23/04/2026

Law Guide Kannada

Online Guide

ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಶಾಖಾಧಿಕಾರಿ ಹುದ್ದೆ ನೇಮಕಾತಿ: ತಕ್ಷಣವೇ ಅರ್ಜಿ ಸಲ್ಲಿಸಿ

ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ 17 ಜಿಲ್ಲೆಗಳಲ್ಲಿ ಖಾಲಿ ಇರುವ ಶಾಖಾಧಿಕಾರಿ ಹುದ್ದೆಯನ್ನು ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಅದರ ವ್ಯಾಪ್ತಿಯ ಕಛೇರಿಯಲ್ಲಿ ಖಾಲಿ ಇರುವ 17 ಶಾಖಾಧಿಕಾರಿಗಳ ಹುದ್ದೆಗಳಿಗೆ ಉಳಿದ ಮೂಲ ವೃಂದದಡಿಯಲ್ಲಿ ಮತ್ತು 02 ಶಾಖಾಧಿಕಾರಿ ಹುದ್ದೆಗಳಿಗೆ ಕಲ್ಯಾಣ ಕರ್ನಾಟಕ ವೃಂದದಡಿಯಲ್ಲಿ ನೇರ ನೇಮಕಾತಿ ಅರ್ಜಿಯನ್ನು ಸಲ್ಲಿಸಬಹುದೆಂದು ಅಧಿಸೂಚನೆ ಹೊರಡಿಸಲಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ15.05.2026 ಆಗಿರುತ್ತದೆ.

ಖಾಲಿ ಹುದ್ದೆಗಳ ವರ್ಗೀಕರಣ, ನೇಮಕಾತಿ ವಿಧಾನ, ವೇತನ ಶ್ರೇಣಿ, ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನ, ಅರ್ಹತೆ, ವಯಸ್ಸಿನ ಮಿತಿ, ಅರ್ಜಿ ಶುಲ್ಕ, ಸೇವಾ ಪರಿವೀಕ್ಷಣಾ ಅವಧಿ, ಆಯ್ಕೆ ವಿಧಾನ, ಸಾಮಾನ್ಯ ಸೂಚನೆಗಳು, ಅರ್ಹತಾ ಮಾನದಂಡಗಳು ಮೊದಲಾದ ವಿವರಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.

ಶಾಖಾಧಿಕಾರಿ ಹುದ್ದೆಗಳ ನೇರ ನೇಮಕಾತಿಗೆ ಆನ್ ಲೈನ್ ಮೂಲಕ ದಿನಾಂಕ:16,04,2026 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, 15.05.2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಮೀಸಲಾತಿ ಇತ್ಯಾದಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಪ್ರಾಧಿಕಾರದ https://cetonline.karnataka.gov.in/kea/indexnew ವೆಬ್ ಸೈಟ್ ಕಾನೂನು ಸೇವೆಗಳ ಪ್ರಾಧಿಕಾರದ ವೆಬ್ ಸೈಟ್: https://karnataka.nalsa.gov.in/ ಸಂಪರ್ಕಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಈ ತಕ್ಷಣವೇ ಅರ್ಜಿ ಸಲ್ಲಿಸಬಹುದಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.