ಸತತ ನಾಲ್ಕು ದಿನ ರಜೆ: ನ್ಯಾಯಾಂಗ ಸಿಬ್ಬಂದಿ, ವಕೀಲರಿಗೆ ಖುಷಿಕೊಟ್ಟ ಭರ್ಜರಿ ವೀಕೆಂಡ್
ಬೆಂಗಳೂರು: ಮಾರ್ಚ್ 19ರಿಂದ 22ರ ವರೆಗೆ ರಾಜ್ಯದ ನ್ಯಾಯಾಲಯಗಳಿಗೆ ಸತತ ನಾಲ್ಕು ದಿನ ರಜೆ ಸಿಕ್ಕಿದ್ದು ನ್ಯಾಯಾಂಗ ಸಿಬ್ಬಂದಿ, ವಕೀಲರಿಗೆ ಭರ್ಜರಿ ವೀಕೆಂಡ್ ಖುಷಿಕೊಟ್ಟದೆ.
ಮಾರ್ಚ್ 19ರಂದು ರಾಜ್ಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಕೋರ್ಟ್ಗಳಿಗೆ ರಜೆ ಸಾರಲಾಗಿತ್ತು. ಮಾರ್ಚ್ 20ರಂದು(ಇಂದು) ಲಿಂಕಿಂಗ್ ಹಾಲಿಡೇ ಆಗಿ ರಾಜ್ಯ ಹೈಕೋರ್ಟ್ ರಜೆ ಘೋಷಿಸಿದ್ದು, ರಾಜ್ಯದ ಎಲ್ಲ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ರಜೆಯಿರಲಿದೆ. ಈ ದಿನದ ರಜೆಯನ್ನು ತಿಂಗಳ ನಾಲ್ಕನೇ ಶನಿವಾರ ಕರ್ತವ್ಯದ ದಿನವಾಗಿ ಪರಿಗಣಿಸಿದ್ದು, ಕಲಾಪ ನಡೆಸುವ ಮೂಲಕ ಈ ರಜೆಯನ್ನು ಸರಿದೂಗಿಸಲಾಗುವುದು ಎಂದು ತಿಳಿಸಿದೆ.
ಮಾರ್ಚ್ 21ರಂದು ಮುಸಲ್ಮಾನ ಬಾಂಧವರ ಹಬ್ಬರಂಜಾನ್ ಹಬ್ಬವಿದ್ದು ಈ ದಿನವೂ ಸರ್ಕಾರಿ ರಜೆಯಾಗಿದೆ. ಇನ್ನುಮಾರ್ಚ್ 22ರಂದು ಭಾನುವಾರವಾದ ಕಾರಣ ರಜೆ ಸಿಗಲಿದ್ದು ಹೀಗೆ, ಸತತ ನಾಲ್ಕು ದಿನಗಳ ಕಾಲ ರಜೆ ಸಿಕ್ಕಿದ್ದು ನ್ಯಾಯಾಂಗ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ವಕೀಲರು ಸಂಭ್ರಮ ಸಂತೋಷದಿಂದ ವಿಕೆಂಡ್ ಕಳೆಯುತ್ತಿದ್ದಾರೆ.
ಹಾಗೆಯೇ ಮಾರ್ಚ್ 29ರಿಂದ 31ರ ವರೆಗೆ ಸತತ ಮೂರು ದಿನಗಳವರೆಗೆ ರಜೆ ದೊರೆಯಲಿದೆ. ಮಾರ್ಚ್ 30ನ್ನು ಲಿಂಕಿಂಗ್ ಹಾಲಿಡೇ ಆಗಿ ಕರ್ನಾಟಕ ಹೈಕೋರ್ಟ್ ಘೋಷಣೆ ಮಾಡಿದ್ದು, ಆ ವಾರದಲ್ಲೂ ಸತತ ಮೂರು ದಿನಗಳ ರಜೆಯ ಖುಷಿ ವಕೀಲರು ಮತ್ತು ನ್ಯಾಯಾಂಗ ಸಿಬ್ಬಂದಿಗೆ ಸಿಗಲಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
