‘ನೋಂದಣಿ ಶುಲ್ಕ’ ಏರಿಕೆಗೆ ಪ್ರಸ್ತಾವನೆ: ಕಾನೂನು ಪದವೀಧರರಿಗೆ BCI ಶಾಕ್
ನವದೆಹಲಿ: ದೇಶದಾದ್ಯಂತ ಕಾನೂನು ವಿದ್ಯಾರ್ಥಿಗಳು ಹಾಗೂ ಹೊಸದಾಗಿ ವಕೀಲ ವೃತ್ತಿಗೆ ಸೇರುವವರಿಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ನೋಂದಣಿ ಶುಲ್ಕ ಏರಿಕೆಯ ಶಾಕ್ ನೀಡಲು ಮುಂದಾಗಿದೆ.
ಹೌದು, ಕಾನೂನು ಪದವೀಧರರ ಮೇಲೆ ನೇರ ಪರಿಣಾಮ ಬೀರುವ ಮಹತ್ವದ ಪ್ರಸ್ತಾವನೆಯನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಮುಂದಿಟ್ಟಿದ್ದು, ಪ್ರಸ್ತುತ ವಕೀಲರ ನೋಂದಣಿಗೆ ವಿಧಿಸಲಾಗುತ್ತಿರುವ 750 ರೂ. ಶುಲ್ಕವನ್ನು 22,500 ರೂ.ಗೆ ಏರಿಕೆ ಮಾಡುವ ಪ್ರಸ್ತಾವವನ್ನು ಕರಡುAdvocates (Amendment) Bill-2026ನಲ್ಲಿ ಸೇರಿಸಲಾಗಿದೆ. ಈ ಕರಡು ಮಸೂದೆಗೆ ಸಾರ್ವಜನಿಕರು ಹಾಗೂ ಕಾನೂನು ವಲಯದ ತಜ್ಞರಿಂದ ಜುಲೈ 31, 2026ರ ಮಧ್ಯಾಹ್ನ 3 ಗಂಟೆಯೊಳಗೆ ಸಲಹೆ-ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ಬಿಸಿಐ ಪ್ರಸ್ತಾಪಿಸಿರುವ ಒಟ್ಟು 22,500 ರೂ. ನೋಂದಣಿ ಶುಲ್ಕದಲ್ಲಿ 18,000 ರೂಪಾಯಿಯನ್ನು ಸಂಬಂಧಿತ ರಾಜ್ಯ ಬಾರ್ ಕೌನ್ಸಿಲ್ ಗೆ ಹಾಗೂ 4,500 ರೂ.ಅನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ ಪಾವತಿಸಬೇಕಾಗುತ್ತದೆ. ಪ್ರಸ್ತುತ Advocates Act ಂಛಿಣ, 1961ರ ಅಡಿಯಲ್ಲಿ ಇರುವ 750 ರೂ.ಮಿತಿಯನ್ನು ತಿದ್ದುಪಡಿ ಮಾಡುವ ಉದ್ದೇಶದಿಂದ ಈ ಪ್ರಸ್ತಾವವನ್ನು ತರಲಾಗಿದೆ.
ಕಳೆದ ಮೂರು ದಶಕಗಳಿಂದ ನೋಂದಣಿ ಶುಲ್ಕ ಪರಿಷ್ಕರಣೆಯಾಗಿಲ್ಲ
ನೋಂದಣಿ ಶುಲ್ಕ ಏರಿಕೆ ಪ್ರಸ್ತಾವನೆಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ನೀಡಿರುವ ಕಾರಣವೇನೆಂದರೇ ಕಳೆದ ಮೂರು ದಶಕಗಳಿಂದ ನೋಂದಣಿ ಶುಲ್ಕದಲ್ಲಿ ಯಾವುದೇ ಪರಿಷ್ಕರಣೆ ನಡೆದಿಲ್ಲ. ಸುಪ್ರೀಂ ಕೋರ್ಟ್ನ ಇತ್ತೀಚಿನ ತೀರ್ಪುಗಳು ಹಾಗೂ ಹೆಚ್ಚುತ್ತಿರುವ ಆಡಳಿತಾತ್ಮಕ ವೆಚ್ಚ, ಕಾನೂನು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಅಗತ್ಯ ಮತ್ತು ವೃತ್ತಿಪರ ಮಾನದಂಡಗಳನ್ನು ಬಲಪಡಿಸುವ ಉದ್ದೇಶದಿಂದ ಶುಲ್ಕ ಪರಿಷ್ಕರಣೆ ಅಗತ್ಯವಾಗಿದೆ ಎಂದು ಕರಡು ಮಸೂದೆಯಲ್ಲಿ ಉಲ್ಲೇಖಿಸಿದೆ.
ಕರಡು ಮಸೂದೆಯಲ್ಲಿ ಕೇವಲ ನೋಂದಣಿ ಶುಲ್ಕ ಹೆಚ್ಚಳವಷ್ಟೇ ಅಲ್ಲದೆ, ಕಾನೂನು ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಹೊಸ ನಿಯಮಗಳು, ಕಾನೂನು ಕಾಲೇಜುಗಳ ಮೇಲೆ ಕಠಿಣ ಮೇಲ್ವಿಚಾರಣೆ, ವಕೀಲರಿಗೆ ನಿರಂತರ ವೃತ್ತಿಪರ ತರಬೇತಿ, ಪ್ರವೇಶ ಮತ್ತು ವೃತ್ತಿಪರ ಅರ್ಹತೆ ಸಂಬಂಧಿತ ಸುಧಾರಣೆಗಳಂತಹ ಹಲವು ಕ್ರಮಗಳನ್ನು ಬಿಸಿಐ ಪ್ರಸ್ತಾಪಿಸಿದೆ.
ಶುಲ್ಕ ಏರಿಕೆಯಾದರೇ. ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ ಈ ಮಧ್ಯೆ ನೋಂದಣಿ ಶುಲ್ಕ 750 ರೂ. ನಿಂದ ನೇರವಾಗಿ ರೂ. 22,500ಕ್ಕೆ ಏರಿಕೆ ಮಾಡಿದರೇ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗಲಿದ್ದು ಈ ಹಿನ್ನೆಲೆಯಲ್ಲಿ ಪ್ರಸ್ತಾವವು ದೇಶದಾದ್ಯಂತ ಕಾನೂನು ವಿದ್ಯಾರ್ಥಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ.
ಇದು ಸದ್ಯ ಕರಡು ಮಸೂದೆ (Draft Bill) ಮಾತ್ರವಾಗಿದ್ದು, ಸಾರ್ವಜನಿಕರ ಅಭಿಪ್ರಾಯಗಳನ್ನು ಪರಿಗಣಿಸಿದ ಬಳಿಕ ಕೇಂದ್ರ ಸರ್ಕಾರ ಮತ್ತು ಸಂಸತ್ತಿನ ಅನುಮೋದನೆಯೊಂದಿಗೆ ಅಂತಿಮ ಕಾನೂನಾಗಿ ಜಾರಿಗೆ ಬಂದಾಗ ಮಾತ್ರ ಈ ಶುಲ್ಕ ಅನ್ವಯವಾಗಲಿದ್ದು ನೋಂದಣಿ ಶುಲ್ಕ ಪರಿಷ್ಕರಣೆಯೋ ಇಲ್ಲವೋ ಕಾನೂನು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಗುತ್ತದೆಯೋ ಇಲ್ಲವೋ ಕಾದು ನೋಡಬೇಕಾಗಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
