07/03/2026

Law Guide Kannada

Online Guide

ಮರಣದಂಡನೆ ಅರ್ಜಿ ಬಾಕಿ ಬಗ್ಗೆ ವಿವರ ನೀಡಲು ವಿಫಲ : ಹೈಕೋರ್ಟ್ ಗೆ ಸುಪ್ರೀಂ ತರಾಟೆ

ನವದೆಹಲಿ: ಕರ್ನಾಟಕ ರಾಜ್ಯದಲ್ಲಿ ಮರಣದಂಡನೆ ಅರ್ಜಿಗಳು ಬಾಕಿ ಇರುವ ಬಗ್ಗೆ ವಿವರಗಳನ್ನು ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ಗೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು

ಪ್ರಕರಣವೊಂದರ ವಿಚಾರಣೆ ವೇಳೆ, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಹಾಗೂ ಪಂಕಜ್ ಮಿತ್ತಲ್ ಅವರ ಪೀಠವು ದೇಶದಾದ್ಯಂತ ಬಾಕಿ ಇರುವ ಮರಣದಂಡನೆ ಅರ್ಜಿಗಳ ಕುರಿತು ವಿವರಗಳನ್ನು ಕೋರಿತು. ಈ ವೇಳೆ ರಾಜ್ಯದಲ್ಲಿ ಮರಣದಂಡನೆ ಅರ್ಜಿಗಳು ಬಾಕಿ ಇರುವ ಬಗ್ಗೆ ವಿವರಗಳನ್ನು ಎರಡು ವಾರಗಳಲ್ಲಿ ನೀಡಬೇಕು ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಗೆ ನಿರ್ದೇಶನ ನೀಡಿತು.

ದುರದೃಷ್ಟವಶಾತ್ ಕರ್ನಾಟಕದ ಹೈಕೋರ್ಟ್ ಸೇರಿ ಎಲ್ಲ ಹೈಕೋರ್ಟ್ ಗಳು, ಈ ವಿಷಯದಲ್ಲಿ ನ್ಯಾಯಾಲಯಕ್ಕೆ ಅಗತ್ಯವಾದ ದತ್ತಾಂಶ ಒದಗಿಸಲು ವಿಫಲವಾಗಿದೆ. ಅಗತ್ಯ ಮಾಹಿತಿ ಒದಗಿಸಲು ಏಕೆ ವಿಫಲರಾಗಿದ್ದಾರೆ ಎಂಬುದನ್ನು ಕರ್ನಾಟಕ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ವಿವರಿಸಬೇಕಾಗಿದೆ. ಈ ನಿಟ್ಟಿನಲ್ಲಿ ವಿವರಣೆ ನೀಡಲು ರಿಜಿಸ್ಟ್ರಾರ್ ಜನರಲ್ ಗೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ’ ಎಂದು ನ್ಯಾಯಪೀಠ ತಿಳಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.