ಗೌಪ್ಯ ಮಾಹಿತಿ: ವಕೀಲರು ಎದುರಾಳಿಯಾಗಿ ಮಾಜಿ ಕಕ್ಷಿದಾರರ ಮಾಹಿತಿ ಬಳಕೆ ಮಾಡುವಂತಿಲ್ಲ- ಸುಪ್ರೀಂಕೋರ್ಟ್
ತನ್ನ ಕಕ್ಷಿದಾರ (ಕ್ಲೈಂಟ್) ತನಗೆ ಎದುರಾಳಿಯಾಗಿದ್ದಾರೆ ಎಂಬ ಕಾರಣಕ್ಕೆ ವಕೀಲರು ಕ್ಲೈಂಟ್ನಿಂದ ಪಡೆದ ಗೌಪ್ಯ ಮಾಹಿತಿಯನ್ನು ಅವರ ವಿರುದ್ಧ ಬಳಸಲು ಸಾಧ್ಯವಿಲ್ಲ. ಎದುರಾಳಿಯಾಗಿ ಮಾಜಿ ಕಕ್ಷಿದಾರರ ಮಾಹಿತಿಯನ್ನು ಬಳಕೆ ಮಾಡುವುದು ವಕೀಲರ ಹಕ್ಕಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ರಾ ಮತ್ತು ವಿಜಯ್ ಬಿಡೋಯಿ ಅವರಿದ್ದ ಪೀಠ ಈ ತೀರ್ಪು ನೀಡಿದೆ. ವಕೀಲರು ತಮ್ಮ ಕ್ಲೈಂಟ್ ನಿಂದ (ಕಕ್ಷಿದಾರ) ಪಡೆದ ಗೌಪ್ಯ ಮಾಹಿತಿಯನ್ನು ರಕ್ಷಿಸುವ ಕರ್ತವ್ಯವು. ನಂತರ ಕ್ಲೈಂಟ್ ವಕೀಲರ ವಿರುದ್ಧ ನಡೆದುಕೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಅವಲಂಬಿತವಾಗಿರುವುದಿಲ್ಲ. ಕ್ಲೈಂಟ್ ನಂತರ ವಕೀಲರ ಎದುರಾಳಿಯಾಗಿದ್ದರೂ ಸಹ, ವಕೀಲರಿಗೆ ಆ ಗೌಪ್ಯ ಮಾಹಿತಿಯನ್ನು ಅವರ ವಿರುದ್ಧ ಬಳಸಲು ಯಾವುದೇ ಹಕ್ಕು ಇರುವುದಿಲ್ಲ ಎಂದು ನ್ಯಾಯಪೀಠವು ಹೇಳಿದೆ.
ಈ ಹಿನ್ನೆಲೆಯಲ್ಲಿ. ವಕೀಲರ ಹೆಸರನ್ನು ಎರಡು ವರ್ಷಗಳ ಕಾಲ ವಕೀಲರ ನೋಂದಣಿ ಪಟ್ಟಿಯಿಂದ ತೆಗೆದುಹಾಕುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ನ್ಯಾಯಪೀಠವು ಎತ್ತಿಹಿಡಿದಿದೆ. ಇದೇ ವೇಳೆ, ಶಿಕ್ಷೆಯನ್ನು ಇನ್ನಷ್ಟು ಹೆಚ್ಚಿಸುವಂತೆ ಕ್ಲೈಂಟ್ ಮಾಡಿದ್ದ ಮನವಿಯನ್ನು ತಿರಸ್ಕರಿಸಿ, ಎರಡೂ ಪಕ್ಷಗಳ ಮೇಲೆ ತಲಾ 25 ಲಕ್ಷ ವೆಚ್ಚ ವಿಧಿಸಿದೆ.
ಪ್ರಕರಣದ ಹಿನ್ನೆಲೆ
ಅಪೀಲುದಾರರು 2013 ಮತ್ತು 2014ರ ಅವಧಿಯಲ್ಲಿ ಕೆಲವು ಕಾಲ ಪ್ರತಿವಾದಿ ವಕೀಲರನ್ನು ತಮ್ಮ ವಕೀಲರಾಗಿ ನೇಮಿಸಿಕೊಂಡಿದ್ದರು. ಕಾನೂನು ಸಹಾಯ ಪಡೆಯುವ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಹಾಗೂ ಹಿರಿಯ ಪೊಲೀಸ್ ಅಧಿಕಾರಿಯ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ಕೆಲವು ಗೌಪ್ಯ ಮಾಹಿತಿಗಳನ್ನು ವಕೀಲರೊಂದಿಗೆ ಹಂಚಿ ಕೊಂಡಿದ್ದಾಗಿ ಅವರು ಶಿಸ್ತು ಪ್ರಾಧಿಕಾರದ ಮುಂದೆ ತಿಳಿಸಿದ್ದರು. ವಕೀಲರ ಕಚೇರಿಯಿಂದ ಒಂದು ಕಾನೂನು ನೋಟಿಸ್ ಕಳುಹಿಸಲಾಗಿತ್ತು. ಅದನ್ನು ತಮ್ಮ ಅನುಮತಿಯಿಲ್ಲದೆ ಕಳುಹಿಸಲಾಗಿದೆ ಎಂದು ಅಪೀಲುದಾರರು ಆರೋಪಿಸಿದರು. ಆದರೆ, ಆ ನೋಟಿಸ್ ತಮ್ಮ ಕ್ಲೈಂಟ್ ಒದಗಿಸಿದ್ದ ಕರಡು ಆಧಾರದ ಮೇಲೆ ಮತ್ತು ಅವರ ಸೂಚನೆಯಂತೆ ಕಳುಹಿಸಲಾಗಿತ್ತು ಎಂದು ವಕೀಲರು ವಾದಿಸಿದರು. ನಂತರ ಅಪೀಲುದಾರರು ಪೊಲೀಸ್ ಅಧಿಕಾರಿಯ ವಿರುದ್ಧ FIR ದಾಖಲಿಸಿದರು. ಅದರಲ್ಲಿ ಪ್ರತಿವಾದಿ ವಕೀಲರೂ ಆ ಪೊಲೀಸ್ ಅಧಿಕಾರಿಯ ಪ್ರಭಾವಕ್ಕೆ ಒಳಗಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಎಂದು ಹೆಸರಿಸಲಾಗಿತ್ತು.
