23/04/2026

Law Guide Kannada

Online Guide

ಕಕ್ಷಿದಾರರ ಪ್ರಕರಣಗಳಿಗೆ ವಕೀಲರೇ RTI ನಡಿ ಮಾಹಿತಿ ಕೋರುವಂತಿಲ್ಲ- ಸಿಐಸಿ

ನವದೆಹಲಿ: ‘ಕಕ್ಷಿದಾರರ ಪ್ರಕರಣಗಳಿಗೆ ಸಂಬಂಧಿಸಿದಂತೆ ವಕೀಲರು ಮಾಹಿತಿ ಹಕ್ಕು ಆಯೋಗದ (ಆರ್ಟಿಐ) ಅಡಿಯಲ್ಲಿ ಮಾಹಿತಿ ಕೇಳುವಂತಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗವು (ಸಿಐಸಿ) ತಿಳಿಸಿದೆ.

ಹರಿಯಾಣದ ಜವಾಹರ್ ನವೋದಯ ವಿದ್ಯಾಲಯಕ್ಕೆ ಹಣ್ಣು ಹಾಗೂ ತರಕಾರಿ ಪೂರೈಕೆ ಗುತ್ತಿಗೆ ರದ್ದತಿ ಕುರಿತು ಉಂಟಾದ ವಿವಾದಕ್ಕೆ ಸಂಬಂಧಿಸಿದಂತೆ ವಕೀಲರು ಎರಡನೇ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯನ್ನು ವಜಾಗೊಳಿಸಿದ ಸಿಐಸಿ ಆಯುಕ್ತ ಸುಧಾರಾಣಿ ರೆಲಂಗಿ ಅವರು, ‘ಕಕ್ಷಿದಾರರ ಪ್ರಕರಣಗಳಲ್ಲಿ ವಕೀಲರೇ ಟಿಐನಡಿ ಮಾಹಿತಿ ಕೋರುವಂತಿಲ್ಲ. ಪಾರದರ್ಶಕತೆ ಕಾನೂನನ್ನು ಈ ರೀತಿ ಬಳಸುವುದರಿಂದ, ಅದರ ಮೂಲ ಉದ್ದೇಶವೇ ವಿಫಲವಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಪ್ರತಿವಾದಿಯು ಸಾರ್ವಜನಿಕ ಪ್ರಾಧಿಕಾರಕ್ಕೆ ತರಕಾರಿ ಹಾಗೂ ಹಣ್ಣು ಪೂರೈಸುತ್ತಿದ್ದ ಅವರ ಸಹೋದರನ ಪರವಾಗಿ ಮಾಹಿತಿ ಕೋರಿದ್ದರು. ಪೂರೈಕೆದಾರರೇ, ಯಾವ ಕಾರಣಕ್ಕಾಗಿ ಮಾಹಿತಿ ಕೋರಿರಲಿಲ್ಲ ಎಂಬುದರ ಕುರಿತು ಅರ್ಜಿದಾರರು ಸರಿಯಾದ ವಿವರಣೆ ನೀಡಿಲ್ಲ. ಮೇಲ್ಮನವಿದಾರರು ತನ್ನ ಕಕ್ಷಿದಾರರ ಪರವಾಗಿ ಮಾಹಿತಿ ಕೋರಿದ್ದು, ಅದಕ್ಕೆ ಕಾನೂನು ಅನುಮತಿ ನೀಡುವುದಿಲ್ಲ’ ಎಂದು ತಿಳಿಸಿದರು.

‘ವಕೀಲರಾಗಿ ಕೆಲಸ ಮಾಡುತ್ತಿರುವವರು ತಮ್ಮ ಕಕ್ಷಿದಾರರ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಆರ್ಟಿಐನಡಿ ಕೋರುವಂತಿಲ್ಲ’ ಮದ್ರಾಸ್ ಹೈಕೋರ್ಟ್ ತೀರ್ಪು ಇದೇ ವೇಳೆ ಉಲ್ಲೇಖಿಸಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.