ಸೈಕಲ್ ನಲ್ಲೇ ಹೈಕೋರ್ಟ್ ಗೆ ಆಗಮಿಸಿ ಎಲ್ಲರ ಗಮನ ಸೆಳೆದ ನ್ಯಾಯಾಧೀಶರು
ಭೋಪಾಲ್: ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ದ್ವಾರಕಾದೀಶ್ ಬನ್ಸಾಲ್ ಅವರು ಸೈಕಲ್ ನಲ್ಲೇ ಹೈಕೋರ್ಟ್ ಗೆ ಆಗಮಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಹೌದು ಮಧ್ಯಪ್ರಾಚ್ಯದಲ್ಲಿ ಯುದ್ದ, ಉದ್ವಿಗ್ನತೆಯಿಂದಾಗಿ ಜಾಗತಿಕ ಇಂಧನ ಬಿಕ್ಕಟ್ಟು ಎದುರಾಗಿರುವ ಈ ಸಂದರ್ಭದಲ್ಲಿ ಇಂಧನ ಉಳಿತಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದರು. ಹೀಗಾಗಿ ಇಂಧನ ಉಳಿಸಿ’ ಜಾಗೃತಿ ಅಭಿಯಾನದ ಹಿನ್ನೆಲೆಯಲ್ಲಿ ಪ್ರಧಾನಿಮೋದಿ ಕರೆಗೆ ಓಗೊಟ್ಟು ಹೈಕೋರ್ಟ್ ನ್ಯಾಯಮೂರ್ತಿ ದ್ವಾರಕಾದೀಶ್ ಅವರು ಕರ್ತವ್ಯಕ್ಕೆ ಹಾಜರಾಗಲು ಸೈಕಲ್ ತುಳಿದು ಮನೆಯಿಂದ ಹೈಕೋರ್ಟ್ ಗೆ ಆಗಮಿಸಿದರು.
ಇನ್ಸ್ಟಾಗ್ರಾಮ್ ವಿಡಿಯೊದಲ್ಲಿ ನ್ಯಾಯಮೂರ್ತಿ ಅವರು ಸೈಕಲ್ ಸವಾರಿ ಮಾಡುತ್ತಾ, ಕಡಿಮೆ ದೂರದ ಪ್ರಯಾಣಕ್ಕೆ ಸೈಕಲ್ ಬಳಕೆಯನ್ನು ಉತ್ತೇಜಿಸುವ ಬಗ್ಗೆ ಪೋಸ್ಟ್ ಹಾಕಿಕೊಂಡಿದ್ದಾರೆ.
“ಒಂದು ಅಥವಾ ಎರಡು ಕಿ.ಮೀ. ಕಡಿಮೆ ದೂರದ ಪ್ರಯಾಣಕ್ಕಾಗಿ ಸೈಕಲ್ ಬಳಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಾನು ಸೈಕಲ್ನಲ್ಲಿ ಬರಲು ನಿರ್ಧರಿಸಿದ್ದೇನೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಉಳಿಸುವಂತೆ ಮನವಿ ಮಾಡಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು, ನಾನೂ ಕೂಡ ನನ್ನ ನಿವಾಸದಿಂದ ಹೈಕೋರ್ಟ್ಗೆ ಸೈಕಲ್ನಲ್ಲಿ ಬರಬೇಕು ಮತ್ತು ಸಾಮಾನ್ಯ ಜನರಿಗೆ ಸಂದೇಶ ನೀಡಬೇಕು ಎಂದು ನಿರ್ಧರಿಸಿದೆ,” ಎಂದು ನ್ಯಾಯಮೂರ್ತಿ ದ್ವಾರಕಾದೀಶ್ ಬನ್ಸಾಲ್ ತಿಳಿಸಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
