ರೆಡ್ ಕಾರ್ನರ್ ನೋಟಿಸ್ ನೀಡುವಂತೆ ಆದೇಶಿಸಲು ಮ್ಯಾಜಿಸ್ಟ್ರೇಟ್ ಗೆ ಕಾನೂನು ಬದ್ಧ ಅಧಿಕಾರ ವ್ಯಾಪ್ತಿ ಇಲ್ಲ.
ಬೆಂಗಳೂರು: ರೆಡ್ ಕಾರ್ನರ್ ನೋಟಿಸ್ (RCN) ನೀಡುವಂತೆ ಆದೇಶಿಸಲು ಹೊರಡಿಸಲು ವಿಚಾರಣಾ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಗಳಿಗೆ ಕಾನೂನುಬದ್ಧ ಅಧಿಕಾರ ವ್ಯಾಪ್ತಿ ಇಲ್ಲವೆಂದು ಹೈಕೋರ್ಟ್ ತಿಳಿಸಿದೆ.
ಅರ್ಜಿದಾರರ ವಿರುದ್ಧ 3ನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಹೊರಡಿಸಿದ್ದ ರೆಡ್ ಕಾರ್ನರ್ ನೋಟಿಸ್ ಮತ್ತು ಓಪನ್ ಡೇಟೆಡ್ ವಾರಂಟ್ ಅನ್ನು ಹೈಕೋರ್ಟ್ ನ್ಯಾಯಮೂರ್ತಿ ಎನ್ ಆರ್ ಕೃಷ್ಣ ಅವರಿದ್ದ ನ್ಯಾಯಪೀಠ ರದ್ದುಗೊಳಿಸಲಾಗಿದೆ.
ದುಬೈನಲ್ಲಿ ನೆಲೆಸಿರುವ ಪಿ.ಜಿ. ಜೋಸೆಫ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ಸಿಆರ್ಪಿಸಿ ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಿಗೆ ಇಂತಹ ನೋಟಿಸ್ ನೀಡಲು ಅಧಿಕಾರವಿಲ್ಲ. ಅರ್ಜಿದಾರರು ಪ್ರಸ್ತುತ ವಿದೇಶ ದಲ್ಲಿರುವುದರಿಂದ, ಅವರಿಗೆ ಕಾನೂನು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡುವ ನಿಟ್ಟಿನಲ್ಲಿ ರೆಡ್ ಕಾರ್ನರ್ ನೋಟಿಸ್ ರದ್ದುಗೊಳಿಸಲಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಹಾಗೆಯೇ ಅರ್ಜಿದಾರರು 27ರಂದು ವಿಚಾರಣಾ ನ್ಯಾಯಾಯಕ್ಕೆ ಹಾಜರಾಗಬೇಕು ಎಂಬ ಷರತ್ತು ವಿಧಿಸಲಾಗಿದ್ದು, ಅರ್ಜಿದಾರರು ಭಾರತಕ್ಕೆ ಮರಳಲು ಅನುಕೂಲವಾಗುವಂತೆ ದುಬೈ ಪೊಲೀಸ್ ಮತ್ತು ಅಲ್ಲಿನ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲು ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಹೈಕೋರ್ಟ್ ನ್ಯಾಯಪೀಠವು ನಿರ್ದೇಶನ ನೀಡಿದೆ.
ಹುಳಿಮಾವು ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧಿಸಿಂತೆ 2024ರ ಸೆ.9ರಂದು ವಿಚಾರಣಾ ನ್ಯಾಯಾಲಯವು ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಆದೇಶಿಸಿತ್ತು. ಆದರೆ ಈ ಆದೇಶವು ಕಾನೂನುಬಾಹಿರ ಎಂದು ಪಿ.ಜಿ. ಜೋಸೆಫ್ ಹೈಕೋರ್ಟ್ ಮೆಟ್ಟಿಲೇರಿದ್ದರು. ನಿಯಮಗಳ ಪ್ರಕಾರ ಪೊಲೀಸರ ಮನವಿ ಮೇರೆಗೆ ಸಿಬಿಐ ಮಾತ್ರ ರೆಡ್ ಕಾರ್ನರ್ ನೋಟಿಸ್ ಹೊರಡಿಸುವಂತೆ ಇಂಟರ್ ಪೋಲ್ ಅನ್ನು ಕೋರಬಹುದು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
