PTCL ಆಸ್ತಿ ಮಾರಾಟಕ್ಕೆ ಅನುಮತಿ ನೀಡುವಾಗ ಜಿಲ್ಲಾಧಿಕಾರಿ ಪರ್ಯಾಯ ಭೂಮಿ ಖರೀದಿಯ ಷರತ್ತು ವಿಧಿಸುವಂತಿಲ್ಲ
ಬೆಂಗಳೂರು: ಪಿಟಿಸಿಎಲ್ ಆಸ್ತಿ ಮಾರಾಟಕ್ಕೆ ಜಿಲ್ಲಾಧಿಕಾರಿ ಅನುಮತಿ ನೀಡುವಾಗ ಪರ್ಯಾಯ ಭೂಮಿ ಖರೀದಿಯ ಷರತ್ತು ವಿಧಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್ ನ್ಯಾ. ಆರ್.ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ. ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಕೆಲವು ಜಮೀನುಗಳ ಹಸ್ತಾಂತರ ನಿಷೇಧ) (ತಿದ್ದುಪಡಿ) ಕಾಯ್ದೆ 2023 ಪ್ರಕಾರ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಂಜೂರಾದ ಭೂಮಿಯ ಮಾರಾಟಕ್ಕೆ ಅನುಮತಿ ನೀಡುವಾಗ ಮಾರಾಟದಿಂದ ಬಂದ ಹಣದಲ್ಲಿ ಪರ್ಯಾಯ ಭೂಮಿಯನ್ನು ಖರೀದಿಸಬೇಕೆಂಬ ಷರತ್ತನ್ನು ಜಿಲ್ಲಾಧಿಕಾರಿ ವಿಧಿಸುವಂತಿಲ್ಲ ತೀರ್ಪಿನಲ್ಲಿ ಉಲ್ಲೇಖಿಸಿದೆ.
ಮಂಜೂರು ಮಾಡಿದ ಭೂಮಿಯನ್ನು ಪರಭಾರೆ ಮಾಡಲು ಅನುಮತಿ ನೀಡುವಾಗ ಮಾರಾಟದ ಹಣದಿಂದ ಪರ್ಯಾಯ ಭೂಮಿಯನ್ನು ಖರೀದಿಸಲು ಗ್ಯಾರಂಟಿ ನೀಡುವ ಷರತ್ತು ವಿಧಿಸಲು ಜಿಲ್ಲಾಧಿಕಾರಿಗೆ ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಕೆಲವು ಜಮೀನುಗಳ ಹಸ್ತಾಂತರ ನಿಷೇಧ) (ತಿದ್ದುಪಡಿ) ಕಾಯ್ದೆ (PTCL Act)ಗೆ ಸಂಬಂಧಿಸಿದ ಕೆಲವು ಮಹತ್ವದ ಸುಪ್ರೀಂ ಕೋರ್ಟ್ ತೀರ್ಪುಗಳು ಈ ಕೆಳಕಂಡಂತಿದೆ.
Supreme Court of India:
Nekkanti Rama Lakshmi v. State of Karnataka…
K.T. Huchegowda v. Commissioner
Situ Sahu v. State of Jharkhand
Collector v. D. Narsing Rao
Karnataka High Court:-
Devamma v. Commissioner
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