ಅಪೀಲುದಾರರು Advocates Act, 1961ರ Section 35 ಅಡಿಯಲ್ಲಿ ವೃತ್ತಿಪರ ದುರ್ವತ್ರನೆ ಅರೋಪಿಸಿ ದೂರು ಸಲ್ಲಿಸಿದರು. ಬಾರ್ ಕೌನ್ಸಿಲ್ ಆಫ್ ಇಂಡಿಯಾ, ಅನುಮತಿಯಿಲ್ಲದೆ ಕಾನೂನು ನೋಟಿಸ್ ನೀಡುವುದು, ಗೌಪ್ಯ ಮಾಹಿತಿಯನ್ನು ಬಹಿರಂಗಪಡಿಸಿ ಮಾಧ್ಯಮಗಳಲ್ಲಿ ದೂರುದಾರರನ್ನು ಗುರುತಿಸುವಂತೆ ಮಾಡುವುದು ಹಾಗೂ ಅವರ ವಿರುದ್ಧ ಅವಹೇಳನಕಾರಿ ಸಾರ್ವಜನಿಕ ಹೇಳಿಕೆಗಳನ್ನು ನೀಡುವುದು ವೃತ್ತಿಪರ ದುರ್ವತ್ರನೆ ಎಂದು ತೀರ್ಮಾನಿಸಿತು.
ಅದರಂತೆ, ಪ್ರತಿವಾದಿ ವಕೀಲರ ಹೆಸರನ್ನು ಎರಡು ವರ್ಷಗಳ ಕಾಲ ವಕೀಲರ ನೋಂದಣಿ ಪಟ್ಟಿಯಿಂದ ತೆಗೆದುಹಾಕಲು, ಅಪೀಲುದಾರರಿಗೆ 3 ಲಕ್ಷ ಪಾವತಿಸಲು ಹಾಗೂ 22 ಲಕ್ಷವನ್ನು Bar Council of India walfare fund ge ಠೇವಣಿ ಇಡಲು ಸೂಚಚಿಸಿತು. ಇದನ್ನು ಪ್ರಶ್ನಿಸಿ ವಕೀಲರು ಸುಪ್ರೀಂ ಕೋರ್ಟ್ ಮೊರೆ ಹೋದರು. ಹೋದರು. ಮತ್ತೊಂದೆಡೆ, ಅಪೀಲುದಾರರು ಶಿಕ್ಷೆಯನ್ನು ಇನ್ನಷ್ಟು ಹೆಚ್ಚಿಸಿ, ಶಾಶ್ವತವಾಗಿ ವಕೀಲ ವೃತ್ತಿಯಿಂದ ತೆಗೆದುಹಾಕಬೇಕು ಮತ್ತು ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಅಂತಿಮ ತೀರ್ಪು
ವಕೀಲರ ಹೆಸರನ್ನು ಎರಡು ವರ್ಷಗಳ ಕಾಲ ವಕೀಲರ ನೋಂದಣಿ ಪಟ್ಟಿಯಿಂದ ತೆಗೆದುಹಾಕುವ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ವೃತ್ತಿಪರ ದುರ್ವತ್ರನೆ ನಡೆದಿದೆ ಎಂಬ ತೀರ್ಮಾನವನ್ನು ಸಮರ್ಧಿಸಿದೆ. ಕ್ರೈಂಟ್ ಕೇಳಿದ್ದ ಶಿಕ್ಷೆ ಹೆಚ್ಚಳವನ್ನು ತಿರಸ್ಕರಿಸಿದೆ. ವಕೀಲರು ಸಲ್ಲಿಸಿದ್ದ ಮೇಲ್ಮನವಿಯನ್ನೂ ತಿರಸ್ಕರಿಸಿದೆ. ವರ್ಗಾಯಿಸಲಾದ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನೂ ವಜಾಗೊಳಿಸಿದೆ.
ಅಪೀಲುದಾರರು ಮತ್ತು ಪ್ರತಿವಾದಿ ವಕೀಲರು ತಲಾ 5 ಲಕ್ಷವನ್ನು ನಾಲ್ಕು ವಾರಗಳೊಳಗೆ Supreme Court Legal Services Committeeಗೆ ಪಾವತಿಸಬೇಕು ಎಂದು ಆದೇಶಿಸಿದೆ. ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿದೆ.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
