್ರಕ್ರಿಯೆಗೆ ಕೇರಳ ಹೈಕೋರ್ಟ್ ಹಸಿರು ನಿಶಾನೆ ತೋರಿದೆ.
ಕೇರಳ ಹೈಕೋರ್ಟ್ ಮಹತ್ತ್ವದ ತೀರ್ಪೊಂದರಲ್ಲಿ, ಡಿಕ್ರಿ ತಪಶೀಲು (ಆಸ್ತಿಯ ಮೇಲಿನ ಹಕ್ಕನ್ನು ಅಥವಾ ಆಸಕ್ತಿಯನ್ನು ಉತ್ತರಾಧಿಕಾರ, ವಿಲ್ ಅಥವಾ ಹಸ್ತಾಂತರದ ಮೂಲಕ ಪಡೆದ ವ್ಯಕ್ತಿಯು, ಡಿಕ್ರಿಯನ್ನು ನೀಡಿದ ನ್ಯಾಯಾಲಯದಿಂದ ಮೊದಲು ಆದೇಶ ಘಿಘಿI ನಿಯಮ 16ರ ಅಡಿಯಲ್ಲಿ ತನ್ನ ಹೆಸರನ್ನು ಬದಲಾಯಿಸಿಕೊಳ್ಳದೆ, CPC ಕಲಂ 146 ಹಾಗೂ ಆದೇಶ ಘಿಘಿI ನಿಯಮ 16ರ ವಿವರಣೆಯ ಆಧಾರದ ಮೇಲೆ ನೇರವಾಗಿ ಅಮಲ್ಲೂಾರಿ ನ್ಯಾಯಾಲಯದಲೇ ಜಾರಿ ಪ್ರಕ್ರಿಯೆಯನ್ನು ಮುಂದುವರಿಸಬಹುದು ಎಂದು ತೀರ್ಪು ನೀಡಿದೆ.
ಈ ತೀರ್ಪಿನ ಮೂಲಕ ಕಾಶಿ ಮಠ ಸಂಸ್ಥಾನದ ಶ್ರೀಮದ್ ಸಮ್ಯಮೀಂದ್ರ ತೀರ್ಥ ಸ್ವಾಮೀಜಿಯವರಿಗೆ, ದಶಕಕ್ಕೂ ಹೆಚ್ಚು ಕಾಲ ಬಾಕಿ ಉಳಿದಿದ್ದ ಜಾರಿ ಪ್ರಕ್ರಿಯೆಯನ್ನು ಮುಂದುವರಿಸಲು ಹೈಕೋರ್ಟ್ ಅನುಮತಿ ನೀಡಿದೆ.
ನ್ಯಾಯಮೂರ್ತಿ ಈಶ್ವರನ್ ಎಸ್.ಅವರ ಪೀಠವು, ಡಿಕ್ರಿ ತಪಶೀಲು ಆಸ್ತಿಯ ಮೇಲಿನ ಹಕ್ಕು ಪಡೆದ ವ್ಯಕ್ತಿಯು ಸಿವಿಲ್ ಪ್ರಕ್ರಿಯಾ ಸಂಹಿತೆ (CPC) ಕಲಂ 146ರ ಅಡಿಯಲ್ಲಿ ಅಮಲ್ದಾರಿ ಪ್ರಕ್ರಿಯೆಯನ್ನು ಮುಂದುವರಿಸಬಹುದು; ಅದಕ್ಕಾಗಿ ಮೊದಲು ಆದೇಶ ಘಿಘಿI ನಿಯಮ 16ರ ಅಡಿಯಲ್ಲಿ ಬದಲಿ ಪಡೆಯುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
“ಆದೇಶ ಘಿಘಿI ನಿಯಮ 16, ಅದರ ವಿವರಣೆ ಹಾಗೂ ಅPಅ ಕಲಂ 146 ಅನ್ನು ಒಟ್ಟಾಗಿ ಓದಿದಾಗ, ಡಿಕ್ರಿಯನ್ನೇ ಹಸ್ತಾಂತರ ಮಾಡದೆ, ಡಿಕ್ಕಿ ತಪಶೀಲು ಆಸ್ತಿಯ ಮೇಲಿನ ಹಕ್ಕು ಮಾತ್ರ ವರ್ಗಾವಣೆಯಾಗಿರುವ ಸಂದರ್ಭಗಳಲ್ಲಿ, ಆದೇಶ ಘಿಘಿI ನಿಯಮ 16ರ ವಿವರಣೆ ಅನ್ವಯಿಸುತ್ತದೆ. ಅಂತಹ ಸಂದರ್ಭಗಳಲ್ಲಿ ಹಕ್ಕು ಪಡೆದ ವ್ಯಕ್ತಿಯು ಡಿಕ್ರಿ ನೀಡಿದ ನ್ಯಾಯಾಲಯದಲ್ಲಿ ಮೊದಲು ಬದಲಿ ಪಡೆಯದೆ, CPC ಕಲಂ 145ರ ಅಡಿಯಲ್ಲಿ ನೇರವಾಗಿ ಜಾರಿ ನ್ಯಾಯಾಲಯದಲ್ಲಿ ಜಾರಿ ಪ್ರಕ್ರಿಯೆಯನ್ನು ಮುಂದುವರಿಸಲು ಅರ್ಹನಾಗಿರುತ್ತಾನೆ” ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ವಿವರ
