ಸಕಾರಣ ನೀಡದಿದ್ದರೇ ಹಿಂಪಡೆದ ಅಮಲ್ದಾರಿ ಪ್ರಕರಣಗಳ ಮತ್ತೆ ಸಲ್ಲಿಕೆಗೆ ಅವಕಾಶ ನೀಡಬಾರದು – ಸುಪ್ರೀಂಕೋರ್ಟ್
ನವದೆಹಲಿ: ಸಕಾರಣವಿಲ್ಲದೆ ಹಿಂಪಡೆದ ಅಮಲ್ದಾರಿ ಪ್ರಕರಣಗಳನ್ನು ಮತ್ತೆ ಸಲ್ಲಿಸಲು ಅವಕಾಶ ನೀಡಬಾರದು. ಸಮರ್ಪಕವಾದ ಕಾರಣವಿದ್ದಾಗ ಮಾತ್ರ ಅಮಲ್ದಾರಿ ಪ್ರಕರಣಗಳನ್ನು ಮತ್ತೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
“ಪೆರಿಯಾಮ್ಮಳ್ (ಮೃತರು) ಮತ್ತಿತರರು ವಿರುದ್ಧ ವಿ. ರಾಜಮಣಿ ಮತ್ತಿತರರು” ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜೆ. ಬಿ. ಪರ್ದೀವಾಲಾ ಮತ್ತು ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ. ಸಮರ್ಪಕವಾದ ಕಾರಣ ನೀಡದ ಹೊರತು ನ್ಯಾಯಾಲಯದಿಂದ ಹಿಂದಕ್ಕೆ ಪಡೆದ ಅಮಲ್ನಾರಿ ಪ್ರಕರಣಗಳನ್ನು ಮತ್ತೆ ಸಲ್ಲಿಸಲು ಅವಕಾಶ ನೀಡಬಾರದು. ಅಮಲ್ದಾರಿ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದು ಮತ್ತು ಹೊಸದಾಗಿ ಸಲ್ಲಿಸುವುದರಿಂದ ಡಿಕ್ರಿಗಳ ಜಾರಿಯಲ್ಲಿ ಅನಗತ್ಯ ವಿಳಂಬವಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಕರ್ನಾಟಕ ರಾಜ್ಯವೊಂದರಲ್ಲೇ 1.41 ಲಕ್ಷ ಅಮಲಾರಿ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದಿದೆ. ಇದು ಗಂಭೀರವಾದ ಪರಿಸ್ಥಿತಿಯಾಗಿದೆ. ಈ ಬಗ್ಗೆ ಜಿಲ್ಲಾ ಮತ್ತು ಕೆಳ ಹಂತದ ನ್ಯಾಯಾಲಯಗಳಿಗೆ ನಿರ್ದೇಶನ ನೀಡಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
