11/05/2026

Law Guide Kannada

Online Guide

ಕೋಟ್ ಗೌನ್ ಧರಿಸದೆ ಹಾಜರು: ಯುವ ವಕೀಲೆಗೆ ತೀವ್ರ ತರಾಟೆ ತೆಗೆದಕೊಂಡ ಕೋರ್ಟ್

ಬೆಂಗಳೂರು: ಗೌನ್ ಧರಿಸದೆ ನ್ಯಾಯಪೀಠದ ಮುಂದೆ ಹಾಜರಾಗಿ ಕಲಾಪದಲ್ಲಿ ಭಾಗವಹಿಸಿದ ಯುವ ಮಹಿಳಾ ವಕೀಲರೊಬ್ಬರಿಗೆ ಕರ್ನಾಟಕ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ನ್ಯಾಯಪೀಠದ ಮುಂದೆ ಗೌನ್ ಧರಿಸದೆ ಹಾಜರಾದ ಕಿರಿಯ ವಕೀಲೆಯೊಬ್ಬರನ್ನು ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ನ್ಯಾಯಪೀಠವು ಕ್ಲಾಸ್ ತೆಗೆದುಕೊಂಡಿತು.
ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಕೋರಿ ಗೌನ್ ಧರಿಸದ ಮಹಿಳಾ ಯುವ ವಕೀಲರು ನ್ಯಾ. ಶ್ರೀಶಾನಂದ ಅವರ ಪೀಠದ ಮುಂದೆ ಮೆಮೊ ಸಲ್ಲಿಸಲು ಮುಂದಾದರು. ಈ ವೇಳೆ ಯುವ ವಕೀಲೆ ಕೋಟ್ ಗೌನ್ ಧರಿಸದ್ದನ್ನ ಗಮನಿಸಿದ ನ್ಯಾಯಾಪೀಠವು “ನಿಮ್ಮ ಕೋಟ್ ಗೌನ್ ಎಲ್ಲಿ? ಅದೇ ಇಲ್ಲ? ಗೌನ್ ಇಲ್ಲದೇ ನ್ಯಾಯಾಲಯದ ಮುಂದೆ ಬರಲು ನಿಮಗೆ ಎಷ್ಟು ಧೈರ್ಯ?” ಎಂದು ಅಸಮಾಧಾನವನ್ನು ವ್ಯಕ್ತಪಡಿಸಿತು.

“ನಿಮ್ಮ ಹಿರಿಯ ವಕೀಲರು ಯಾರು? ಮೆಮೊ ಪಡೆದುಕೊಂಡು ಆ ಮೆಮೋವನ್ನು ರಿಜೆಕ್ಟ್ ಮಾಡಿ ಅದನ್ನು ಏನು ನಿಮ್ಮ ಕತೆ? ಗೌನ್ ಇಲ್ಲದೇ ನ್ಯಾಯಾಲಯದ ಮುಂದೆ ಬರಲು ಎಷ್ಟು ಧೈರ್ಯ ನಿಮಗೆ? ಕೋರ್ಟ್ ಅಂದರೆ ಅಷ್ಟೊಂದು ತಮಾಷೆ ಎಂದುಕೊಂಡಿದ್ದೀರಾ? ನಿಮ್ಮ ಗೌನ್ ಎಲ್ಲಿ? ಆಫೀಸಿನಲ್ಲೇ ಬಿಟ್ಟು ಬಂದ್ರಾ?” ಎಂದು ನ್ಯಾಯಮೂರ್ತಿಗಳು ಕಿರಿಯ ವಕೀಲರ ವಿರುದ್ದ ಗರಂ ಆದರು.

“ಯಾವ ವರ್ಷದಲ್ಲಿ ನೋಂದಣಿಯಾಗಿದ್ದೀರಿ. ನೋಂದಣಿಯಾಗಿ ಮೂರು-ನಾಲ್ಕು ವರ್ಷವಾಗಿದೆ. ಆದರೂ ಇದೆಂತಹ ಚೇಷ್ಟೆ. ಅವರ ಹೆಸರು ತೆಗೆದುಕೊಂಡು, ಅವರ ನೋಂದಣಿ ರದ್ದು ಮಾಡಲು ವಕೀಲರ ಪರಿಷತ್ಗೆ ಹೇಳಿ” ಎಂದು ಕೋರ್ಟ್ ಅಧಿಕಾರಿಗೆ ನ್ಯಾಯಾಪೀಠ ಸೂಚಿಸಿತು.

ನ್ಯಾಯಾಧೀಶರ ಆದೇಶ ತರಾಟೆಯಿಂದ ಬೆದರಿದ ಯುವ ವಕೀಲೆಯು ಬೇಷರತ್ ಕ್ಷಮೆ ಕೋರಿದರು. ಇದನ್ನು ಪರಿಗಣಿಸಿ ಪೀಠವು ಅವರ ತುರ್ತು ವಿಚಾರಣೆಗೆ ಕೋರಿದ್ದ ಮೆಮೊವನ್ನು ಆಧರಿಸಿ ಅರ್ಜಿಯ ವಿಚಾರಣೆಯನ್ನು ಮುಂದೂಡಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.