ಕಾಶಿ ಮಠ ಸಂಸ್ಥಾನದ ಮಠಾಧಿಪತಿ ಸ್ಥಾನಕ್ಕೆ ಸಂಬಂಧಿಸಿದ ಗುರು-ಶಿಷ್ಯರ ನಡುವಿನ ವಿವಾದದಿಂದ ಈ ವ್ಯಾಜ್ಯ ಆರಂಭಗೊಂಡಿತ್ತು. 2000ರಲ್ಲಿ ಶಿಷ್ಯನು ತಾನೇ ನಿಜವಾದ ಮಠಾಧಿಪತಿ ಎಂದು ಹೇಳಿ ದಾವೆ ಹೂಡಿದ್ದನು. ಆದರೆ ಆ ದಾವೆ ವಜಾಗೊಂಡು, ಗುರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಸಲ್ಲಿಸಿದ್ದ ಪ್ರತಿದಾವೆಗೆ ನ್ಯಾಯಾಲಯ ಡಿಕ್ರಿ ನೀಡಿತ್ತು. ಆ ಡಿಕ್ರಿಯ ಮೂಲಕ ಶಿಷ್ಯನಿಗೆ ಮಠದ ಆಡಳಿತದಲ್ಲಿ ಹಸ್ತಕ್ಷೇಪ ಮಾಡದಂತೆ ಶಾಶ್ವತ ತಡೆಯಾಜ್ಞೆ ನೀಡಲಾಗಿದ್ದು, ಮಠದ ದೇವರ ವಿಗ್ರಹಗಳು ಹಾಗೂ ಇತರೆ ಆಸ್ತಿಗಳನ್ನ ಹಿಂತಿರುಗಿಸುವಂತೆ ಆದೇಶಿಸಿತ್ತು. ಆದರೆ, ತೀರ್ಪಿನ ಜಾರಿ ಪ್ರಕ್ರಿಯೆಯನ್ನು ತೀರ್ಪುಋಣಿ ನಿರಂತರವಾಗಿ ವಿರೋಧಿಸುತ್ತಾ, ನ್ಯಾಯಾಲಯದ ಅಧಿಕಾರವನ್ನೇ ಪ್ರಶ್ನಿಸಿ, ಹಲವು ವರ್ಷಗಳ ಕಾಲ ವಿಳಂಬಗೊಳಿಸಿದ್ದನು. ಒಂದು ಹಂತದಲ್ಲಿ ಅವನನ್ನು ಪತ್ತೆಹಚ್ಚಲು CBI ತನಿಖೆಯನ್ನೂ ಆದೇಶಿಸಲಾಗಿತ್ತು.
2017ರಲ್ಲಿ ಮೂಲ ಡಿಕ್ರಿದಾರರು ನಿಧನರಾದ ನಂತರ, ಅವರಿಂದ ನಾಮನಿರ್ದೇಶಿತ ಉತ್ತರಾಧಿಕಾರಿಯಾಗಿದ್ದ ಶ್ರೀಮದ್ ಸತ್ಯಮೀಂದ್ರ ತೀರ್ಥ ಸ್ವಾಮೀಜಿಯವರು ಎರ್ನಾಕುಳಂ ಜಾರಿ ನ್ಯಾಯಾಲಯದಲ್ಲಿ ಹೆಚ್ಚುವರಿ ಡಿಕ್ರಿದಾರರಾಗಿ ಸೇರ್ಪಡೆಯಾಗಲು ಅರ್ಜಿ ಸಲ್ಲಿಸಿದರು. ಆದರೆ, ಜಾರಿ ನ್ಯಾಯಾಲಯವು ಮೊದಲು ಡಿಕ್ಕಿ ನೀಡಿದ ತಿರುಪತಿ ನ್ಯಾಯಾಲಯದಿಂದ ಬದಲಿ ಆದೇಶ ಪಡೆಯಬೇಕು ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿತು.
ಹೈಕೋರ್ಟ್, ಜಾರಿ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ. 1976ರ ತಿದ್ದುಪಡಿಯ ಮೂಲಕ ಸೇರಿಸಲಾದ ಆದೇಶ XXI ನಿಯಮ 16ರ ವಿವರಣೆ CPC ಕಲಂ 146ರ ಅನ್ವಯವನ್ನು ಉಳಿಸಿಕೊಂಡಿದೆ ಎಂದು ತಿಳಿಸಿತು
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
